India population Report: ಭಾರತ ಈಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ವಿಶ್ವಸಂಸ್ಥೆಯ (UN Population Report) ಇತ್ತೀಚಿನ ವರದಿಯಲ್ಲಿ, ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ತಿಳದುಬಂದಿದೆ. ಒಂದು ವರ್ಷದಲ್ಲಿ ಭಾರತದ ಜನಸಂಖ್ಯೆ ಶೇ.1.56ರಷ್ಟು ಹೆಚ್ಚಾಗಿದೆ. ವರದಿಯ ಪ್ರಕಾರ, ಈಗ ಭಾರತದ ಜನಸಂಖ್ಯೆಯು 142.86 ಕೋಟಿ ಆಗಿದೆ. ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿದ್ದು ಎರಡನೇ ಸ್ಥಾನಕ್ಕೆ ಕುಸಿದಿದೆ. 


COMMERCIAL BREAK
SCROLL TO CONTINUE READING

ಭಾರತದ ಒಟ್ಟು ಫಲವತ್ತತೆ ದರ 2.0 ಎಂದು ಈ ವರದಿಯಲ್ಲಿ ಹೇಳಲಾಗಿದೆ. ಇಲ್ಲಿ ಭಾರತೀಯ ಪುರುಷನ ಸರಾಸರಿ ಜೀವಿತಾವಧಿ 71 ವರ್ಷಗಳು, ಮಹಿಳೆಯರ ಜೀವಿತಾವಧಿ 74 ವರ್ಷಗಳು. ಈ ವರದಿಯನ್ನು 1978 ರಿಂದ ಪ್ರಕಟಿಸಲಾಗುತ್ತಿದೆ. ಈಗ ವಿಶ್ವದ ಜನಸಂಖ್ಯೆ 8 ಶತಕೋಟಿ ತಲುಪಿದೆ ಎಂದು UNFPA ಭಾರತದ ಪ್ರತಿನಿಧಿ ಹೇಳಿದ್ದಾರೆ. ನಾವು ಭಾರತದ 1.4 ಬಿಲಿಯನ್ ಜನರನ್ನು 1.4 ಅವಕಾಶಗಳಾಗಿ ನೋಡುತ್ತೇವೆ. ಭಾರತ ಶಕ್ತಿಶಾಲಿ ರಾಷ್ಟ್ರವಾಗಿದೆ.  ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಇದು ನಿರಂತರವಾಗಿ ಮುನ್ನಡೆಯುತ್ತಿದೆ. ತಾಂತ್ರಿಕ ವಿಷಯಗಳಲ್ಲಿ ನಾವು ಪ್ರತಿದಿನ ಹೊಸ ದಾಖಲೆಗಳನ್ನು ಮಾಡುತ್ತಿದ್ದೇವೆ.ಭಾರತವು ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿದೆ ಎಂದು ಹೇಳಿದರು.


ಇದನ್ನೂ ಓದಿ: ಸಿಂಗ್‌ಪುರ ರೈಲು ನಿಲ್ದಾಣದಲ್ಲಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ: ಓರ್ವ ಮೃತ


ಈ ವರದಿಯಲ್ಲಿ ಇನ್ನೂ ಒಂದು ಸಂತೋಷದ ಸಂಗತಿಯೆಂದರೆ, ಭಾರತದ ಶೇಕಡಾ 25 ರಷ್ಟು ಜನರ ವಯಸ್ಸು 0-14 ವರ್ಷ, 10-19 ವರ್ಷ ವಯೋಮಾನದ ಶೇ.18 ಜನರಿದ್ದಾರೆ. 10-24 ವರ್ಷ ವಯಸ್ಸಿನ ಜನರ ಸಂಖ್ಯೆ 26 ಪ್ರತಿಶತ. ಆದರೆ ಭಾರತದಲ್ಲಿ ಇದು 15-64 ವರ್ಷಗಳ ನಡುವೆ ಸುಮಾರು 68 ಪ್ರತಿಶತ ಜನರಿದ್ದಾರೆ. ಅಂದರೆ ಭಾರತವು ಅತಿ ಹೆಚ್ಚು ಯುವಕರನ್ನು ಹೊಂದಿದೆ. ಚೀನಾದಲ್ಲಿ  ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿ 20 ಕೋಟಿ ಜನರು 65 ವರ್ಷ ಮೇಲ್ಪಟ್ಟವರು.


ಚೀನಾ ತನ್ನ ವಯಸ್ಸಾದವರ ಜನಸಂಖ್ಯೆಯಿಂದ ತೊಂದರೆಗೀಡಾಗಿದೆ. ಅಲ್ಲಿ ಜನಸಂಖ್ಯೆ ಹೆಚ್ಚಿಸಲು ಸರ್ಕಾರ ಜನರಿಗೆ  ಹೊಸ ಯೋಜನೆಗಳನ್ನು ನೀಡುತ್ತಿದೆ. ಆದರೆ ಇಲ್ಲಿಯ ಜನರು ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಿಲ್ಲ. ಈಗ ಅವಿವಾಹಿತರು ಸಹ ಇಲ್ಲಿ ಮಗುವಿಗೆ ಜನ್ಮ ನೀಡಬಹುದು, ಮದುವೆಯಾದ ದಂಪತಿಯ ಮಗುವಿಗೆ ಸಿಗುವ ಎಲ್ಲಾ ಸೌಲಭ್ಯಗಳು ಅವರಿಗೆ ಸಿಗುತ್ತವೆ. ರಿಲೇಶನ್ ಶಿಪ್ ನಲ್ಲಿರುವ ಜೋಡಿಗಳಿಗೆ ಚೀನಾದ ಕಾಲೇಜೊಂದು ಒಂದು ವಾರ ಹನಿಮೂನ್ ರಜೆ ಕೂಡ ನೀಡಿದೆ. ಇದರಿಂದ ಅವರು ಏಕಾಂತದಲ್ಲಿ ಸಮಯ ಕಳೆಯಬಹುದು ಮತ್ತು ಇದು ಜನಸಂಖ್ಯೆಯನ್ನು ಹೆಚ್ಚಿಸುತ್ತದೆ. ಚೀನಾದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟು ಜನರು 60 ವರ್ಷಕ್ಕಿಂತ ಮೇಲ್ಪಟ್ಟವರು. ಇಲ್ಲಿ ಒಂದು ಕಾಲದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ನಿಯಮಗಳನ್ನು ಜಾರಿಗೆ ತರಲಾಗಿತ್ತು. 


ಇದನ್ನೂ ಓದಿ: Covid-19: ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ, 24 ಗಂಟೆಯಲ್ಲಿ ಶೇ.38ರಷ್ಟು ಹೆಚ್ಚಳ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.