Indian Book Of Records: ಅತ್ಯಂತ ಉದ್ದದ ನಾಲಿಗೆ ಹೊಂದಿರುವ ಈ ಯುವಕ ಏನೇನು ಮಾಡ್ತಾನೆ ಗೊತ್ತಾ..?
ಸಾಮಾನ್ಯವಾಗಿ ಪುರುಷರ ನಾಲಿಗೆ 8.5 ಸೆಂಟಿಮೀಟರ್ ಹಾಗೂ ಮಹಿಳೆಯರ ನಾಲಿಗೆ 7.9 ಸೆಂಟಿಮೀಟರ್ ವರೆಗೆ ಇರುತ್ತದೆ.
ವಿರುಧುನಗರ: ಸಾಮಾನ್ಯವಾಗಿ ಜಾಸ್ತಿ ಮಾತನಾಡುವವರನ್ನು ನಾವು ನಾಲಿಗೆ ಉದ್ದ ಇದೆ ಎಂದು ಹೇಳುತ್ತೇವೆ. ಆದರೆ ತಮಿಳುನಾಡಿ(TamilNadu)ನ ಈ ಯುವಕ ತನ್ನ ಉದ್ದದ ನಾಲಿಗೆಯ ಮೂಲಕ ಸಖತ್ ಸದ್ದು ಮಾಡುತ್ತಿದ್ದಾನೆ. ಹೌದು, ವಿರುಧುನಗರದ ತಿರುತಂಗಲ್ ನಿವಾಸಿಯಾಗಿರುವ 20 ವರ್ಷದ ಕೆ.ಪ್ರವೀಣ್ ಅತ್ಯಂತ ಉದ್ದದ ನಾಲಿಗೆಯ ಕಾರಣಕ್ಕೆ ಭಾರೀ ಸುದ್ದಿಯಾಗುತ್ತಿದ್ದಾನೆ.
ಸಾಮಾನ್ಯವಾಗಿ ಪುರುಷರ ನಾಲಿಗೆ 8.5 ಸೆಂಟಿಮೀಟರ್ ಹಾಗೂ ಮಹಿಳೆಯರ ನಾಲಿಗೆ 7.9 ಸೆಂಟಿಮೀಟರ್ ವರೆಗೆ ಇರುತ್ತದೆ. ಆದರೆ ವಿಶ್ವದಲ್ಲಿ ಕೆಲವು ಜನರು ಸಾಮಾನ್ಯಕ್ಕಿಂತಲೂ ಉದ್ದವಾದ ನಾಲಿಗೆಯನ್ನು ಹೊಂದಿದ್ದಾರೆ. ಅದೇ ರೀತಿ ತಮಿಳುನಾಡಿನ ಕೆ.ಪ್ರವೀಣ್ ತನ್ನ ನಾಲಿಗೆ ಕಾರಣಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್(Indian Book of Records) ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪ್ರವೀಣ್ ನಾಲಿಗೆ ಬರೋಬ್ಬರಿ 10.8 ಸೆಂಟಿಮೀಟರ್ ಇದ್ದು, ಇದೀಗ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗಾಗಿ ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: Weird Goat : ಪ್ರಕೃತಿಯ ಅದ್ಭುತ! ಈ ಮೇಕೆ ಮೈ ಮೇಲೆ ಒಂದು ಕಡೆ 'ಓಂ' ಒಂದು ಕಡೆ 'ಮೊಹಮ್ಮದ್'
ಅತಿ ಉದ್ದದ ನಾಲಿಗೆ(Worlds Longest Tongue) ಹೊಂದಿರುವ ಕಾರಣಕ್ಕೆ ಪ್ರವೀಣ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. 2021ರ ಫೆಬ್ರುವರಿಯಲ್ಲಿ ಇವರ ನಾಲಿಗೆಯ ಉದ್ದವನ್ನು ಅಳತೆ ಮಾಡಲಾಗಿತ್ತು.
