ಡಾ.ಮನಮೋಹನ್ ಸಿಂಗ್ ಕಾಲಾವಧಿಯಲ್ಲಿ ಭಾರತ 271 ಮಿಲಿಯನ್ ಜನರನ್ನು ಬಡತನದಿಂದ ಹೊರತಂದಿದೆ- ವಿಶ್ವಸಂಸ್ಥೆ-ಆಕ್ಸಫರ್ಡ್ ವರದಿ
ಭಾರತವು ಮನಮೋಹನ್ ಸಿಂಗ್ ಸರ್ಕಾರದ ಕಾಲಾವಧಿಯಲ್ಲಿ ಎಲ್ಲ ರೀತಿಯ ಬಡತನವನ್ನು ಕಡಿಮೆ ಮಾಡಲು ಹಲವು ಪ್ರಯತ್ನಗಳನ್ನು ಮಾಡಿದೆ. ಆ ಹತ್ತು ವರ್ಷಗಳಲ್ಲಿ ಬಡತನ ದರವನ್ನು ಶೇ 55 ರಿಂದ ಶೇ 28 ಕ್ಕೆ ಇಳಿದಿದೆ ಎಂದು 2018 ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ (ಎಂಪಿಐ) ಇದನ್ನು ಬಹಿರಂಗಪಡಿಸಿದೆ.
ನವದೆಹಲಿ: ಭಾರತವು ಮನಮೋಹನ್ ಸಿಂಗ್ ಸರ್ಕಾರದ ಕಾಲಾವಧಿಯಲ್ಲಿ ಎಲ್ಲ ರೀತಿಯ ಬಡತನವನ್ನು ಕಡಿಮೆ ಮಾಡಲು ಹಲವು ಪ್ರಯತ್ನಗಳನ್ನು ಮಾಡಿದೆ. ಆ ಹತ್ತು ವರ್ಷಗಳಲ್ಲಿ ಬಡತನ ದರವನ್ನು ಶೇ 55 ರಿಂದ ಶೇ 28 ಕ್ಕೆ ಇಳಿದಿದೆ ಎಂದು 2018 ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ (ಎಂಪಿಐ) ಇದನ್ನು ಬಹಿರಂಗಪಡಿಸಿದೆ.
ಈ ವರದಿಯು ಪ್ರಮುಖವಾಗಿ 2005-06 ಮತ್ತು 2015-16ರ ನಡುವೆ ಕಾಲಾವಧಿಯಲ್ಲಿ ಸುಮಾರು 271 ಮಿಲಿಯನ್ ಜನರು ಭಾರತ ದೇಶದಲ್ಲಿ ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದೆ. ಯುಎನ್ಡಿಪಿ ಮತ್ತು ಆಕ್ಸ್ಫರ್ಡ್ ಪಾವರ್ಟಿ ಮತ್ತು ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (ಒಪಿಐಐ) ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ತಿಳಿದು ಬಂದಿದೆ.ಇಷ್ಟೆಲ್ಲದರ ನಡುವೆಯು ಇಂದಿಗೂ ಭಾರತ ಅತಿ ಹೆಚ್ಚು ಬಡವರು ಇದ್ದಾರೆ ಎಂದು ಈ ವರದಿ ತಿಳಿಸಿದೆ. ಭಾರತವು ಬಡತನವನ್ನು ಕಡಿತಗೊಳಿಸಿರುವುದು ಹೆಚ್ಚು ಕಡಿಮೆ ಚೀನಾದಷ್ಟೇ ಎಂದು ತಿಳಿಸಿದೆ.
ಭಾರತವು ಬಡತನ ಕಡಿತದ ಪ್ರಮಾಣವು 2005/6 ರಿಂದ 2015/16 ರವರೆಗಿನ ದಶಕದಲ್ಲಿ - 635 ಮಿಲಿಯನ್ ನಿಂದ 364 ಮಿಲಿಯನ್ ಗೆ ಇಳಿಕೆಯಾಗಿದೆ.ಇನ್ನೊಂದು ಆಘಾತಕಾರಿ ಸಂಗತಿಯೆಂದರೆ 2015 ಮತ್ತು 2016ರಲ್ಲಿ 364 ಮಿಲಿಯನ್ ಜನಸಂಖ್ಯೆಯಲ್ಲಿ 156 ಮಿಲಿಯನ್ ಜನರು ಮಕ್ಕಳಾಗಿದ್ದಾರೆ ಎಂದು ವರದಿ ಹೇಳಿದೆ.ಭಾರತದಲ್ಲಿ ಬಹುತೇಕ ಬಡವರು ಜಾರ್ಖಂಡ್ ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್ಗಢ, ಮತ್ತು ನಾಗಾಲ್ಯಾಂಡ್ ಇದ್ದಾರೆ ಎಂದು ತಿಳಿದುಬಂದಿದೆ.ದೆಹಲಿ, ಕೇರಳ ಮತ್ತು ಗೋವಾಗಳು ಕಡಿಮೆ ಬಡತನ ಪ್ರಮಾಣವನ್ನು ಹೊಂದಿವೆ ಎನ್ನಲಾಗಿದೆ.
ಭಾರತವು (364 ಮಿಲಿಯನ್ ಜನರು) ನಂತರ, ಬಹು-ಆಯಾಮದ ಬಡತನದಲ್ಲಿ ವಾಸಿಸುವ ಅತಿ ಹೆಚ್ಚು ಜನರು ನೈಜೀರಿಯಾ (97 ಮಿಲಿಯನ್), ಇಥಿಯೋಪಿಯಾ (86 ಮಿಲಿಯನ್), ಪಾಕಿಸ್ತಾನ (85 ಮಿಲಿಯನ್) ಮತ್ತು ಬಾಂಗ್ಲಾದೇಶ (67 ಮಿಲಿಯನ್).ದೇಶಗಳಲ್ಲಿ ಇದ್ದಾರೆ ಎಂದು ವರದಿ ತಿಳಿಸಿದೆ.
MPI ಬಡತನದ ಪ್ರಮಾಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮಾಡುವ ಅಳತೆ ಸೂಚ್ಯಂಕವಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟಕ್ಕೆ ಸಂಬಂಧಿಸಿದಂತೆ ಹತ್ತು ಅಂಶಗಳನ್ನು ಇದು ಗಣನೆಗೆ ತೆಗೆದುಕೊಳ್ಳುತ್ತದೆ. ಮಾನವ ಅಭಿವೃದ್ಧಿ ಸೂಚಂಕವನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಯುಎನ್ಡಿಪಿ ಮತ್ತು ಒಪಿಎಎಚ್ಐ 2010 ರಲ್ಲಿ ಜಾಗತಿಕ ಎಂಪಿಐನ್ನು ಮೊದಲು ಅಭಿವೃದ್ಧಿಪಡಿಸಿತು.