ನವದೆಹಲಿ: ಮೋದಿ ಸರ್ಕಾರದ ವೈಪಲ್ಯದ ವಿರುದ್ದ ಕಿಡಿ ಕಾರಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಳೆದ ನಾಲ್ಕು ವರ್ಷಗಳಲ್ಲಿ ಗೆಲ್ಲಿಸಿದ ಮತದಾರರ ನಂಬಿಕೆಯನ್ನು ಮೋದಿ ಸರ್ಕಾರ  ಹುಸಿಗೊಳಿಸಿದೆ ಎಂದರು. 


COMMERCIAL BREAK
SCROLL TO CONTINUE READING

ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪುಸ್ತಕ 'ದಿ ಪ್ಯಾರಾಡಾಕ್ಸಿಕಲ್ ಪ್ರೈಮ್ ಮಿನಿಸ್ಟರ್: ನರೇಂದ್ರ ಮೋದಿ ಅಂಡ್ ಹಿಸ್ ಇಂಡಿಯಾ'  ಎನ್ನುವ ಕೃತಿ  ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.



ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಜಿ ಮತ್ತು ಅವರ ಸರಕಾರ ಮತದಾರರ ನಂಬಿಕೆಯನ್ನು ಕಳೆದುಕೊಂಡಿವೆ. ಮೋದಿಯವರು ಎಲ್ಲ ಭಾರತೀಯರಿಗೆ ಪ್ರಧಾನಿ ಎಂದು ಹೇಳುತ್ತಾರೆ  ಆದರೆ ಕೋಮು ಹಿಂಸಾಚಾರ, ಜನಸಮೂಹ ಹತ್ಯೆ ಮತ್ತು ಗೋ ರಕ್ಷಣೆ ಮುಂತಾದ ವಿಷಯಗಳಲ್ಲಿ ಮೌನವಾಗಿರುತ್ತಾರೆ ಎಂದು ಸಿಂಗ್ ಹೇಳಿದರು. ಇದೇ ವೇಳೆ ಸಿಬಿಐ ನಂತಹ ಸಂಸ್ಥೆಗಳಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆಯೂ ಮಾಜಿ ಪ್ರಧಾನಿ ಕಳವಳ ವ್ಯಕ್ತಪಡಿಸಿದರು. 


ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಕುಸಿತದ ಹೊರತಾಗಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಐತಿಹಾಸಿಕ ಮಟ್ಟದಲ್ಲಿವೆ. ಏಕೆಂದರೆ ಮೋದಿ ಸರಕಾರವು ಭಾರತದ ಜನರಿಗೆ ಕಡಿಮೆ ಬೆಲೆಯಲ್ಲಿ ಅನೂಕೂಲ ಮಾಡುವ ಬದಲು ಅತಿಯಾದ ಅಬಕಾರಿ ತೆರಿಗೆಯನ್ನು ವಿಧಿಸುತ್ತಿದೆ ಎಂದು ಮನಮೋಹನ್ ಸಿಂಗ್ ಮೋದಿ ಸರ್ಕಾರದ ಆರ್ಥಿಕ ಕ್ರಮಗಳ ಬಗ್ಗೆ ಕಿಡಿಕಾರಿದರು.