BSNLನ ಈ ಜಬರ್ದಸ್ತ್ ಯೋಜನೆಯಲ್ಲಿ ಪ್ರತಿದಿನ ಸಿಗಲಿದೆ 5GB ಡಾಟಾ
ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಿ ಗ್ರಾಹಕರು STV-551 ಯೋಜನೆಯ ವಿವರಗಳನ್ನು ಪರಿಶೀಲಿಸಬಹುದು.
ನವದೆಹಲಿ: ವರ್ಕ್ ಫ್ರಮ್ ಹೋಂ ಮಾಡುತ್ತಿರುವವರಿಗೆ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ನ ವಿಶೇಷ ಯೋಜನೆ (ಬಿಎಸ್‌ಎನ್‌ಎಲ್ ಎಸ್‌ಟಿವಿ -551 ಯೋಜನೆ) ಅನುಕೂಲಕರವಾಗಿದೆ. ಇದರಲ್ಲಿ ನೀವು ಪ್ರತಿದಿನ 5 GB ಡಾಟಾವನ್ನು ಪಡೆಯಬಹುದು. ಆದರೆ ನೆನಪಿಡಿ ಈ ಯೋಜನೆಯಲ್ಲಿ ಗ್ರಾಹಕರಿಗೆ ಉಚಿತ ಧ್ವನಿ ಕತೆ ಮತ್ತು ಎಸ್ಎಂಎಸ್ ಸೇವೆ ದೊರೆಯುವುದಿಲ್ಲ.
ಒಟ್ಟು 450 ಜಿಬಿ ಡೇಟಾ:
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಯೋಜನೆಯಲ್ಲಿ ರೀಚಾರ್ಜ್ ಮಾಡಿಸುವುದರಿಂದ 90 ದಿನಗಳವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ. ಬಿಎಸ್ಎನ್ಎಲ್ನ STV-551 ಯೋಜನೆ ಅನೇಕ ಟೆಲಿಕಾಂ ವಲಯಗಳಲ್ಲಿ ಲಭ್ಯವಿದೆ. 5 ಜಿಬಿ ದೈನಂದಿನ ಮಿತಿಯ ಕೊನೆಯಲ್ಲಿ ಡೇಟಾ ವೇಗ 80 ಕೆಬಿಪಿಎಸ್ ಆಗಿರುತ್ತದೆ. ಒಟ್ಟಾರೆಯಾಗಿ ಈ ಯೋಜನೆಯಲ್ಲಿ ನೀವು 450 ಜಿಬಿ ಡೇಟಾವನ್ನು ಪಡೆಯುತ್ತೀರಿ. ದೇಶಾದ್ಯಂತ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಇನ್ನೂ ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಅಂತಹ ಗ್ರಾಹಕರು ಭಾರೀ ಡೇಟಾ ಯೋಜನೆಯನ್ನು ಹುಡುಕುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಕಂಪನಿಯು ಈ ಯೋಜನೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ.
ಖಾಸಗಿ ಕಂಪನಿಗಳಿಗೆ ಟಕ್ಕರ್:
ಬಿಎಸ್ಎನ್ಎಲ್ (BSNL) ಈ ಯೋಜನೆಯು ಡೇಟಾದ ವಿಷಯದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. ವಾಸ್ತವವಾಗಿ ಖಾಸಗಿ ಕಂಪೆನಿಗಳು ಅಂತಹ ಬಜೆಟ್‌ನಲ್ಲಿ ಪ್ರತಿದಿನ 5 ಜಿಬಿ ಡೇಟಾ ಯೋಜನೆಯನ್ನು ಹೊಂದಿಲ್ಲ. ಈ ಕಂಪನಿಗಳು ಪ್ರತಿದಿನ ಸರಾಸರಿ 3 ಜಿಬಿ ಡೇಟಾ ಯೋಜನೆಗಳನ್ನು ನೀಡುತ್ತವೆ. ವರದಿಯ ಪ್ರಕಾರ ಇಡೀ ಲಾಕ್‌ಡೌನ್ ಸಮಯದಲ್ಲಿ ದೇಶಾದ್ಯಂತ ಡಾಟಾ ಬಳಕೆಯಲ್ಲಿ ಭಾರಿ ಏರಿಕೆಯಾಗಿದೆ.
ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಿ ಗ್ರಾಹಕರು ಎಸ್‌ಟಿವಿ -551 ಯೋಜನೆಯ ವಿವರಗಳನ್ನು ಪರಿಶೀಲಿಸಬಹುದು. ನಿಮ್ಮ ವಲಯದಲ್ಲಿ ಈ ಯೋಜನೆ ತೋರಿಸದಿದ್ದರೆ ನಿಮ್ಮ ವಲಯದಲ್ಲಿ ಈ ಯೋಜನೆ ಲಭ್ಯವಿಲ್ಲ ಎಂದರ್ಥ. ಈ ಡೇಟಾ ರೀಚಾರ್ಜ್ ಯೋಜನೆ ವರ್ಕ್ ಫ್ರಮ್ ಹೋಂ (Work from Home) ಮಾಡುವವರಿಗೆ ತುಂಬಾ ಉಪಯುಕ್ತವಾಗಿದೆ.