ಮಹಾಭಾರತ ಕಾಲದಲ್ಲೇ ಭಾರತವು ಇಂಟರ್ನೆಟ್ ಮತ್ತು ಉಪಗ್ರಹಗಳನ್ನು ಹೊಂದಿತ್ತು- ತ್ರಿಪುರಾ ಮುಖ್ಯಮಂತ್ರಿ
ನವದೆಹಲಿ: ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ದೇವ್ ಒಂದು ವಿಚಿತ್ರ ಹೇಳಿಕೆ ನೀಡುವುದರ ಮೂಲಕ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಹಲವು ಲಕ್ಷ ವರ್ಷಗಳ ಹಿಂದೆ ಭಾರತವು ಇಂಟರ್ ನೆಟ್ ವ್ಯವಸ್ಥೆಯನ್ನು ಹೊಂದಿತ್ತು ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು" ಬಹುತೇಕರು ಒಪ್ಪದೇ ಇರಬಹುದು,ಆದರೆ ವಾಸ್ತವ ಸಂಗತಿ ಎಂದರೆ ಇಂಟರ್ ನೆಟ್ ಆಗ ಭಾರತದಲ್ಲಿ ಅಸ್ತಿತ್ವದಲ್ಲಿತ್ತು,ಏಕೆಂದರೆ ಸಂಜಯ ಕುರುಕ್ಷೇತ್ರ ವನ್ನು ನೋಡಿ ದೃತರಾಷ್ಟ್ರನಿಗೆ ಹೇಳಲು ಸಾಧ್ಯ? ಅದರರ್ಥ ಆಗ ಇಂಟರ್ ನೆಟ್ ಇತ್ತು ,ಉಪಗ್ರಹಗಳು ಮತ್ತು ತಂತ್ರಜ್ಞಾನ ವ್ಯವಸ್ಥೆಯು ಆ ಕಾಲದಲ್ಲಿಯೇ ಭಾರತದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಕೇಂದ್ರ ಮಂತ್ರಿ ಸತ್ಯಪಾಲ್ ಸಿಂಗ್ ಡಾರ್ವಿನ್ ಸಿದ್ದಾಂತವು ವೈಜ್ಞಾನಿಕವಾಗಿ ಸುಳ್ಳು ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು.ಈಗ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳೇ ಹೇಳಿರುವುದು ಮತ್ತೆ ವಿವಾದಕ್ಕೆ ಕಾರಣವಾಗಿದೆ.