3.6 ಲಕ್ಷ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕತವಾಗಿದ್ದು, ಕೇಂದ್ರ ಕಾರ್ಮಿಕ ಇಲಾಖೆ ಸರ್ಕಾರಿ ನೌಕರರ take home salary ಯನ್ನು ಹೆಚ್ಚಿಸುವ ಸಿದ್ಧತೆ ಮಾಡಿಕೊಂಡಿದೆ. ಇದರ ಅಡಿ ಸುಮಾರು 15 ಸಾವಿರವರೆಗೆ ಮಾಸಿಕ ವೇತನ ಪಡೆಯುವ ನೌಕರರ ESIC ಕೊಡುಗೆಯಲ್ಲಿ ಇಳಿಕೆ ಮಾಡಿದೆ. ಹೌದು, ESICಯಲ್ಲಿನ ನೌಕರರ ಮಾಸಿಕ ಕೊಡುಗೆಯನ್ನು ಶೇ.6.5ರಿಂದ ಶೇ.4ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ನೌಕರರು ಹಾಗೂ ನೌಕರಿದಾತರು ಇಬ್ಬರಿಗೂ ಕೂಡ ಲಾಭವಾಗಲಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಟ್ವೀಟ್ ಮಾಡಿರುವ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್, ಸರ್ಕಾರಿ ನೌಕರರಿಗೆ ಉತ್ತಮ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ತನ್ನ ESI ಕಾಯ್ದೆಯಲ್ಲಿ ಬದಲಾವಣೆ ಮಾಡಿದೆ. ಈ ನೂತನ ನಿಯಮದ ಅಡಿ ನೌಕರರ ವೇತನದಲ್ಲಿ ಶೇ.1.75 ಆಂಶಿಕ ಅನುದಾನ ಪಡೆಯಲಾಗುತ್ತಿತ್ತು. ಆದರೆ, ಇದೀಗ ಅದನ್ನು ಶೇ.0.75ಗೆ ಇಳಿಕೆ ಮಾಡಲಾಗಿದೆ. ಇನ್ನೊಂದೆಡೆ ನೌಕರಿದಾತರೂ ಕೂಡ ಶೇ.4.75 ಅನ್ನು ಇಳಿಕೆ ಮಾಡಿ ಶೇ.3.25ಕ್ಕೆ ಇಳಿಕೆ ಮಾಡಲಾಗಿದೆ. ಸರ್ಕಾರದ ಈ ನಿರ್ಣಯದಿಂದ 12.85 ಲಕ್ಷ ನೌಕರರಿಗೆ ಆಗಲಿದೆ.



2018-19ರ ಆರ್ಥಿಕ ವರ್ಷದಲ್ಲಿ ESIಗೆ ಒಟ್ಟು 1.49 ಕೋಟಿ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಸೆಪ್ಟೆಂಬರ್ 2017 ರಿಂದ ನವೆಂಬರ್ 2019ರ ನಡುವೆ ESI ಯೋಜನೆಗೆ ಒಟ್ಟು 3.37 ಕೋಟಿ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಇನ್ನೊಂದೆಡೆ ಸೆಪ್ಟೆಂಬರ್ 2017 ರಿಂದ ಮಾರ್ಚ್ 2018ರವರೆಗೆ ESIಗೆ ಒಟ್ಟು 83.35 ಲಕ್ಷ ನೌಕರರು ಸೇರ್ಪಡೆಯಾಗಿದ್ದಾರೆ.


NSO ನೀಡಿರುವ ಈ ವರದಿ ನೌಕರರ ಭವಿಷ್ಯ ನಿಧಿ ಯೋಜನೆ, ನೌಕರರ ರಾಜ್ಯ ವಿಮಾ ಹಾಗೂ ರಾಷ್ಟ್ರೀಯ ಪೆನ್ಷನ್ ಯೋಜನೆಯ ಅಂಕಿ ಅಂಶಗಳನ್ನು ಅಧಾರವಾಗಿಟ್ಟುಕೊಂಡು ಸಿದ್ದಪಡಿಸಲಾಗಿದೆ.