ನವದೆಹಲಿ: ಇಡೀ ವಿಶ್ವಕ್ಕೆ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ (Coronavirus) ಬಿಕ್ಕಟ್ಟಿನ ಮಧ್ಯೆ  ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಮಸ್ಯೆ ಎದುರಿಸಲು ಹಣದ ಹರಿವನ್ನು ಹೆಚ್ಚಿಸಿದರೆ ಇದರಿಂದ ಉಂಟಾಗಬಹುದಾದ ಅಡ್ಡ ಪರಿಣಾಮದಿಂದಾಗಿ ಸಮಸ್ಯೆ ಉಲ್ಬಣಿಸಬಹುದು ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ಆರ್ಥಿಕತೆಗೆ ಪುಷ್ಠಿ ನೀಡಲು ಐಎಂಎಫ್‌ (IMF) ಹೆಚ್ಚಿಸಲು ಹೊರಟಿರುವ ಲಿಕ್ವಿಡಿಟಿಯನ್ನು ದೇಶಗಳು  ಬಾಹ್ಯ ಉದ್ದೇಶಗಳಿಗಾಗಿ ಬಳಸಿದರೆ ಅದು ದುಬಾರಿ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಐಎಂಎಫ್‌ನ ಸ್ಟೀರಿಂಗ್ ಕಮಿಟಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಹೊಸ ಎಸ್‌ಡಿಆರ್ ಹಂಚಿಕೆಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದು ಕರೋನವೈರಸ್ COVID-19 ಚಾಲಿತ ಆರ್ಥಿಕ ಒತ್ತಡಗಳನ್ನು ಸರಾಗಗೊಳಿಸುವಲ್ಲಿ ಪರಿಣಾಮಕಾರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್ ಕೂಡ ಹೊಸ ಎಸ್‌ಡಿಆರ್ ಹಂಚಿಕೆಯನ್ನು ವಿರೋಧಿಸಿದ್ದು ಇದು ಎಲ್ಲಾ 189 ಸದಸ್ಯರಿಗೆ ಯಾವುದೇ ಷರತ್ತುಗಳಿಲ್ಲದೆ ಹೊಸ ವಿದೇಶಿ ವಿನಿಮಯ ಸಂಗ್ರಹವನ್ನು ಒದಗಿಸುತ್ತದೆ. ಹೆಚ್ಚಿನ ದೇಶಗಳು ರಾಷ್ಟ್ರೀಯ ಮೀಸಲುಗಳನ್ನು ಅವಲಂಬಿಸಿವೆ. ಪ್ರಸ್ತುತ ಅಕ್ರಮ ಮತ್ತು ಹಣದ ವಹಿವಾಟಿನ ಸಂದರ್ಭದಲ್ಲಿ ಎಸ್‌ಡಿಆರ್ ಹಂಚಿಕೆಯ ಪರಿಣಾಮಕಾರಿತ್ವ ಖಚಿತವಾಗಿಲ್ಲ. ಇದರ ಪರಿಣಾಮವಾಗಿ ದೇಶೀಯ ವಿತ್ತೀಯ ಮತ್ತು ಆರ್ಥಿಕ ಸ್ಥಿರತೆಗೆ ಸಂಬಂಧಿಸಿದ ಈ ಮೀಸಲು ಹಣದ ಹೊರಗಿನ ಬೇಡಿಕೆಗಳು ದುಬಾರಿಯಾಗುತ್ತವೆ. ಆದ್ದರಿಂದ ಅದನ್ನು ಬೆಂಬಲಿಸಲಾಗುವುದಿಲ್ಲ ಎಂದು ಅವರು ಹೇಳಿದರು.