ನವದೆಹಲಿ: ಮಲೇಷಿಯಾದಲ್ಲಿ ಅಪಹರಣಕ್ಕೆ ಒಳಗಾಗಿದ್ದ ಭಾರತೀಯನನ್ನು ಪೊಲೀಸರು ರಕ್ಷಿಸಿದ್ದು, ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಪೊಲೀಸರು ರಕ್ಷಿಸಿರುವ ಭಾರತೀಯ ಮಧ್ಯಪ್ರದೇಶ ಮೂಲದ ಸಂಜೀವ್ ಎಂದು ಗುರುತಿಸಲಾಗಿದೆ. ಈತನನ್ನು ರಾಯಲ್ ಮಲೇಷಿಯನ್ ಪೊಲೀಸರು ಶನಿವಾರ ರಕ್ಷಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಮಲೇಷಿಯಾ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಗಾಗಿ ಮಲೇಷಿಯಾದಲ್ಲಿರುವ ಭಾರತಿಯ ರಾಯಭಾರಿ ಮೃದುಲ್ ಕುಮಾರ್ ಮತ್ತವರ ತಂಡ ಪ್ರಶಂಸೆಗೆ ಅರ್ಹವಾಗಿದೆ ಎಂದಿದ್ದಾರೆ.



ಇದೇ ವೇಳೆ, ಮಲೇಷಿಯಾ ಹೈ ಕಮಿಷನ್ ಕೂಡ ಟ್ವೀಟ್ ಮಾಡಿದ್ದು, "ಅಪಹರಣಕ್ಕೆ ಒಳಗಾಗಿದ್ದ ಸಂಜೀವ್ ಎಂಬಾತನನ್ನು ರಾಯಲ್ ಮಲೇಷಿಯನ್ ಪೊಲೀಸರು ಅಪಹರಣಕಾರರಿಂದ ಜೋಹಾರ್ ರಾಜ್ಯದಲ್ಲಿ ಜುಲೈ 28ರಂದು ರಕ್ಷಿಸಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ವೇಳೆ ಭಾರತೀಯ ಹೈಕಮಿಷನ್ ಪೊಲೀಸರು ನಮ್ಮ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು" ಎಂದಿದ್ದಾರೆ. 


ಮತ್ತೊಂದೆಡೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಸಂಜೀವ್ ರಕ್ಷಣೆಗೆ ಸಂತಸ ವ್ಯಕ್ತಪಡಿಸಿದ್ದು, ವಿದೇಶಾಂಗ ಸಚಿವಾಲಯ, ರಾಯಲ್ ಮಲೇಷಿಯನ್ ಪೋಲಿಸ್ ಮತ್ತು ಭಾರತೀಯ ಹೈಕಮಿಷನ್ ಗೆ ತ್ವರಿತ ಕಾರ್ಯಾಚರಣೆಗಾಗಿ ಅಭಿನಂದನೆ ಸಲ್ಲಿಸಿದ್ದಾರೆ.