ಬಾಲಸೋರ್‌: ಒಡಿಶಾದ ಅಬ್ದುಲ್‌ ಕಲಾಮ್‌ ಐಲ್ಯಾಂಡ್‌ನಲ್ಲಿ ಬೆಳಿಗ್ಗೆ 08:30ಕ್ಕೆ 4,000 ಕಿ.ಮೀ. ದೂರದ ಗುರಿಯನ್ನು ಹೊಡೆದುರುಳಿಸಬಲ್ಲ, ಪರಮಾಣು ಕಾರ್ಯತಂತ್ರದ ಅಗ್ನಿ-4 ಖಂಡಾಂತರ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ.


COMMERCIAL BREAK
SCROLL TO CONTINUE READING

ಈ ಪರೀಕ್ಷೆಯನ್ನು ಸೈನ್ಯವು ಪ್ರಾಯೋಗಿಕ ಪರೀಕ್ಷೆಯಾಗಿ ಮಾಡಿದೆ. ಡಾ. ಅಬ್ದುಲ್ ಕಲಾಮ್ ದ್ವೀಪದಲ್ಲಿ ಇರುವ ಇಂಟಿಗ್ರೇಟೆಡ್ ಟೆಸ್ಟಿಂಗ್ ಸೆಂಟರ್ (ಐಟಿಆರ್) ನ ಉಡಾವಣಾ ಪ್ಯಾಡ್ ನಂ .4 ರಿಂದ ಬೆಳಿಗ್ಗೆ 8:35 ರ ವೇಳೆಗೆ ಮೇಲ್ಮೈನಿಂದ ಕ್ಷಿಪಣಿ ಪರೀಕ್ಷಿಸಲಾಯಿತು. ಇದನ್ನು ಸಂಪೂರ್ಣ ಯಶಸ್ವಿ ಎಂದು ವ್ಯಾಖ್ಯಾನಿಸಲಾಗಿದ್ದು, ಗುರಿ ತಲುಪಿದ ಕ್ಷಿಪಣಿಯ ಹಂತ ಹಂತದ ಚಾಲನೆಯ ಮಾಹಿತಿ ಟ್ರ್ಯಾಕ್‌ಗೆ ಸಿಕ್ಕಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.



File Image


20 ಮೀಟರ್ ಉದ್ದ ಹಾಗೂ 17 ಟನ್ ತೂಕವನ್ನು ಹೊಂದಿರುವ ಈ ಕ್ಷಿಪಣಿ ಐದನೇ ಪೀಳಿಗೆಯ ಕಂಪ್ಯೂಟರ್ ಮತ್ತಿತರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ಒಳಗೊಂಡಿದೆ.


ಇದು ಅಗ್ನಿ -4 ಕ್ಷಿಪಣಿಯ ಏಳನೆಯ ಪರೀಕ್ಷೆಯಾಗಿತ್ತು. ಈ ಮೊದಲು ಭಾರತೀಯ ಸೈನ್ಯದ ಟ್ಯಾಕ್ಟಿಕಲ್ ಫೋರ್ಸ್ ಕಮಾಂಡ್ (ಎಸ್ಎಫ್ಸಿ) 2 ಜನವರಿ 2018 ರಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು.