ಭಾರತದಿಂದ ಖಂಡಾಂತರ ಅಗ್ನಿ 5 ಕ್ಷಿಪಣಿ ಪರೀಕ್ಷೆ
ನವದೆಹಲಿ: ಒಡಿಶಾದ ಬೆಂಗಾಳಕೊಲ್ಲಿ ಭಾಗದಿಂದ ಭಾರತವು ತನ್ನ ಪರಮಾಣು ಸಾಮರ್ಥ್ಯದ ಖಂಡಾಂತರ ಅಗ್ನಿ -5 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಈ ಕ್ಷಿಪಣಿ 5,000 ಕಿ.ಮೀ.ಗಳ ವರೆಗೂ ತಲುಪಿ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಅಗ್ನಿ -5 ಕ್ಷಿಪಣಿ ಮೂರು ಹಂತದ, 17 ಮೀಟರ್ ಎತ್ತರದ, ಎರಡು ಮೀಟರ್ ವಿಶಾಲ ಸುಮಾರು 1.5 ಟನ್ ಪರಮಾಣು ಸಿಡಿತಲೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಒಡಿಶಾದ ಕರಾವಳಿಯ ಅಬ್ದುಲ್ ಕಲಾಮ್ ದ್ವೀಪದಿಂದ ಕ್ಷಿಪಣಿಯನ್ನು ಪರೀಕ್ಷಿಸಲಾಯಿತು. ಈ ಹಿಂದೆ ಅಗ್ನಿ -5 ಕ್ಷಿಪಣಿಯನ್ನು ಡಿಸೆಂಬರ್ 26, 2016 ರಂದು ಪರೀಕ್ಷಿಸಲಾಗಿತ್ತು ಎಂದು ಹೇಳಲಾಗಿದೆ.
ಈ ಮೂಲಕ ಭಾರತ ದೇಶವು ಯುಎಸ್, ಬ್ರಿಟನ್, ರಷ್ಯಾ, ಚೀನಾ ಮತ್ತು ಫ್ರಾನ್ಸ್.ದಂತಹ ರಾಷ್ಟ್ರಗಳ ಸೂಪರ್-ಎಕ್ಸ್ಕ್ಲೂಸಿವ್ ಕ್ಲಬ್ ನ್ನು ಸೇರಿಕೊಂಡಿದೆ.