ನಿಮ್ಮಂತಹ ಪ್ರಧಾನಿ ಅನುಪಸ್ಥಿತಿ ಭಾರತವನ್ನು ಕಾಡುತ್ತಿದೆ: ಮನಮೋಹನ್ ಸಿಂಗ್ ಅವರಿಗೆ ರಾಹುಲ್ ಗಾಂಧಿ
ಸೆಪ್ಟೆಂಬರ್ 26, 1932ರಲ್ಲಿ ಜನಿಸಿದ ಡಾ. ಮನಮೋಹನ್ ಸಿಂಗ್ 2004 ಮತ್ತು 2014 ರ ನಡುವೆ ಭಾರತದ 13ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
ನವದೆಹಲಿ: ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (Dr Manmohan Singh) ಅವರು ಇಂದು 88ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಾಮಾಣಿಕತೆ, ಸಭ್ಯತೆ ಮತ್ತು ಸಮರ್ಪಣೆಯ ಪ್ರಧಾನಿ ಎಂದು ಹೊಗಳಿದರು.
ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ರಾಹುಲ್ ಗಾಂಧಿ, ಡಾ. ಮನಮೋಹನ್ ಸಿಂಗ್ ಅವರಂತಹ ಪ್ರಧಾನ ಮಂತ್ರಿಯ ಅನುಪಸ್ಥಿತಿ ಭಾರತವನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ನರಸಿಂಹರಾವ್ ಬಯಸಿದ್ದರೆ 1984 ರ ಗಲಭೆ ತಪ್ಪಿಸಬಹುದಿತ್ತು'
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಿಜಯ ಪತಾಕೆ ಹಾರಿಸಿದ ಬಳಿಕ ಯುಪಿಎ ಸರ್ಕಾರದಲ್ಲಿ 2004 ಮತ್ತು 2014 ರ ನಡುವೆ ಡಾ. ಮನಮೋಹನ್ ಸಿಂಗ್ ಭಾರತದ 13 ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ ಡಾ. ಮನಮೋಹನ್ ಸಿಂಗ್ 1998 ರಿಂದ 2004 ರವರೆಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಅವರು ರಾಜಸ್ಥಾನದ ರಾಜ್ಯಸಭಾ ಸದಸ್ಯರಾಗಿದ್ದಾರೆ.