ನವದೆಹಲಿ: ಗುಜರಾತ್ ಮತ್ತು ಹಿಮಾಚಲಪ್ರದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಜಯಗಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾತನಾಡಿದ ಅವರು, ಎರಡೂ ರಾಜ್ಯಗಳ ಜನತೆಗೆ ನೀಡಿದ ಆದೇಶಕ್ಕೆ ಆಭಾರಿಯಾಗಿದ್ದೇನೆ  ಎಂದು ಹೇಳಿದರು.


COMMERCIAL BREAK
SCROLL TO CONTINUE READING

ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ  ಮಾತನಾಡಿದ ಪ್ರಧಾನಿ ಮೋದಿ, ಜನರು ಅಭಿವೃದ್ದಿಯ ರಾಜಕಾರಣಕ್ಕೆಕ್ಕೆ ಮತ ಚಲಾಯಿಸಿದ್ದಾರೆ ಮತ್ತು ವಿರೋಧ ಪಕ್ಷಗಳ ವಿಭಜನೆಯ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.


ಸರ್ಕಾರದ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ನಂತಹ ಆರ್ಥಿಕ ಸುಧಾರಣೆಗಳನ್ನು ಜನರು ಒಪ್ಪಿಕೊಂಡಿದ್ದಾರೆ. ಉತ್ತರ ಪ್ರದೇಶದ ನಾಗರಿಕ ಚುನಾವಣೆಗಳಲ್ಲಿ ಸಹ,  ಜಿಎಸ್ಟಿ ಕಾರಣದಿಂದಾಗಿ ಬಿಜೆಪಿಯು ನಾಶವಾಗುತ್ತದೆ ಎಂದು ಹೇಳಲಾಗಿತ್ತು. ಗುಜರಾತ್ ಚುನಾವಣೆಗಳ ಮುಂಚೆ ಸಹ, ಇಂತಹ ವದಂತಿಗಳನ್ನು ಪ್ರಸಾರ ಮಾಡಲಾಯಿತು. ಮಹಾರಾಷ್ಟ್ರದಲ್ಲಿಯೂ ಸಹ ಅವರು ಅದನ್ನೇ ಪುನರುಚ್ಚರಿಸಿದರು. ಆದರೆ ಪ್ರತಿ ಚುನಾವಣೆಗಳಲ್ಲಿ ನಾವು  ಅಭೂತಪೂರ್ವ ಪ್ರತಿಕ್ರಿಯೆಯನ್ನು ನಾವು ಪಡೆಯುತ್ತಿದ್ದೇವೆ.


ಅಭಿವೃದ್ದಿಯನ್ನು ವ್ಯಂಗವಾಡುವವರನ್ನು  ಜನರು   ಸಹಿಸುವುದಿಲ್ಲ, ನಮ್ಮ  ಮೇಲೆ ಎಲ್ಲಾ ರೀತಿಯಿಂದಲೂ ನಮ್ಮನ್ನು ಸೋಲಿಸಲು ಪ್ರಯತ್ನ ಪಟ್ಟರು,ಆದರೆ ಅಂತಿಮವಾಗಿ ಅವರು ವಿಫಲರಾಗಿದ್ದಾರೆ ಎಂದು ವಿರೋಧ ಪಕ್ಷಗಳನ್ನು ಮೋದಿ ತರಾಟೆಗೆ ತೆಗೆದುಕೊಂಡರು 


ವೈಯಕ್ತಿಕವಾಗಿ ನನಗೆ, ಗುಜರಾತ್ ವಿಜಯವು ಎರಡು ರೀತಿಯ  ಸಂತೋಷಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ, ದೀರ್ಘಕಾಲ ಅಧಿಕಾರದಲ್ಲಿದ್ದ ವ್ಯಕ್ತಿ   ರಾಜ್ಯದಿಂದ ಹೊರಬಂದ ನಂತರ ಜನರು ಮರೆಯುತ್ತಾರೆ. ಆದರೆ ನಂಗೆ ಹಾಗೆ ಆಗಿಲ್ಲ ಎಂದು ಸಂತಸವ್ಯಕ್ತಪಡಿಸಿದರು,ಈ ನಿಟ್ಟಿನಲ್ಲಿ  ಬಿಜೆಪಿ ಕಾರ್ಯಕರ್ತರು ರಾಜ್ಯವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದು ಪ್ರಧಾನಿ ಜನರು ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. 


ಬಿಜೆಪಿಯ ವಿಕಾಸ್ ಯಾತ್ರೆ ಇಲ್ಲಿಗೆ ನಿಲ್ಲುವುದಿಲ್ಲ,ಅದು ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಕ್ಕೆ ಹೋಗಲಿದೆ" ಎಂದು ಹೇಳಿದ  ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಅವರಿಗೆ ಧನ್ಯವಾದ ಸಲ್ಲಿಸಿದರು.