Internet ಹಾಗೂ Technology ಕುರಿತು ಉಲ್ಲೇಖಿಸಿ, ಚೀನಾ ಬಗ್ಗೆ ಮೋಹನ್ ಭಾಗವತ್ ಹೇಳಿದ್ದೇನು?
Independence Day 2021: ಸ್ವದೇಶಿ ಎಂದರೆ ನಮ್ಮದೇ ಅದ ಶರತ್ತುಗಳ ಮೇಲೆ ವ್ಯಾಪಾರ ಮಾಡುವುದು ಎಂದರ್ಥ. ಸ್ವದೇಶಿ (Swadeshi) ಎಂದರೆ ಸ್ವಾವಲಂಬನೆ ಹಾಗೂ ಅಹಿಂಸೆ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Independence Day 2021: ತಂತ್ರಜ್ಞಾನಕ್ಕಾಗಿ ಚೀನಾದ ಮೇಲೆ ಅವಲಂಬನೆ ಹೆಚ್ಚಾದರೆ, ನಾವು ಅದಕ್ಕೆ ತಲೆಬಾಗಬೇಕಾಗುತ್ತದೆ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ (RSS Chief On China) ಹೇಳಿದ್ದಾರೆ. ಸ್ವಾತಂತ್ರ್ಯ ದಿನದಂದು ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾಡಿರುವ ತಮ್ಮ ಭಾಷಣದಲ್ಲಿ ಅವರು ಈ ರೀತಿ ಹೇಳಿದ್ದಾರೆ. ನಾವು ಇಂಟರ್ನೆಟ್ ಮತ್ತು ತಂತ್ರಜ್ಞಾನವನ್ನು ಬಳಸುತ್ತೇವೆ ಮತ್ತು ಇದಕ್ಕಾಗಿ ನಾವು ನಿಜವಾದ ತಂತ್ರಜ್ಞಾನವನ್ನು ಹೊಂದಿಲ್ಲ ಮತ್ತು ನಾವು ಅದನ್ನು ಹೊರಗಿನಿಂದ ಪಡೆಯುತ್ತೇವೆ ಎಂದು ಸಂಘದ ಮುಖ್ಯಸ್ಥರು ಹೇಳಿದ್ದಾರೆ. ನಾವು ಚೀನಾ (China) ವಿರುದ್ಧ ಮಾತನಾಡಬಹುದು, ಅದನ್ನು ಬಹಿಷ್ಕರಿಸಬಹುದು. ಆದರೆ, ನಾವು ಮೊಬೈಲ್ ನಲ್ಲಿ ಬಳಸುವ ಎಲ್ಲ ಸಂಗತಿಗಳು ಎಲ್ಲಿಂದ ಬರುತ್ತವೆ? ಎಂದು ಅವರು ಪ್ರಶ್ನಿಸಿದ್ದಾರೆ. ಚೀನಾದ ಮೇಲೆ ನಮ್ಮ ಅವಲಂಬನೆ ಹೆಚ್ಚಾದರೆ, ನಾವು ಅದಕ್ಕೆ ತಲೆಬಾಗಬೇಕಾಗುತ್ತದೆ ಎಂದು ಭಾಗವತ್ ಹೇಳಿದ್ದಾರೆ.
Mohan Bhagwat) ಹೇಳಿದ್ದಾರೆ.
ಇದನ್ನೂ ಓದಿ-PM Gatishakti Scheme: ಪ್ರಧಾನಿ ಗತಿಶಕ್ತಿ ಯೋಜನೆ ಘೋಷಿಸಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?
ವಿಕೇಂದ್ರೀಕೃತ ಉತ್ಪಾದನೆಯು ಭಾರತೀಯ ಆರ್ಥಿಕತೆಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ನೈಸರ್ಗಿಕ ಸಂಪನ್ಮೂಲಗಳು ಶೋಷಣೆಯಾಗದಂತೆ ನೋಡಿಕೊಳ್ಳಲು "ನಿಯಂತ್ರಿತ ಗ್ರಾಹಕತ್ವ" ಅಗತ್ಯ ಎಂದು ಅವರು ಹೇಳಿದ್ದಾರೆ. ನಾವು ಎಷ್ಟು ಸಂಪಾದನೆ ಮಾಡುತ್ತೇವೆ ಎನ್ನುವುದರ ಮೇಲೆ ಜೀವನ ಮಟ್ಟವನ್ನು ನಿರ್ಧರಿಸಬಾರದು, ಜನರ ಕಲ್ಯಾಣಕ್ಕಾಗಿ ನಾವು ಎಷ್ಟು ಹಿಂದಿರುಗಿಸುತ್ತಿದ್ದೇವೆ ಎನ್ನುವುದರ ಮೇಲೆ ನಿರ್ಧರಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ. "ನಾವು ಎಲ್ಲರ ಕಲ್ಯಾಣವನ್ನು ಪರಿಗಣಿಸಿದಾಗ ನಮಗೆ ಸಂತೋಷವಾಗುತ್ತದೆ. ಸಂತೋಷವಾಗಿರಲು ನಮಗೆ ಉತ್ತಮ ಆರ್ಥಿಕ ಸ್ಥಿತಿ ಬೇಕು ಮತ್ತು ಅದಕ್ಕಾಗಿ ನಮಗೆ ಆರ್ಥಿಕ ಸಾಮರ್ಥ್ಯಬೇಕು" ಎಂದು ಭಾಗವತ್ ಹೇಳಿದ್ದಾರೆ.
ಇದನ್ನೂ ಓದಿ-ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ, ಗಡಿಗಳಲ್ಲೂ ಹಾರಾಡಿದ ತಿವರ್ಣ ಧ್ವಜ
ಸ್ವದೇಶಿ ಎಂದರೆ ನಮ್ಮದೇ ಅದ ಶರತ್ತುಗಳ ಮೇಲೆ ವ್ಯಾಪಾರ ಮಾಡುವುದು ಎಂದರ್ಥ. ಸ್ವದೇಶಿ ಎಂದರೆ ಸ್ವಾವಲಂಬನೆ ಹಾಗೂ ಅಹಿಂಸೆ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಉದ್ಯೋಗಗಳಿಗೆ ನೆರವು ಒದಗಿಸುವುದು ಹಾಗೂ ಅವುಗಳನ್ನು ಉತ್ತೇಜಿಸುವುದು ಸರ್ಕಾರದ ಕೆಲಸ. ದೇಶದ ಅಭಿವೃದ್ಧಿಗಾಗಿ ಬೇಕಾಗುವ ಸಂಗತಿಗಳ ಉತ್ಪಾದನೆಗೆ ನಿರ್ದೇಶನ ನೀಡುವುದು ಸರ್ಕಾರಂದ ಕೆಲಸ. ಆದರೆ, ಉತ್ಪಾದನೆ ಜನ ಕೇಂದ್ರಿತವಾಗಿರಬೇಕು. ಜೊತೆಗೆ ಸಂಶೋಧನೆ ಹಾಗೂ ಅಭಿವೃದ್ಧಿ, ಸೂಕ್ಷ್ಮ, ಲಘು ಮತ್ತು ಮಧ್ಯಮ ಉಪಕ್ರಮಗಳು ಹಾಗೂ ಸಹಕಾರಿ ಕ್ಷೇತ್ರದ ಮೇಲೆ ನಮ್ಮ ಗಮನ ಕೇಂದ್ರಿತವಾಗಿರಬೇಕು ಎಂದು ಮೋಹನಜೀ ಭಾಗವತ್ ಹೇಳಿದ್ದಾರೆ.
ಇದನ್ನೂ ಓದಿ-ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮ : ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