ಏಪ್ರಿಲ್ 1, 2020ರ ವೇಳೆಗೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1500 ಕ್ಕೂ ಅಧಿಕ ತಲುಪಿದೆ. ಆದರೆ, ಈ ಅಂಕಿ ದಾಟಲು 63 ದಿನಗಳ ಕಾಲಾವಕಾಶ ಬೇಕಾಯಿತು ಎಂದರೆ ಅತಿಶಯೋಕ್ತಿಯಲ್ಲ. ಯಾವ ದೇಶಗಳಲ್ಲಿ ಕೊರೊನಾ ವೈರಸ್ ಹರಡಿದೆಯೋ, ಆದೇಶಗಳ ತುಲನೆಯಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ದರ ಎಲ್ಲಕ್ಕಿಂತ ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಅತ್ತ ಇನ್ನೊಂದೆಡೆ ಇರಾನ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ದರ ಎಲ್ಲ ದೇಶಕ್ಕಿಂತ ಅತಿ ಹೆಚ್ಚು ಎನ್ನಲಾಗಿದೆ. ಇಲ್ಲಿ ಫೆಬ್ರುವರಿ 19 ರಂದು ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು.  ಕೇವಲ 13 ದಿನಗಳಲ್ಲಿ ಇಲ್ಲಿ ಕೊರೊನಾ ಪೀಡಿತರ ಸಂಖ್ಯೆ 1500ರ ಗಡಿ ದಾಟಿದೆ.


COMMERCIAL BREAK
SCROLL TO CONTINUE READING

ಇನ್ನೊಂದೆಡೆ ಈ ಅಂಕಿ ದಾಟಲು ಅಮೇರಿಕಾಗೆ ಕೇವಲ 53, ಇಟಲಿ 32 ಹಾಗೂ ಸ್ಪೇನ್ ಗೆ 40 ದಿನಗಳ ಕಾಲಾವಕಾಶ ತೆಗೆದುಕೊಂಡಿದೆ. ಈ ಅವಧಿಯಲ್ಲಿ ಕೊರೊನಾ ಸೋಂಕಿನಿಂದ ಬಲಿಯಾದವರ ಅಂಕಿ-ಅಂಶಗಳಲ್ಲಿ ಭಾರತ ತೀರಾ ಹಿಂದಿದೆ. ಕಳೆದ 63 ದಿನಗಳಲ್ಲಿ ಭಾರತದಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 38ಕ್ಕೆ ತಲುಪಿದೆ. ಸಮಯ ಇರುತ್ತಿದ್ದಂತೆ ಭಾರತ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಂದ ದೇಹದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಭಾರಿ ಇಳಿಕೆಯಾಗಿದ್ದು, ಇದರಲ್ಲಿ 21 ದಿನಗಳ ಲಾಕ್ ಡೌನ್ ಇಲ್ಲಕ್ಕಿಂತ ಪ್ರಮುಖವಾಗಿದೆ ಎಂದು ವಿಶ್ಲೇಷಿಸಲಾಗಿದೆ.


ಈ ವಿಷಯದಲ್ಲಿ ಚೀನಾ-ಅಮೆರಿಕಾಗೂ ಹಿಂದಿಕ್ಕಿದೆ ಭಾರತ
ಚೀನಾದಲ್ಲಿ 11 ಡಿಸೆಂಬರ್ 2019 ರಂದು ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಕೇವಲ 46 ದಿನಗಳಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1500 ರ ಗಡಿ ದಾಟಿದೆ. ಇನ್ನಷ್ಟು ನಿಖರವಾಗಿ ಹೇಳುವುದಾದರೆ ಚೀನಾದಲ್ಲಿ ಪ್ರಕರಣಗಳ ಸಂಖ್ಯೆ 46 ದಿನಗಳಲ್ಲಿ 1975ಕ್ಕೆ ತಲುಪಿದೆ. ಈ ಅವಧಿಯಲ್ಲಿ ಒಟ್ಟು 56 ಜನರು ಈ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ. ಅಮೇರಿಕಾ ಕುರಿತು ಹೇಳುವುದಾದರೆ. ಜನವರಿ 20, 2020ರಂದು ಇಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು. 53 ದಿನಗಳಲ್ಲಿ ಇಲ್ಲಿನ ಪ್ರಕರಣಗಳ ಸಂಖ್ಯೆ 1630ಕ್ಕೆ ತಲುಪಿದ್ದು, ಈ ಅವಧಿಯಲ್ಲಿ ಒಟ್ಟು 41 ಜನ ಈ ಮಾರಕ ವೈರಸ್ ನ ಕಾಯಿಲೆಗೆ ಬಲಿಯಾಗಿದ್ದಾರೆ.


