ಗುವಾಹಟಿ: ಅಸ್ಸಾಂ ವಿಧಾನಸಭೆಯಲ್ಲಿ ಇತ್ತೀಚೆಗಷ್ಟೇ ಅಂಗೀಕರಿಸಲಾದ ವಿಧಯೇಕವು ಜನಸಾಮಾನ್ಯರ ನಡುವೆ ಚರ್ಚೆಯ ವಿಷಯವಾಗಿ ಉಳಿದಿದೆ. ಈ ವಿಧಯೇಕದ ಅಡಿಯಲ್ಲಿ ರಾಜ್ಯ ಸರ್ಕಾರದ ಯಾವುದೇ ಉದ್ಯೋಗಿ ತನ್ನ ಹೆತ್ತವರನ್ನು ನೋಡಿಕೊಳ್ಳದೆ ಇದ್ದರೆ, ಅವರ ಮಾಸಿಕ ವೇತನದ ಶೇ. 10 ರಷ್ಟನ್ನು ಕಡಿತಗೊಳಿಸಲಾಗುತ್ತದೆ. ಕಡಿತಗೊಳಿಸಿದ ಹಣವನ್ನು ಸಂಬಂಧಿತ ವ್ಯಕ್ತಿಗೆ ನೀಡಲಾಗುತ್ತದೆ ಎಂದು ವಿಧಯೇಕವು ತಿಳಿಸುತ್ತದೆ. 


COMMERCIAL BREAK
SCROLL TO CONTINUE READING

ಈಗ ಮತ್ತೊಂದು ಮಸೂದೆಯನ್ನು ಸರ್ಕಾರ ಅಂಗೀಕರಿಸಿದೆ. ಈ ಮಸೂದೆಯ ನಂತರ, ಜನರು ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಮತ್ತು ಸ್ಥಳೀಯ ಚುನಾವಣೆಗಳಲ್ಲಿ ನಿಲ್ಲುವ ಸಲುವಾಗಿ ಹೊಸ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ.


ಅಸ್ಸಾಂನ ಈ ಹೊಸ ಮಸೂದೆಯ ಪ್ರಕಾರ ಯಾರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೋ ಅವರಿ ಶಾಸನಸಭೆಯ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ. ಅಲ್ಲದೆ ಸರ್ಕಾರದ ಉದ್ಯೋಗವನ್ನು ಪಡೆಯಲೂ ಸಹ ಇದೇ ನಿಯಮ ಅನ್ವಯವಾಗುತ್ತದೆ ಎಂದು ಹೇಳುತ್ತದೆ. ಅಸ್ಸಾಂ ಸರ್ಕಾರದ ಹೊಸ ಜನಸಂಖ್ಯಾ ನೀತಿಯಡಿ ಈ ಬದಲಾವಣೆಯನ್ನು ಮಾಡಲಾಗಿದೆ. ಸೆ.15ರಂದು ಅಸ್ಸಾಂ ವಿಧಾನಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಯ ನಂತರ ಈ ಹೊಸ ಕಾನೂನು ಜಾರಿಗೆ ಬಂದಿದೆ.


ಅಸ್ಸಾಂ ನ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ಹೇಮಂತ್ ಬಿಸ್ವಾಸ್, ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸುತ್ತಾ ಶೀಘ್ರದಲ್ಲೇ ಈ ನೂತನ ಕಾನೂನನ್ನು ರಾಜ್ಯ ಸರ್ಕಾರದ ಎಲ್ಲಾ ಸೇವಾ ಕ್ಷೇತ್ರಗಳಲ್ಲೂ ಜಾರಿಗೆ ತರಲಾಗುವುದು. 'ಇಬ್ಬರು ಮಕ್ಕಳ' ನೀತಿಯು ರಾಜ್ಯ ಸರ್ಕಾರದ ಯಾವುದೇ  ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದರು.


ಅಸ್ಸಾಂನಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಬಾನಂದ್ ಸೋನೋವಾಲ್ ನೇತೃತ್ವದಲ್ಲಿ ಸರ್ಕಾರ ರಚಿಸಿದೆ. 
ರಾಜ್ಯದ ಹೊಸ ಜನಸಂಖ್ಯಾ ನೀತಿಗೆ ಅನುಗುಣವಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಸಚಿವ ಹೇಮಂತ್ ಬಿಸ್ವಾಸ್ ತಿಳಿಸಿದರು.