ಕಿಡ್ನಿ ಸ್ಟೋನ್ ಹೊರ ಹೋಗುವುದು

  • Apr 30, 2024, 08:31 AM IST
1 /7

ಮೂತ್ರಪಿಂಡಗಳು ಅಗತ್ಯಕ್ಕಿಂತ ಹೆಚ್ಚು ಯೂರಿಕ್ ಆಸಿಡ್ ಅನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ ಅದು ಹರಳುಗಳ ರೂಪದಲ್ಲಿ ಮೊಣಕಾಲುಗಳು ಮತ್ತು ಕಾಲ್ಬೆರಳುಗಳಲ್ಲಿ ಶೇಖರಗೊಳ್ಳಲು ಪ್ರಾರಂಭಿಸುತ್ತವೆ.ಆಗ ವಿಪರೀತ ನೋವು ಕೂಡಾ ಕಾಣಿಸಿಕೊಳ್ಳುತ್ತವೆ. 

2 /7

ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಜೀರಿಗೆ ಹೆಚ್ಚಿನ ಯೂರಿಕ್ ಆಸಿಡ್ ಹರಳುಗಳನ್ನು ಕರಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.ಜೀರಿಗೆ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುವ ಮಸಾಲೆಯಾಗಿದೆ.

3 /7

ಜೀರಿಗೆ ನೀರನ್ನು ಪ್ರತಿನಿತ್ಯ ಕುಡಿದರೆ ಯೂರಿಕ್ ಆಸಿಡ್ ಹರಳುಗಳು ನಿರ್ವಿಷಗೊಂಡು ದೇಹದಿಂದ ಹೊರಬರಲು ಪ್ರಾರಂಭಿಸುತ್ತವೆ.  

4 /7

ಒಂದು ಲೋಟ ನೀರಿನಲ್ಲಿ ಅರ್ಧ ಚಮಚ ಜೀರಿಗೆ ಸೇರಿಸಿ ಮತ್ತು ರಾತ್ರಿಯಿಡೀ ನೆನೆಸಿಡಿ.ಮರುದಿನ ಬೆಳಿಗ್ಗೆ ಆ ನೀರನ್ನು ಬಿಸಿ ಮಾಡಿದ ನಂತರ ಅದಕ್ಕೆ ಒಂದೆರಡು  ಚಿಟಕಿ ಅರಶಿನ ಸೇರಿಸಿ ಕುಡಿಯಬೇಕು.   

5 /7

ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಯೂರಿಕ್ ಆಸಿಡ್ ಹರಳುಗಳನ್ನು ಪುಡಿ ಮಾಡುತ್ತದೆ.ಯೂರಿಕ್ ಆಸಿಡ್ ಹರಳುಗಳು ಕೀಲುಗಳು ಮತ್ತು ಬೆರಳುಗಳಲ್ಲಿ ಸಂಗ್ರಹವಾದಾಗ,ಊತ ಸಂಭವಿಸುತ್ತದೆ.ಅರಿಶಿನದ ಗುಣಲಕ್ಷಣಗಳು ಈ ಊತವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗಿದೆ.   

6 /7

ಅಲ್ಲದೆ, ಜೀರಿಗೆ ಮೂತ್ರ ವರ್ಧಕವಾಗಿದ್ದು, ಈ ನೀರನ್ನು ಕುಡಿಯುವುದರಿಂದ ಮೂತ್ರದ ಹರಿವು ಹೆಚ್ಚಾಗುವುದರಿಂದ ಮೂತ್ರ ಪಿಂಡದಿಂದ ಕಿಡ್ನಿ ಸ್ಟೋನ್ ಜಾರಿ ಬರುತ್ತದೆ.

7 /7

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.