ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದೆ Coronavaccine
ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆ ಈಗಾಗಲೇ ತನ್ನ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿ ಮೂರನೇ ಹಂತಕ್ಕೆ ಪ್ರವೇಶಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ನ ಸಹಯೋಗದೊಂದಿಗೆ ಈ ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗಿದೆ.
ನವದೆಹಲಿ: ವರ್ಷಾಂತ್ಯದ ವೇಳೆಗೆ ಭಾರತ ಮಾರಕ ಕರೋನಾ ವೈರಸ್ ವಿರುದ್ಧ ಲಸಿಕೆ ನೀಡಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ್ ವರ್ಧನ್ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ನಾಲ್ಕೈದು ತಿಂಗಳಲ್ಲಿ ಕೋವಿಡ್ -19 ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ನಂತರ ಸಚಿವರು ಹಿಂದಿಯಲ್ಲಿ ಟ್ವೀಟ್ ಮಾಡಿ, ಕರೋನಾ ಲಸಿಕೆ ಯಾವಾಗ ಬರುತ್ತದೆ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಎಲ್ಲವೂ ಸರಿಯಾಗಿ ನಡೆದರೆ, ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ಮಾರುಕಟ್ಟೆಗೆ ಬರುವ ವಿಶ್ವಾಸ ತಾವು ಹೊಂದಿರುವುದಾಗಿ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮೂವರು ಕೊವಿಡ್-19 ನ ಪೂರ್ವ ವೈದ್ಯಕೀಯ ಮಾನವ ಪರೀಕ್ಷೆಗೆ ಒಳಗಾದವರಲ್ಲಿ ಒಬ್ಬರು ಮೂರನೆಯ ಹಂತದ ಪ್ರಿ-ಕ್ಲಿನಿಕಲ್ ಟ್ರಯಲ್ ಹಂತಕ್ಕೆ ತಲುಪಿದ್ದಾರೆ ಎಂದು ಹೇಳಿದೆ.
ಕೋವಿಡ್ -19 ರ ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥ ವಿ.ಕೆ.ಪಾಲ್ ಅವರ ಪ್ರಕಾರ, ಮೂರನೇ ಹಂತಕ್ಕೆ ಪ್ರವೇಶಿಸುವ ಲಸಿಕೆ ಅಭ್ಯರ್ಥಿ ಪರೀಕ್ಷೆಯ ಆರಂಭಿಕ ಹಂತಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆದಿದ್ದಾರೆ. ಇತರ ಎರಡು ಲಸಿಕೆಗಳು ಪ್ರಸ್ತುತ ಅವುಗಳ ಪೂರ್ವ ಕ್ಲಿನಿಕಲ್‌ನಲ್ಲಿವೆ ?? ಪ್ರಯೋಗಗಳು ಒಂದು ಅಥವಾ ಎರಡು ಹಂತಗಳಲ್ಲಿವೆ. ಆದರೂ ಅವರು ಲಸಿಕೆಯ ಹೆಸರನ್ನು ಬಹಿರಂಗಪಡಿಸಿಲ್ಲ.