ನವದೆಹಲಿ: 117 ದೇಶಗಳನ್ನು ಒಳಗೊಂಡ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 102 ಸ್ಥಾನಕ್ಕೆ ಕುಸಿದಿದೆ ಎಂದು ಕನ್ಸರ್ನ್ ವರ್ಲ್ಡ್‌ವೈಡ್ ಸಂಸ್ಥೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ದಕ್ಷಿಣ ಏಷ್ಯಾದ ಅತ್ಯಂತ ಕಡಿಮೆ ಸ್ಥಾನದಲ್ಲಿದೆ ಮತ್ತು ಪಾಕಿಸ್ತಾನ(94)ಕ್ಕಿಂತ ಹಿಂದೆ ಇದೆ. ಅಷ್ಟೇ ಅಲ್ಲದೆ ಭಾರತವು ಉತ್ತರ ಕೊರಿಯಾದಂತಹ (92) ದೇಶಗಳಿಗಿಂತ ಕನಿಷ್ಠ ಸ್ಥಾನದಲ್ಲಿದೆ.ಈ ವರದಿಯಲ್ಲಿ ಮಧ್ಯ ಆಫ್ರಿಕಾದ ಗಣರಾಜ್ಯವು ಅಗ್ರಸ್ಥಾನದಲ್ಲಿದೆ, ಹವಾಮಾನ ಬದಲಾವಣೆಯಿಂದಾಗಿ ಜಗತ್ತನ್ನು ಪೋಷಿಸುವುದು ಕಷ್ಟಕರವಾಗುತ್ತಿದೆ ಎಂದು ವರದಿ ಹೇಳಿದೆ. ಅನೇಕ ಪ್ರದೇಶಗಳಲ್ಲಿ ಹಸಿವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಪ್ರಗತಿಯಾಗಿದ್ದರೂ, ಪ್ರಪಂಚದಾದ್ಯಂತ ತೀವ್ರ ಹಸಿವು ಮುಂದುವರೆದಿದೆ ಎಂದು ಹೇಳಿದೆ.


ಅನೇಕ ದೇಶಗಳಲ್ಲಿ ಹಸಿವು ಗಣನೀಯವಾಗಿ ಮುಂದುವರೆದಿದ್ದು ಮತ್ತು ಇತರ ದೇಶಗಳಲ್ಲಿ ಅದು ಪ್ರಪಂಚದಾದ್ಯಂತ ಇನ್ನು ಹೆಚ್ಚುತ್ತಿದೆ. 2010 ಕ್ಕೆ ಹೋಲಿಸಿದರೆ ಈಗ ಅನೇಕ ದೇಶಗಳು ಹೆಚ್ಚಿನ ಹಸಿವಿನ ಮಟ್ಟವನ್ನು ಹೊಂದಿವೆ, ಮತ್ತು ಸುಮಾರು 45 ದೇಶಗಳು 2030 ರ ವೇಳೆಗೆ ಕಡಿಮೆ ಮಟ್ಟದ ಹಸಿವನ್ನು ಸಾಧಿಸುವಲ್ಲಿ ವಿಫಲವಾಗಿವೆ ಎಂದು ಕನ್ಸರ್ನ್ ವರ್ಲ್ಡ್‌ವೈಡ್ ಯುಎಸ್ ಸಿಇಒ ಕೊಲೀನ್ ಕೆಲ್ಲಿ ಹೇಳಿದ್ದಾರೆ.117 ದೇಶಗಳಲ್ಲಿ 43 ದೇಶಗಳಲ್ಲಿ ಗಂಭೀರ ಮಟ್ಟದ ಹಸಿವು ಇದೆ. ಮಧ್ಯ ಆಫ್ರಿಕಾದ ಗಣರಾಜ್ಯವು ಹಸಿವಿನ ಸೂಚ್ಯಂಕ ಅತ್ಯಂತ ಆತಂಕಕಾರಿ ಮಟ್ಟದಲ್ಲಿದೆ ಮತ್ತು ಚಾಡ್, ಮಡಗಾಸ್ಕರ್, ಯೆಮೆನ್ ಮತ್ತು ಜಾಂಬಿಯಾಗಳು ಆತಂಕಕಾರಿ ಮಟ್ಟದಲ್ಲಿದೆ ಎಂದು ವರದಿ ಹೇಳಿದೆ. 


ಈ ಗಂಭೀರ ಸಮಸ್ಯೆಯನ್ನು ನಿಭಾಯಿಸಲು ದೇಶಗಳು ತೆಗೆದುಕೊಳ್ಳಬಹುದಾದ ವಿವಿಧ ಕ್ರಮಗಳನ್ನು ಜಾಗತಿಕ ಹಸಿವು ಸೂಚ್ಯಂಕವು ಶಿಫಾರಸು ಮಾಡಿದೆ. ಅತ್ಯಂತ ದುರ್ಬಲ ಗುಂಪುಗಳಲ್ಲಿ ಸ್ಥಿತಿ ಸ್ಥಾಪಕತ್ವಕ್ಕೆ ಆದ್ಯತೆ ನೀಡುವುದು, ವಿಪತ್ತುಗಳಿಗೆ ಉತ್ತಮ ಪ್ರತಿಕ್ರಿಯೆ, ಅಸಮಾನತೆಗಳನ್ನು ಪರಿಹರಿಸುವುದು, ಹವಾಮಾನ ಬದಲಾವಣೆಯನ್ನು ತಗ್ಗಿಸುವ ಕ್ರಮಗಳನ್ನು ವರದಿಯಲ್ಲಿ ಸೂಚಿಸಲಾಗಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಎರಿಟ್ರಿಯಾ, ಲಿಬಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್ ಮತ್ತು ಸಿರಿಯಾ ಸೇರಿದಂತೆ ದತ್ತಾಂಶದ ಕೊರತೆಯಿಂದಾಗಿ ಒಂಬತ್ತು ದೇಶಗಳನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ.