ನವದೆಹಲಿ: ಗುರುವಾರದಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,303 ಹೊಸ ಕೋವಿಡ್ -19 ಪ್ರಕರಣಗಳು, 39 ಸಾವುಗಳು ದಾಖಲಾಗಿವೆ, ಆ ಮೂಲಕ ಈಗ ಒಟ್ಟು ಸಾವಿನ ಸಂಖ್ಯೆ 5,23,693 ಕ್ಕೆ ತಲುಪಿದೆ.


COMMERCIAL BREAK
SCROLL TO CONTINUE READING

24 ಗಂಟೆಗಳ ಅವಧಿಯಲ್ಲಿ ಸಕ್ರಿಯ 701 ಪ್ರಕರಣಗಳು ಹೆಚ್ಚಳವಾಗಿವೆ, ಜೊತೆಗೆ ದೇಶದಲ್ಲಿ  ಇಂದು 2,563  ಜನರು ಚೇತರಿಸಿಕೊಂಡಿದ್ದಾರೆ.ಆ ಮೂಲಕ ಒಟ್ಟು ಚೇತರಿಕೆಯ ಸಂಖ್ಯೆಯನ್ನು 4,25,28,126 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಸಂಖ್ಯೆಯ ಶೇ 0.04 ರಷ್ಟಿದ್ದರೆ, ರಾಷ್ಟ್ರೀಯ ಕೋವಿಡ್ -19 ಚೇತರಿಕೆ ದರವು ಶೇಕಡಾ 98.74 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.


ಇದನ್ನೂ ಓದಿ: Samantha: ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯೋ ಸಮಂತಾ ಮೊದಲ ಸಂಬಳ ಇದು.!


ರಾಷ್ಟ್ರದ ದೈನಂದಿನ ಪಾಸಿಟಿವಿಟಿ ದರವು ಶೇ 0.66 ಮತ್ತು ಸಾಪ್ತಾಹಿಕ ಪಾಸಿಟಿವ್ ದರವು ಶೇ 0.61 ರಷ್ಟು ದಾಖಲಾಗಿದೆ.ಹೆಚ್ಚುವರಿಯಾಗಿ, ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ನಿರ್ವಹಿಸಲಾದ ಸಂಚಿತ ಡೋಸ್‌ಗಳು 188.40 ಕೋಟಿ ಮೀರಿದೆ. ವೈರಸ್ ಇರುವಿಕೆಯನ್ನು ಪತ್ತೆಹಚ್ಚಲು ಕಳೆದ 24 ಗಂಟೆಗಳಲ್ಲಿ 4,97,669 ಪರೀಕ್ಷೆಗಳನ್ನು ನಡೆಸಲಾಗಿದೆ.


ಇದನ್ನೂ ಓದಿ: ಕಿಚ್ಚ ಸುದೀಪ್ vs ಅಜಯ್ ದೇವಗನ್ : ಇಬ್ಬರ ನಡುವೆ ಟ್ವಿಟ್ಟರ್ ವಾರ್


ಏತನ್ಮಧ್ಯೆ, ಜಾಗತಿಕ ಕರೋನವೈರಸ್ ಕ್ಯಾಸೆಲೋಡ್ 511.5 ಮಿಲಿಯನ್‌ಗೆ ಏರಿದರೆ, 6.22 ಮಿಲಿಯನ್‌ಗೂ ಅಧಿಕ ಸಾವು ಸಂಭವಿಸಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.


ಸಿಎಸ್ಎಸ್ಇಸ್ಇ  ಪ್ರಕಾರ ಯುಎಸ್ ಅನುಕ್ರಮವಾಗಿ 81,189,357 ಮತ್ತು 992,722  ಪ್ರಕರಣಗಳು ಮತ್ತು ಸಾವುಗಳೊಂದಿಗೆ ಹೆಚ್ಚು ಹಾನಿಗೊಳಗಾದ ದೇಶವಾಗಿ ಮುಂದುವರೆದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.