ಮುಂಬೈ: 6 ವರ್ಷದಲ್ಲಿ ಬರೋಬ್ಬರಿ 35 ಕೋಟಿ ರೂ. ಮೌಲ್ಯದ ಚಿನ್ನ ಲೂಟಿ ಮಾಡಿದ್ದ ಕಳ್ಳರು
ಮುಂಬೈನಲ್ಲಿ ಸರಗಳ್ಳದ ಬಗ್ಗೆ 2013ರಲ್ಲಿ 2090 ಪ್ರಕರಣಗಳು, 2014 ರಲ್ಲಿ 1409, 2015 ರಲ್ಲಿ 909, 2016 ರಲ್ಲಿ 445, 2017 ರಲ್ಲಿ 169 ಮತ್ತು 2018 ರಲ್ಲಿ 171 ಪ್ರಕರಣಗಳು ದಾಖಲಾಗಿವೆ.
ಮುಂಬೈ: ಮುಂಬೈ ಪೊಲೀಸರಿಗೆ ಸ್ಕಾಟ್ಲೆಂಡ್ ಯಾರ್ಡ್ನ ಪೋಲಿಸರ ಸ್ಥಾನಮಾನವನ್ನು ನೀಡಲಾಗಿದೆ, ಇದರರ್ಥ ಅಪರಾಧಿಗಳು ಎಲ್ಲೇ ಅಡಗಿದ್ದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ 6 ವರ್ಷದಲ್ಲಿ ಕಳ್ಳರು ಬರೋಬ್ಬರಿ 35 ಕೋಟಿ ರೂ. ಮೌಲ್ಯದ ಚಿನ್ನದ ಸರಗಳನ್ನು ಲೂಟಿ ಮಾಡಿದ್ದು, ಕೇವಲ 20 ಪ್ರತಿಶತದಷ್ಟನ್ನು ಮಾತ್ರ ಹಿಂಪಡೆಯಲು ಸಾಧ್ಯವಾಗಿದೆ ಎಂದು ಆರ್ ಟಿ ಐ ಮೂಲಕ ಬಹಿರಂಗಗೊಂಡಿದೆ.
ಮಾಹಿತಿ ಪ್ರಕಾರ, ಮುಂಬೈ ಪೊಲೀಸರು ಕಳೆದ 6 ವರ್ಷಗಳಲ್ಲಿ 5193 ಪ್ರಕರಣಗಳನ್ನು ದಾಖಲಿಸಿದ್ದಾರೆ, ಇದರಲ್ಲಿ 35 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಮೌಲ್ಯದ ಚಿನ್ನವನ್ನು ಕಳ್ಳರು ಲೂಟಿ ಮಾಡಿದ್ದಾರೆ. ಆದರೆ ಪೊಲೀಸರು ಕೇವಲ 6 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ.
ಮುಂಬೈನಲ್ಲಿ ಸರಗಳ್ಳದ ಬಗ್ಗೆ 2013ರಲ್ಲಿ 2090 ಪ್ರಕರಣಗಳು, 2014 ರಲ್ಲಿ 1409, 2015 ರಲ್ಲಿ 909, 2016 ರಲ್ಲಿ 445, 2017 ರಲ್ಲಿ 169 ಮತ್ತು 2018 ರಲ್ಲಿ 171 ಪ್ರಕರಣಗಳು ದಾಖಲಾಗಿವೆ. ಡೇಟಾವನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ಸರಗಳ್ಳತನದ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಪೊಲೀಸರ ಕಾರ್ಯಾಚರಣೆಯೇ ಇದಕ್ಕೆ ಕಾರಣ ಎಂದೂ ಹೇಳಬಹುದು. ಮುಂಬೈನ ಹೆಚ್ಚಿನ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ ಕಣ್ಗಾವಲು ಇರುವುದರಿಂದಲೂ ಇಂತಹ ಪ್ರಕರಣಗಳು ಕಡಿಮೆಯಾಗಿವೆ ಎನ್ನಲಾಗಿದೆ.