ಈ ರಾಜ್ಯದಲ್ಲಿ ಶುಲ್ಕವನ್ನು 20% ರಷ್ಟು ಕಡಿಮೆ ಮಾಡುವಂತೆ ಖಾಸಗಿ ಶಾಲೆಗಳಿಗೆ ಹೈಕೋರ್ಟ್ ಆದೇಶ
ಕೋಲ್ಕತ್ತಾದ 145 ಖಾಸಗಿ ಶಾಲೆಗಳಿಗೆ ಕನಿಷ್ಠ 20% ಶುಲ್ಕ ಕಡಿತಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಕೋಲ್ಕತಾ: ಕರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ಹೆಚ್ಚಿನ ಜನರು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಏತನ್ಮಧ್ಯೆ ಕಲ್ಕತ್ತಾ ಹೈಕೋರ್ಟ್ ಖಾಸಗಿ ಶಾಲೆಗಳಲ್ಲಿ (Private Schools) ತಮ್ಮ ಮಕ್ಕಳನ್ನು ಓದಿಸುತ್ತಿರುವ ಪೋಷಕರಿಗೆ ಪರಿಹಾರ ನೀಡಿದೆ.
ಕೋಲ್ಕತ್ತಾದ 145 ಖಾಸಗಿ ಶಾಲೆಗಳಿಗೆ ಕನಿಷ್ಠ 20% ಶುಲ್ಕ ಕಡಿತಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಅವರ ನ್ಯಾಯಪೀಠದಿಂದ ಈ ಮಹತ್ವದ ತೀರ್ಪು ಹೊರಬಿದ್ದಿದೆ.
ಅಗತ್ಯವಿಲ್ಲದ ಶುಲ್ಕವನ್ನು ಅನುಮತಿಸಲಾಗುವುದಿಲ್ಲ!
ಅನಿವಾರ್ಯವಲ್ಲದ ಶುಲ್ಕವನ್ನು ಸೌಲಭ್ಯಗಳನ್ನು ಬಳಸಲು ಅನುಮತಿಸುವುದಿಲ್ಲ ಎಂದು ಹೈಕೋರ್ಟ್ (Highcourt) ಸ್ಪಷ್ಟವಾಗಿ ಹೇಳಿದೆ. 2020-21ನೇ ಸಾಲಿನಲ್ಲಿ ಯಾವುದೇ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಆದೇಶಿಸಿರುವ ಹೈಕೋರ್ಟ್ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪುನಃ ತೆರೆಯುವವರೆಗೆ ಎಲ್ಲಾ 145 ಶಾಲೆಗಳು ಕನಿಷ್ಠ 20 ಶೇಕಡಾ ಶುಲ್ಕವನ್ನು ಕಡಿತಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಈ ರಾಜ್ಯದಲ್ಲಿ ಅಕ್ಟೋಬರ್ 19ರಿಂದ ಶಾಲೆಗಳು ತೆರೆಯಲಿದ್ದು, ಹೊಸ ಮಾರ್ಗಸೂಚಿ ಬಿಡುಗಡೆ
ಶಾಲಾ ಶುಲ್ಕ ಹೆಚ್ಚಳ ದೂರು ನೀಡಿ ಅರ್ಜಿ ಸಲ್ಲಿಸಿದ್ದ ಪಾಲಕರು:
ಕೋಲ್ಕತ್ತಾದ 145 ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಶಾಲಾ ಶುಲ್ಕವನ್ನು ಕಡಿತಗೊಳಿಸುವಂತೆ ಮನವಿ ಮಾಡಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ಮಾತ್ರ ತರಗತಿಗಳನ್ನು (Online Classes) ನಡೆಸಲಾಗುತ್ತಿದೆ ಮತ್ತು ಶಾಲೆಗಳು ಬೋಧನಾ ಶುಲ್ಕದ ಹೊರತಾಗಿ ಇತರ ಶುಲ್ಕವನ್ನು ವಿಧಿಸುತ್ತಿವೆ ಎಂದು ಅವರು ಹೇಳಿದರು.
ಶಾಲೆ ತೆರೆಯುವ ಬಗ್ಗೆ, ಶಿಕ್ಷಕರ ಬಗ್ಗೆ ನಿಕೃಷ್ಟವಾಗಿ ನಡೆದುಕೊಳ್ಳುತ್ತಿರುವ ರಾಜ್ಯ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಮೇಲ್ಕಂಡ ಆದೇಶ ನೀಡಿದ್ದು ಸೂಚನೆಗಳ ಅನುಸರಣೆ ಬಗ್ಗೆ ನ್ಯಾಯಾಲಯವು ಮೇಲ್ವಿಚಾರಣೆ ಮಾಡುತ್ತದೆ. 2020ರ ಡಿಸೆಂಬರ್ 7 ರಂದು ಅರ್ಜಿಯನ್ನು ಮತ್ತೆ ಆಲಿಸುವುದಾಗಿ ತನ್ನ ಆದೇಶದಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ನ್ಯಾಯಾಲಯವು ಸೂಚನೆಗಳನ್ನು ಅನುಸರಿಸಿ ಮಾಡಿದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಇದಲ್ಲದೆ ಶಾಲಾ ಶುಲ್ಕಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆ ನಡೆಸಲು ಕಲ್ಕತ್ತಾ ಹೈಕೋರ್ಟ್ 3 ಸದಸ್ಯರ ಸಮಿತಿಯನ್ನು ಕೇಳಿದೆ.