ಕೇರಳದಲ್ಲಿ ಹೈಅಲರ್ಟ್,19 ಮಾದರಿಗಳಲ್ಲಿ 13 ಜಿಕಾ ಪ್ರಕರಣಗಳ ಪತ್ತೆ

ಕೇರಳದಲ್ಲಿ ಜಿಕಾ ವೈರಸ್ ಪ್ರಕರಣಗಳು ಇಂದು 14 ಕ್ಕೆ ಏರಿವೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಇನ್ನೂ 13 ಪ್ರಕರಣಗಳನ್ನು ಧೃಡಪಡಿಸಿರುವ ಹಿನ್ನಲೆಯಲ್ಲಿ ಈಗ ರಾಜ್ಯವು ಹೈಅಲರ್ಟ್ ನಲ್ಲಿದೆ.

Written by - Zee Kannada News Desk | Last Updated : Jul 9, 2021, 09:38 PM IST
  • ಕೇರಳದಲ್ಲಿ ಜಿಕಾ ವೈರಸ್ ಪ್ರಕರಣಗಳು ಇಂದು 14 ಕ್ಕೆ ಏರಿವೆ,
  • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಇನ್ನೂ 13 ಪ್ರಕರಣಗಳನ್ನು ಧೃಡಪಡಿಸಿರುವ ಹಿನ್ನಲೆಯಲ್ಲಿ ಈಗ ರಾಜ್ಯವು ಹೈಅಲರ್ಟ್ ನಲ್ಲಿದೆ.
ಕೇರಳದಲ್ಲಿ ಹೈಅಲರ್ಟ್,19 ಮಾದರಿಗಳಲ್ಲಿ 13 ಜಿಕಾ ಪ್ರಕರಣಗಳ ಪತ್ತೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೇರಳದಲ್ಲಿ ಜಿಕಾ ವೈರಸ್ ಪ್ರಕರಣಗಳು ಇಂದು 14 ಕ್ಕೆ ಏರಿವೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಇನ್ನೂ 13 ಪ್ರಕರಣಗಳನ್ನು ಧೃಡಪಡಿಸಿರುವ ಹಿನ್ನಲೆಯಲ್ಲಿ ಈಗ ರಾಜ್ಯವು ಹೈಅಲರ್ಟ್ ನಲ್ಲಿದೆ.

ಇದನ್ನೂ ಓದಿ: ಲೈಂಗಿಕ ಸಂಬಂಧದಿಂದಲೂ ಕೂಡ ಹರಡುತ್ತಂತೆ ಈ ವೈರಸ್, ಬೆಚ್ಚಿಬೀಳಿಸುವ ಸಂಗತಿ ಹೊರಹಾಕಿದ ಅಧ್ಯಯನ

ಸೋಂಕಿತರಲ್ಲಿ 24 ವರ್ಷದ ಗರ್ಭಿಣಿ ಮಹಿಳೆಯೊಬ್ಬರು ಗುರುವಾರ ಸೊಳ್ಳೆ ಹರಡುವ ರೋಗದಿಂದ ಬಳಲುತ್ತಿದ್ದಾರೆ. ಇದು ಕೇರಳದಲ್ಲಿ ಕಂಡು ಬಂದ ಜಿಕಾ ವೈರಸ್ (Zika Virus) ನ ಮೊದಲ ಪ್ರಕರಣವಾಗಿದೆ.'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ 19 ಮಾದರಿಗಳಲ್ಲಿ 13 ಜಿಕಾ ವೈರಸ್‌ಗೆ ಧನಾತ್ಮಕವೆಂದು ಕಂಡುಬಂದಿದೆ" ಎಂದು ರಾಜ್ಯ ಸರ್ಕಾರ ತಿಳಿಸಿದೆ.ರೋಗಲಕ್ಷಣಗಳು ಡೆಂಗ್ಯೂಗೆ ಹೋಲುತ್ತವೆ ಮತ್ತು ಅವುಗಳಲ್ಲಿ ಜ್ವರ, ದದ್ದುಗಳು ಮತ್ತು ಕೀಲು ನೋವು ಸೇರಿವೆ.

ಇದನ್ನೂ ಓದಿ: Zika Virus Symptoms : ಕೇರಳದಲ್ಲಿ ಜಿಕಾ ವೈರಸ್ ಪತ್ತೆ : ಇಲ್ಲಿದೆ ವೈರಸ್‌ನ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ

ಜಿಕಾ ವೈರಸ್ ಹರಡುವುದನ್ನು ನಿಯಂತ್ರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.ಗರ್ಭಿಣಿಯರಿಗೆ ಜ್ವರ ಬಂದರೆ ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವರು ಜಿಲ್ಲಾ ವೈದ್ಯಕೀಯ ಅಧಿಕಾರಿಗಳ (ಡಿಎಂಒ) ಸಭೆಯಲ್ಲಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News