ನವದೆಹಲಿ: ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಹಿನ್ನೆಲೆ ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿದೆ. ಜೊತೆಗೆ ನೌಕರ ವರ್ಗದ ಜನರಿಗೆ ಆದಾಯ ತೆರಿಗೆಗೆ ಸಂಬಂಧಿಸಿದ ಕೆಲಸಗಳ ಡೆಡ್ ಲೈನ್ ಅನ್ನು ಕೂಡ ವಿಸ್ತರಿಸಿದೆ. ಈ ಕೆಲಸಗಳ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈ ಹೊಸ ನಿರ್ಧಾರ Form-16 ಅನ್ನು ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿದೆ. ಸರ್ಕಾರದ ಹೊಸ ಮಾರ್ಗಸೂಚಿಗಳ ಅನುಸಾರ Form-16 ಅನ್ನು ಜಾರಿಗೊಳಿಸಲು ಜೂನ್ 30 ದಿನಾಂಕವನ್ನು ನಿಗದಿಪಡಿಸಲಾಗಿದೆ.


COMMERCIAL BREAK
SCROLL TO CONTINUE READING

ಸರ್ಕಾರದ ಈ ನಿರ್ಣಯದಿಂದ ITR ಪಾವತಿಸುವ ದಿನಾಂಕವೂ ಕೂಡ ಜುಲೈ 31 ರವರೆಗೆ ವಿಸ್ತರಣೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಆದರೆ, ಈ ಕುರಿತು ಸರ್ಕಾರ ಯಾವುದೇ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿಲ್ಲ.


ಆದಾಯ ತೆರಿಗೆ ಕಾಯ್ದೆಯ ಅಡಿ ಸಾಮಾನ್ಯವಾಗಿ ತೆರಿಗೆ ಪಾವತಿದಾರರಿಗೆ TDS Return ಪಾವತಿಸಲು ಮೇ 31 ರವರೆಗೆ ಕಾಲಾವಕಾಶ ನೀಡಲಾಗುತ್ತದೆ. ಜೊತೆಗೆ Form-16 ದಾಖಲಿಸಲು ಜೂನ್ 15ರವೆರೆಗೆ ಕಾಲಾವಕಾಶ ನೀಡಲಾಗುತ್ತದೆ.


ಇದರ ಜೊತೆಗೆ ಆದಾಯ ತೆರಿಗೆ ಇಲಾಖೆ ಅಡ್ವೈಸರಿ ಕೂಡ ಜಾರಿಗೊಳಿಸಿದೆ. ಹೌದು, ಒಂದು ವೇಳೆ ನೀವು ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆ PM cares fundಗೆ ಕೊಡುಗೆಯನ್ನು ನೀಡುತ್ತಿದ್ದರೆ, ನಿಮಗೆ ಶೇ.100 ರಷ್ಟು ತೆರಿಗೆ ವಿನಾಯ್ತಿ ಸಿಗಲಿದೆ. ಇದೆ ವೇಳೆ ನೌಕರರು ತುರ್ತು ಪರಿಸ್ಥಿತಿಯಲ್ಲಿ ತಮ್ಮ ಸಂಬಳದಿಂದ ಪ್ರಧಾನಿ ಪರಿಹಾರ ನೀಡುವ ಕೊಡುಗೆಯನ್ನು ಉದ್ಯೋಗದಾದರು ಫಾರ್ಮ್ 16 TDS ಪ್ರಮಾಣಪತ್ರದಲ್ಲಿ ತಪ್ಪದೆ ತೋರಿಸಬೇಕು ಎಂಬ ನಿರ್ದೇಶನಗಳನ್ನು ಆದಾಯ ತೆರಿಗೆ ಇಲಾಖೆ ನೀಡಿದೆ. ಜೊತೆಗೆ ಒಂದು ವೇಳೆ ನೀವು ಕಳೆದ ಆರ್ಥಿಕ ವರ್ಷದಲ್ಲಿ ಅಂದರೆ 2019-20 ರಲ್ಲಿ ಟ್ಯಾಕ್ಸ್ ಉಳಿತಾಯ ಮಾಡಲು ಹೂಡಿಕೆ ಮಾಡುವುದರಿಂದ ತಪ್ಪಿದ್ದರೆ, ಅದನ್ನೂ ಕೂಡ ಹೂಡಿಕೆ ಮಾಡಿ ಸಾವಿರಾರು ರೂಪಾಯಿ ಟ್ಯಾಕ್ಸ್ ಉಳಿತಾಯ ಮಾಡಬಹುದಾಗಿದೆ.


ಐಟಿ ಆಕ್ಟ್ 6 ಎಬಿ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ಸೆಕ್ಷನ್ 80 ಸಿ, 80 ಡಿ, 80 ಜಿ ಹೊಂದಿದೆ, ಇದರ ಅಡಿಯಲ್ಲಿ ವಿಮಾ ಪಾಲಿಸಿ (ಜೀವ ವಿಮೆ), ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) ಇತ್ಯಾದಿ, ವೈದ್ಯಕೀಯ ವಿಮಾ ಪ್ರೀಮಿಯಂ ಮತ್ತು ದೇಣಿಗೆ ಇತ್ಯಾದಿಗಳಲ್ಲಿ ಹೂಡಿಕೆಯ ಮೇಲೆ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ, ಇಂತಹ ಹೂಡಿಕೆಗಳಿಗೆ ಗಡುವು 2020 ರ ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಅಂದರೆ, 2019-20ರ ಅವಧಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು, ಇದೀಗ ಜೂನ್ 30 ರವರೆಗೆ ಇವುಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.