ಚೀನಾಕ್ಕೆ ಪಾಠ ಕಲಿಸಲು ವಿಚಕ್ಷಣ ವಿಮಾನಗಳ ನಿಯೋಜನೆ ಹೆಚ್ಚಿಸಿದ ಭಾರತ
ಭಾರತವು ತನ್ನ ಚಟುವಟಿಕೆಗಳನ್ನು ತನ್ನದೇ ಆದ ನಿಯಂತ್ರಣ ರೇಖೆಯ ವ್ಯಾಪ್ತಿಗೆ ಸೀಮಿತಗೊಳಿಸುವಂತೆ ಚೀನಾವನ್ನು ಕೇಳಿತು.
ನವದೆಹಲಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ (China) ನಡುವಿನ ಉದ್ವಿಗ್ನತೆ ಇನ್ನೂ ಉತ್ತುಂಗದಲ್ಲಿದೆ. ಪ್ರತಿಯೊಂದು ಸವಾಲನ್ನು ಎದುರಿಸಲು ಭಾರತೀಯ ಸೇನೆ ಸಂಪೂರ್ಣ ಸಿದ್ಧವಾಗಿದೆ. ಚೀನಾ ಯಾವಾಗ ಬೇಕಾದರೂ ಮತ್ತೆ ಮೋಸ ಮಾಡಬಹುದು, ಆದ್ದರಿಂದ ಚೀನಾ ಮಿಲಿಟರಿಯ ಕ್ರಮಗಳ ಮೇಲೆ ಕಣ್ಣಿಡಲು ಭಾರತವು ಆಕಾಶದಲ್ಲಿ ತನ್ನ ನಿಯೋಜನೆಯನ್ನು ಹೆಚ್ಚಿಸಿದೆ. ನೌಕಾಪಡೆಯ ಪಿ 8 ಐ ವಿಚಕ್ಷಣ ವಿಮಾನದ ಮೂಲಕ ಆಕಾಶದಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಲಡಾಖ್ ವಿವಾದ: ಚೀನಾವನ್ನು ಆರ್ಥಿಕವಾಗಿ ಸದೆಬಡೆಯಲು ಭಾರತದ ನಿರ್ಧಾರ
ಇದಕ್ಕೂ ಮುನ್ನ ಗುರುವಾರ ಭಾರತವು ತನ್ನ ಚಟುವಟಿಕೆಗಳನ್ನು ತನ್ನದೇ ಆದ ನಿಯಂತ್ರಣ ರೇಖೆಯ ವ್ಯಾಪ್ತಿಗೆ ಸೀಮಿತಗೊಳಿಸುವಂತೆ ಚೀನಾವನ್ನು ಕೇಳಿತು ಮತ್ತು ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯ ಮೇಲೆ ಸಾರ್ವಭೌಮತ್ವದ ಚೀನಾ ಮಿಲಿಟರಿ ಹೇಳಿಕೆಯನ್ನು ಅಮಾನ್ಯವೆಂದು ತಿರಸ್ಕರಿಸಿತು.
ವಿಶೇಷವೆಂದರೆ, ಪೂರ್ವ ಲಡಾಕ್‌ನ (Ladakh) ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಸೇರಿದಂತೆ 20 ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಮಿಲಿಟರಿ ಮುಖಾಮುಖಿ ಉಭಯ ದೇಶಗಳ ನಡುವಿನ ಗಡಿಯಲ್ಲಿ ಈಗಾಗಲೇ ಉದ್ವಿಗ್ನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.
ಎಚ್ಚರ! TikTok, Zoom ಸೇರಿದಂತೆ 50 ಚೈನೀಸ್ ಅಪ್ಲಿಕೇಶನ್‌ಗಳಿಂದ ದೇಶದ ಭದ್ರತೆಗೆ ಧಕ್ಕೆ
ಗಾಲ್ವಾನ್ ಕಣಿವೆಯ ಹಿಂಸಾತ್ಮಕ ಘರ್ಷಣೆಯನ್ನು ಉಲ್ಲೇಖಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.
ಇಂಡೋ-ಚೀನಾ (Indo-China) ನಡುವೆ ಉದ್ವಿಗ್ನತೆಗೆ ಸಂಬಂಧಿಸಿದಂತೆ ಭಾರತವು ಶಾಂತಿ ಬಯಸುತ್ತದೆ. ಆದರೆ ಪ್ರಚೋದನೆಗೆ ಸೂಕ್ತ ಪ್ರತಿಕ್ರಿಯೆ ದೊರೆಯಲಿದೆ ಎಂದು ಬುಧವಾರ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ವರ್ಚುವಲ್ ಸಭೆ ಇಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿದೆ. ಸಭೆಯಲ್ಲಿ ವಿವಿಧ ಪಕ್ಷಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವನ್ನು ಸಭೆಯಲ್ಲಿ ಚರ್ಚಿಸಲಾಗುವುದು.