ಇರಾನ್ ನಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರಭಾವ ಬೀರಿದೆ ಈ ವೈರಸ್
ಇಟಲಿಯಲ್ಲಿ ಜನವರಿ 31, 2020 ರಂದು ಕೊರೊನಾ ವೈರಸ್ ನ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು ಹಾಗೂ ಕೇವಲ 32 ದಿನಗಳ ಅವಧಿಯಲ್ಲಿ ಇಲ್ಲಿನ ಪ್ರಕರಣಗಳ ಸಂಖ್ಯೆ 1500ರ ಗಡಿ ದಾಟಿದೆ (1701).  ಅಷ್ಟೇ ಅಲ್ಲ ಕೇವಲ 32 ದಿನಗಳ ಅವದಿಯಲ್ಲಿ ಇಲ್ಲಿ ಸುಮಾರು 41 ಜನ ಈ ಮಾರಕ ಕಾಯಿಲೆಗೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್ ಕುರಿತು ಹೇಳುವುದಾದರೆ, ಇರಾನ್ ನಲ್ಲಿ ಕೇವಲ 13 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1500ರ ಗಡಿ ದಾಟಿದ್ದು, ಈ ಅವಧಿಯಲ್ಲಿ ಒಟ್ಟು 66 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.


ಸ್ಪೇನ್ ನಲ್ಲಿ 40 ದಿನಗಳ ಅವಧಿಯಲ್ಲಿ 1500 ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ
ಜನವರಿ 31, 2020 ರಲ್ಲಿ ಸ್ಪೇನ್ ನಲ್ಲಿ ಕೊರೊನಾ ವೈರಸ್ ನ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು ಹಾಗೂ ಇಲ್ಲಿ ಕೇವಲ 40 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1500ರ ಗಡಿ ದಾಟಿದೆ. 40 ದಿನಗಳ ಬಳಿಕ ಅಂದರೆ ಮಾರ್ಚ್ 10, 2020ರವರೆಗೆ ಇಲ್ಲಿನ ಪ್ರಕರಣಗಳ ಸಂಖ್ಯೆ 1695 ಕ್ಕೆ ತಲುಪಿದೆ. ಈ ಅವಧಿಯಲ್ಲಿ ಇಟಲಿಯಲ್ಲಿ ಒಟ್ಟು 36 ಜನರು ಈ ಮಾರಕ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಇಡೀ ವಿಶ್ವದಲ್ಲಿ ಸದ್ಯ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 9 ಲಕ್ಷದ ಗಡಿ ದಾಟಿದ್ದು, ಇಟಲಿಯಲ್ಲಿ ಅತಿ ಹೆಚ್ಚು ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಸದ್ಯ ಚೀನಾ ಈ ಎರಡೂ ವಿಷಯಗಳಲ್ಲಿ ಭಾರಿ ಹಿಂದೆ ಬಿದ್ದಿದೆ. ಸದ್ಯ ಅಲ್ಲಿ ಕೊರೊನಾ ವೈರಸ್ ನ ಅತಿ ಕಡಿಮೆ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ.