ಕೊರೋನಾ ಸೋಂಕಿತರ ಸಂಖ್ಯೆ 6,412ಕ್ಕೆ, ಸತ್ತವರ ಸಂಖ್ಯೆ 199ಕ್ಕೆ ಏರಿಕೆ
ಭಾರತದಲ್ಲಿ ಸೋಂಕಿತರ ಸಂಖ್ಯೆ 6,412ಕ್ಕೆ ಏರಿಕೆಯಾಗಿದೆ. ಜತೆಗೆ ಇದುವರೆಗೂ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ.
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 678 ಜನರಲ್ಲಿ ಕೊರೊನಾವೈರಸ್ (Coronavirus) ಸೋಂಕು ಕಾಣಿಸಿಕೊಂಡಿದೆ. ಇದರ ಪರಿಣಾಮ ಭಾರತದಲ್ಲಿ ಸೋಂಕಿತರ ಸಂಖ್ಯೆ 6,412ಕ್ಕೆ ಏರಿಕೆಯಾಗಿದೆ. ಜತೆಗೆ ಇದುವರೆಗೂ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ. ಈ ಪೈಕಿ 593 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರೈತರಿಗೆ ತೊಂದರೆಯಾಗದಂತೆ ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1,364 ಮಂದಿಗೆ ಕೊರೋನಾ ಸೋಕು ತಗುಲಿದೆ. ನಂತರದ ಸ್ಥಾನ ತಮಿಳುನಾಡು- 834, ದೆಹಲಿ- 720, ರಾಜಸ್ಥಾನ- 463, ತೆಲಂಗಾಣ- 442, ಉತ್ತರ ಪ್ರದೇಶ- 410, ಕೇರಳ- 357, ಆಂಧ್ರ ಪ್ರದೇಶ- 348, ಮಧ್ಯಪ್ರದೇಶ- 259, ಗುಜರಾತ್- 241, ಕರ್ನಾಟಕ- 181, ಹರಿಯಾಣ- 169, ಜಮ್ಮು ಮತ್ತು ಕಾಶ್ಮೀರ- 158, ಪಶ್ಚಿಮ ಬಂಗಾಳ- 116, ಪಂಜಾಬ್- 101, ಒರಿಸ್ಸಾ- 44, ಬಿಹಾರ್- 39, ಉತ್ತರಾಖಂಡ- 35, ಅಸ್ಸಾಂ- 29, ಚಂಡೀಗಢ- 18, ಹಿಮಾಚಲ ಪ್ರದೇಶ 18, ಲಡಾಖ್- 15, ಜಾರ್ಖಂಡ್- 13, ಅಂಡಮಾನ್- ನಿಕೋಬಾರ್ ದ್ವೀಪ- 11, ಛತ್ತೀಸಗಡ- 10, ಗೋವಾ- 7, ಪುದುಚೆರಿ- 5, ಮಣಿಪುರ- 2, ತ್ರಿಪುರ-1, ಮಿಜೋರಾಮ್-1 ಮತ್ತು ಅರುಣಾಚಲ ಪ್ರದೇಶದಲ್ಲಿ 1 ಸೋಂಕು ಪ್ರಕರಣಗಳು ವರದಿಯಾಗಿವೆ.
ಮಹಿಳಾ ಗ್ರಾಹಕರಿಗೆ 1 ಲಕ್ಷ ರೂ.ವರೆಗೆ ಸಾಲ ನೀಡಲಿದೆ ಈ ಸರ್ಕಾರಿ ಬ್ಯಾಂಕ್, ಇಲ್ಲಿದೆ ಪೂರ್ಣ ವಿವರ
ಲಾಕ್ಡೌನ್ ಘೋಷಿಸಿ 14 ದಿನಗಳಾದರೂ ಕೊರೋನಾ ಕೋವಿಡ್ -19 (Covid-19) ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಏತನ್ಮಧ್ಯೆ ಏಪ್ರಿಲ್ 14ರ ನಂತರವೂ ಲಾಕ್ಡೌನ್ (Lockdown) ಮುಂದುವರೆಸಬೇಕೇ ಬೇಡವೇ ಎಂಬ ವಿಚಾರವಾಗಿ ಪ್ರಧಾನಿ ಮೋದಿ ಮೊನ್ನೆ ಸರ್ವಪಕ್ಷಗಳ ಸಭೆ ನಡೆಸಿದರು. ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ಮುಂದುವರೆಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದರು.