ನವದೆಹಲಿ: ಶುಕ್ರವಾರ ಇಡಿ ಭಾರತದೆಲ್ಲಡೆ ಉಕ್ಕಿನ ಮನುಷ್ಯ ಹಾಗೂ ಭಾರತದ ಬಿಸ್ಮಾರ್ಕ್ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಾಯಿ ಪಟೇಲರ ಪುಣ್ಯತಿಥಿಯನ್ನು  ದೇಶದಲ್ಲೆಡೆ  ಸ್ಮರಿಸಲಾಯಿತು.


COMMERCIAL BREAK
SCROLL TO CONTINUE READING

ಸರ್ದಾರ್ ಪಟೇಲ್ ಸ್ಮರಣಾರ್ಥ ದಿನದಂದು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ "ನಾವೆಲ್ಲಾ ಮಹಾತ್ಮ ಸರ್ದಾರ್ ಪಟೇಲರ ಸ್ಮರಣ ದಿನವನ್ನು ಅವರು ದೇಶಕ್ಕೆ ನೀಡಿರುವ ಸೇವೆವನ್ನು  ಭಾರತೀಯರಾಗಿ ನಾವೆಲ್ಲಾ ನೆನೆಯುತ್ತೇವೆ ' ಟ್ವೀಟ್ ಮೂಲಕ ಎಂದು ತಿಳಿಸಿದ್ದಾರೆ.



ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಪಟೇಲ್ ರಿಗೆ ನಮನಗಳನ್ನು ಸಲ್ಲಿಸುತ್ತಾ ಸರ್ದಾರ್ ಪಟೇಲ್ ದೇಶದ ಮತ್ತು ಕಾಂಗ್ರೆಸ್ ಪಕ್ಷದ ಮಹಾನ್ ನಾಯಕ  ಭಾರತದ ಸ್ವಾತಂತ್ರ್ಯದ ನಂತರ ಎಲ್ಲ ಸಂಸ್ಥಾನಗಳನ್ನು  ಒಕ್ಕೂಟ ವ್ಯವಸ್ಥೆಗೆ ಒಗ್ಗೂಡಿಸಿದ  ಖ್ಯಾತಿ ಪಟೇಲರದು ಎಂದು ಟ್ವೀಟ್ ಮಾಡಿದ್ದಾರೆ. 



ಭಾರತದ ಮೊದಲ ಗೃಹಮಂತ್ರಿಯಾಗಿದ್ದ ಪಟೇಲರು ಅಧುನಿಕ ಭಾರತದ ನಿರ್ಮಾಣದಲ್ಲಿ ನೆಹರುರವರ ಜೊತೆ ಸೇರಿ ಸಮಗ್ರ ಭಾರತದ ಪರಿಕಲ್ಪನೆಗೆ ಹೊಸ ಜೀವ ತುಂಬಿದರು.ಸ್ವಾತಂತ್ರ ಸಿಕ್ಕ ಮೂರು ವರ್ಷಗಳಲ್ಲಿ ಅಂದರೆ 1950 ಡಿಸೆಂಬರ್ 15 ರಂದು ಅವರು ತಮ್ಮ 75 ವಯಸ್ಸಿನಲ್ಲಿ ಕೊನೆಯುಸಿರೆಳೆದರು.