ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೋಮವಾರದಂದು ರಾಜ್ಯದಲ್ಲಿ ರಕ್ತಪಾತವನ್ನು ಕೊನೆಗೊಳಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ಅವಶ್ಯವೆಂದು ಅಭಿಪ್ರಾಯಪಟ್ಟಿದ್ದಾರೆ 


COMMERCIAL BREAK
SCROLL TO CONTINUE READING

ಕಾಶ್ಮೀರದ ವಿಧಾನಸಭೆಯ ಮಾತನಾಡುತ್ತಾ ಪ್ರಸ್ತಾಪಿಸಿದ ಅವರು "ನಾವು ರಕ್ತಪಾತವನ್ನು ಕೊನೆಗೊಳಿಸಬೇಕಾದರೆ ಪಾಕಿಸ್ತಾನ ಜೊತೆ ಮಾತುಕತೆ ನಡೆಸಬೇಕೆಂದು ತಿಳಿಸಿದರು.ಇದೆ ಸಂದರ್ಭದಲ್ಲಿ ತಮ್ಮ ಹೇಳಿಕೆಗೆ ಟಿವಿ ಚಾನಲ್ ನ ನಿರೂಪಕರು ತಮ್ಮನ್ನು ದೇಶ ದ್ರೋಹಿ ಎಂದು ಕರೆಯಬಹುದು.ಆದರೆ ಅದೇನು ದೊಡ್ಡ ಸಂಗತಿ ಏನಲ್ಲ, ಕಾರಣವಿಷ್ಟೇ ಕಾಶ್ಮೀರದ ಜನರು ಈ ಹಿಂಸಾಚಾರದಿಂದ ತೊಂದರೆ ಅನುಭವಿಸಿದ್ದಾರೆ,ಆದ್ದರಿಂದ ನಾವು ಮಾತುಕತೆಗೆ ಮುಂದಾಗಬೇಕು, ಏಕೆಂದರೆ ಯುದ್ದವೊಂದೆ ಸಮಸ್ಯೆಗೆ ಪರಿಹಾರವಲ್ಲ ಎಂದು ತಿಳಿಸಿದರು.


ಮೆಹಬೂಬಾ ರವರ ಹೇಳಿಕೆ ಪ್ರಮುಖವಾಗಿ  ಇತ್ತೀಚಿನ ದಿನಗಳಲ್ಲಿ ಉಭಯದೇಶಗಳ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಿಂದಾಗಿ ಉಂಟಾಗುತ್ತಿರುವ ಸಾವು ನೋವಿಗೆ ಕೊನೆ ಹಾಡುವ ನಿಟ್ಟಿನಲ್ಲಿ ಅವರು ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.