ರಾಜಸ್ತಾನದ ಸ್ಥಳೀಯ ಸಂಸ್ಥೆ ಉಪಚುನಾವಣೆಯಲ್ಲಿ ಪಾರಮ್ಯ ಮೆರೆದ ಕಾಂಗ್ರೆಸ್
ಜೈಪುರ್: ಮಂಗಳವಾರದಂದು ರಾಜಸ್ತಾನದ 26 ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷದ ವಿರುದ್ದ ಮೇಲುಗೈ ಸಾಧಿಸಿದೆ.
ಇಲ್ಲಿ ಜಿಲ್ಲಾ ಪರಿಷತ್,ಪಂಚಾಯತ್ ಮತ್ತು ಮುನ್ಸಿಪಲ್ ವಾರ್ಡ್ ಗಳಿಗಾಗಿ ಗ್ರಾಮೀಣ ಮತ್ತು ನಗರ ಎರಡು ಭಾಗಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಭೂತಪೂರ್ವ ಬೆಂಬಲ ದೊರಕಿದೆ.ರಾಜಸ್ತಾನದ ಕಾಂಗ್ರೆಸ್ ಅಧ್ಯಕ್ಷ ಸಚಿನ ಪೈಲಟ್ ಈ ಸಂಗತಿಯನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಪರಿಷತ್ ನ ಎಲ್ಲ ನಾಲ್ಕು ಸೀಟುಗಳನ್ನು ಗೆದ್ದಿದ್ದು ಮತ್ತು ಒಟ್ಟು 27 ಪಂಚಾಯತಿ ಸಮಿತಿಯ ಸೀಟುಗಳಲ್ಲಿ 16 ಸೀಟುಗಳನ್ನು ತನ್ನದಾಗಿಸಿಕೊಂಡಿದೆ, ಮುನ್ಸಿಪಲ್ ನ 14 ವಾರ್ಡ್ ಗಳಲ್ಲಿ 7 ವಾರ್ಡ್ಗಳನ್ನು ವಶಪಡಿಸಿಕೊಂಡಿದೆ.
ಈ ಚುನಾವಣಾ ಫಲಿತಾಂಶದ ಪ್ರತಿಕ್ರಯಿಸಿರುವ ಸಚಿನ ಪೈಲೆಟ್ ರಾಜಸ್ತಾನದಲ್ಲಿ ಬಿಜೆಪಿಯ ಅಂತಿಮ ದಿನಗಳ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ವಿಶ್ಲೇಷಿಸಿದ್ದಾರೆ.