India Post GDS Recruitment 2021: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್
ಭಾರತೀಯ ಅಂಚೆ ಇಲಾಖೆಯ ಕೇರಳ ಸರ್ಕಲ್ ಗಾಗಿ ಜಿಡಿಎಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯ ದಿನಾಂಕವಾಗಿದೆ.
India Post GDS Recruitment 2021 : ಭಾರತೀಯ ಅಂಚೆ ಇಲಾಖೆಯ ಕೇರಳ ಸರ್ಕಲ್ ಗಾಗಿ ಜಿಡಿಎಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ನ (India Post) ಅಧಿಕೃತ ವೆಬ್‌ಸೈಟ್ appost.in ಗೆ ಭೇಟಿ ನಿಡಿ ಅರ್ಜಿ ಸಲ್ಲಿಸಬಹುದು.
ಇದಲ್ಲದೆ, ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ಈ ಹುದ್ದೆಗಳಿಗೆ https://indiapostgdsonline.in/gdsonlinec3p6/reference.aspx ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಈ ಲಿಂಕ್ ಮೂಲಕ https://appost.in/gdsonline/Home ನೀವು ಅಧಿಕೃತ ಅಧಿಸೂಚನೆಗಳನ್ನು ನೋಡಬಹುದು. ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ, ಕ್ಯಾಲಿಕಟ್, ಕಣ್ಣನೂರು, ಕಾಸರಗೋಡು, ಮಂಜೆರಿ, ಒಟ್ಟಪ್ಪಲಂ, ಪಾಲ್ಘಾಟ್, ತಲಶೇರಿ, ತಿರುರು, ವಡ್ಕಾರ, ಅಲ್ಲೆಪ್ಪೆ, ಅಲ್ವೇ, ಚಂಕೇರಿ, ಎರ್ನಾಕುಲಂ (Ernakulam), ಇಡುಕ್ಕಿ, ಇರಿಂಜಲಕುಡ, ಕೊಟ್ಟಾಯಂ ತಿರುವನಂತಪುರ ಉತ್ತರ ಮತ್ತು ತಿರುವನಂತಪುರ ದಕ್ಷಿಣಕ್ಕೆ ಒಟ್ಟು 1421 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಇದನ್ನೂ ಓದಿ : PPF: ಪ್ರತಿ ತಿಂಗಳು 7500 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿಯ ವೇಳೆಗೆ ಮಿಲಿಯನೇರ್ ಆಗಿ
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿಗಾಗಿ ಪ್ರಮುಖ ದಿನಾಂಕಗಳು 2021 :
online ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ - 08 ಮಾರ್ಚ್ 2021
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ - 21 ಏಪ್ರಿಲ್ 2021
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021 ರ ಹುದ್ದೆಯ ವಿವರಗಳು:
ಜಿಡಿಎಸ್, ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ABPM) ಮತ್ತು ಅಂಚೆ - 1421 ಹುದ್ದೆಗಳು
ಯುಆರ್ - 784 ಪೋಸ್ಟ್ ಗಳು
ಇಡಬ್ಲ್ಯೂಎಸ್ - 167 ಪೋಸ್ಟ್ ಗಳು
ಒಬಿಸಿ - 297 ಪೋಸ್ಟ್ ಗಳು
ಪಿಡಬ್ಲ್ಯೂಡಿ-ಎ - 11 ಪೋಸ್ಟ್ ಗಳು
ಪಿಡಬ್ಲ್ಯೂಡಿ-ಬಿ - 22 ಪೋಸ್ಟ್ ಗಳು
ಪಿಡಬ್ಲ್ಯೂಡಿ-ಸಿ - 19 ಪೋಸ್ಟ್ ಗಳು
ಪಿಡಬ್ಲ್ಯೂಡಿ-ಡಿಇ - 2 ಪೋಸ್ಟ್ ಗಳು
ಎಸ್‌ಸಿ - 105 ಪೋಸ್ಟ್ ಗಳು
ಎಸ್ಟಿ - 14 ಪೋಸ್ಟ್ ಗಳು
ಇದನ್ನೂ ಓದಿ : ಪಾಲಿಸಿದಾರರಿಗೆ ಎಲ್ಐಸಿ ತರಾತುರಿಯ ಆಲರ್ಟ್ ಜಾರಿ ಮಾಡಿದ್ದೇಕೆ..?
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021 ಗೆ ಸಂಬಳ :
ಟಿಆರ್‌ಸಿಎ ಸ್ಲ್ಯಾಬ್‌ನಲ್ಲಿ ಕನಿಷ್ಠ 4 ಗಂಟೆಗಳ / ಮೊದಲ ಸ್ತರಕ್ಕೆ ಕನಿಷ್ಠ ಟಿಆರ್‌ಸಿಎ
ಬಿಪಿಎಂ - ರೂ .12,000 / -
ಎಬಿಪಿಎಂ / ಅಂಚೆ ಸೇವಕ - ರೂ. 10,000 / -
ಟಿಆರ್‌ಸಿಎ ಸ್ಲ್ಯಾಬ್‌ನಲ್ಲಿ 5 ಗಂಟೆಗಳ / ದ್ವೀತಿಯ 2 ಕ್ಕೆ ಕನಿಷ್ಠ ಟಿಆರ್‌ಸಿಎ
ಬಿಪಿಎಂ - ರೂ 14,500 / -
ಎಬಿಪಿಎಂ / ಅಂಚೆ ಸೇವಕ - ರೂ. 12,000 / -
ಅರ್ಹತಾ ಮಾನದಂಡಗಳು :
ಅಭ್ಯರ್ಥಿಗಳು ಭಾರತ ಸರ್ಕಾರ / ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯು ನಡೆಸುವ ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ (ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಅಧ್ಯಯನ) 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.
ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 40 ವರ್ಷದೊಳಗಿರಬೇಕು.
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021 ಗೆ ಅರ್ಜಿ ಶುಲ್ಕ
ಯುಆರ್ / ಒಬಿಸಿ / ಇಡಬ್ಲ್ಯೂಎಸ್ ಪುರುಷ / ಟ್ರಾನ್ಸ್ ಮ್ಯಾನ್ - ರೂ. 100 / -
ಎಲ್ಲಾ ಮಹಿಳಾ / ಟ್ರಾನ್ಸ್-ಮಹಿಳಾ ಅಭ್ಯರ್ಥಿಗಳು, ಎಲ್ಲಾ ಎಸ್ಸಿ / ಎಸ್ಟಿ ಮತ್ತು ಎಲ್ಲಾ ಪಿಡಬ್ಲ್ಯೂಡಿ - ಯಾವುದೇ ಶುಲ್ಕವಿಲ್ಲ
ಇದನ್ನೂ ಓದಿ : Weekend Curfew in Delhi: ವೀಕ್-ಎಂಡ್ ಕರ್ಫ್ಯೂ ಮೊರೆಹೋದ ರಾಷ್ಟ್ರ ರಾಜಧಾನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.