ಸದ್ಯ ವಿಶ್ವದ ಅತ್ಯಂತ ಉದ್ದದ ನಾಲಿಗೆ ಹೊಂದಿರುವ ದಾಖಲೆ ಅಮೆರಿಕ(America) ದ ಕ್ಯಾಲಿಫೋರ್ನಿಯಾ ನಿವಾಸಿ ನಿಕ್ ಸ್ಟೋಬರ್ಲ್ ಅವರ ಹೆಸರಿನಲ್ಲಿದೆ. 2012ರ ಗಿನ್ನಿಸ್ ವರ್ಲ್ಡ್ ರೆಕಾರ್ಡ್ನ ಪ್ರಕಾರ ನಿಕ್ ಅವರ ನಾಲಿಯ ಉದ್ದ 10.1 ಸೆಂಟಿಮೀಟರ್ ಇದೆ. ರೋಬಾಟಿಕ್ಸ್ ಇಂಜಿನಿಯರಿಂಗ್ ಪದವಿ ಅಧ್ಯಯನ ಮಾಡುತ್ತಿರುವ ಪ್ರವೀಣ್ ಕಳೆದ ವರ್ಷ ಏಷ್ಯಾ ಬುಕ್ ಆಪ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಕೇವಲ ಒಂದೇ ನಿಮಿಷದಲ್ಲಿ 219 ಬಾರಿ ತಮ್ಮ ನಾಲಿಗೆಯನ್ನು ಮೂಗಿಗೆ ಮುಟ್ಟಿಸಿ ಅಚ್ಚರಿ ಮೂಡಿಸಿದ್ದರು.
ಪ್ರವೀಣ್ ತನ್ನ ನಾಲಿಯನ್ನು ಮೂಗಿಗೆ ಮಾತ್ರವಲ್ಲದೆ ಕಣ್ಣಿನ ಹತ್ತಿರಕ್ಕೂ ಮುಟ್ಟಿಸುವ ಸಾಮರ್ಥ್ಯ ಹೊಂದಿದ್ದಾನೆ. ತನ್ನ ನಾಲಿಗೆಯನ್ನು ಕಣ್ಣಿನವರೆಗೂ ಮುಟ್ಟಿಸಬೇಕೆಂದು ಅವರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಉದ್ದದ ನಾಲಿಯಿಂದ ತನ್ನ ಮೂಗು ಮತ್ತು ಮೊಣಕೈನ ಬದಿಗೆ ಸಲೀಸಾಗಿ ಸ್ಪರ್ಶಿಸುತ್ತಾರೆ. ಅಭ್ಯಾಸದ ರೂಢಿಯಿಂದಾಗಿ ಪ್ರವೀಣ್ ತನ್ನ ನಾಲಿಗೆಯನ್ನು ಮೂಗಿನ ಕುಳಿಯಲ್ಲಿ ಮರೆಮಾಚಿ ಫ್ರಾಂಕ್ ಮಾಡುತ್ತಾರೆ ಮತ್ತು ಅದಕ್ಕೆ ಅದೃಶ್ಯ ನಾಲಿಗೆ ಎಂದು ಕರೆಯುತ್ತಾರೆ. ಇದಷ್ಟೇ ಅಲ್ಲದೆ ತಮ್ಮ ನಾಲಿಗೆ ಮೂಲಕ ಅವರು ಪೇಟಿಂಗ್ಸ್ ಮತ್ತು ಅಕ್ಷರಗಳನ್ನು ಬರೆಯುವ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಹೈಅಲರ್ಟ್,19 ಮಾದರಿಗಳಲ್ಲಿ 13 ಜಿಕಾ ಪ್ರಕರಣಗಳ ಪತ್ತೆ
ಸದ್ಯ ಪ್ರವೀಣ್ ವಿಶ್ವದಲ್ಲಿಯೇ ಅತ್ಯಂತ ಉದ್ದದ ನಾಲಿಗೆ ಹೊಂದಿದ್ದರೂ ಆರ್ಥಿಕ ಪರಿಸ್ಥಿತಿಯಿಂದಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್(Guinness Book of World Records) ಗೆ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನ್ನ ಸಾಧನೆಯನ್ನು ಜಗತ್ತಿಗೆ ಸಾರಲು ಪ್ರವೀಣ್ ಹಣ ಸಂಗ್ರಹ ಮಾಡುತ್ತಿದ್ದಾರೆ. ಮುಂದೊಂದು ದಿನ ಅವರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.