ಪಣಜಿ: ಗೋವಾದ ಕಾಬೊ ಡಿ ರಾಮಾ ಬೀಚ್ ಹತ್ತಿರ ಮುಳುಗುತ್ತಿದ್ದ ವ್ಯಕ್ತಿ ಗುರುವಾರ ಭಾರತೀಯ ಕೋಸ್ಟ್ ಗಾರ್ಡ್ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ. 


COMMERCIAL BREAK
SCROLL TO CONTINUE READING

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ವಾಯು ಚಂಡಮಾರುತ ಈ ಪ್ರದೇಶದಲ್ಲೂ ಭಾರೀ ಪ್ರಭಾವ ಬೀರಿತು. 20 ವರ್ಷದ ವ್ಯಕ್ತಿ ಬಲವಾದ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಅದಾಗ್ಯೂ, ಆ ದೊಡ್ಡ ದೊಡ್ಡ ಅಲೆಗಳ ನಡುವೆಯೂ ಪ್ರಾಣ ರಕ್ಷಣೆಗಾಗಿ ಆತ ಹೋರಾಡುತ್ತಿದ್ದರು.


1.23 ನಿಮಿಷಗಳ ವೀಡಿಯೋವು ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಆ ವ್ಯಕ್ತಿಯನ್ನು ನೀರಿನಿಂದ ಎತ್ತುವಂತೆ ತೋರಿಸುತ್ತದೆ.



ಕ್ಯಾಬೊ ಡೆ ರಾಮಾ ಬೀಚ್ನ ಉತ್ತರದ 2 ನಾಟಿಕಲ್ ಮೈಲುಗಳ ಅಲೆಗೆ 20 ರ ಹರೆಯದ ವ್ಯಕ್ತಿ ಸಿಲುಕಿದ್ದರು. ಈ ವೇಳೆ ತಕ್ಷಣ ಕಾರ್ಯೋನ್ಮುಖರಾದ ಕೋಸ್ಟ್ ಗಾರ್ಡ್ ಪಡೆ ಆತನನ್ನು ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾದರು.


ಸಮುದ್ರದ ಅಲೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕೋಸ್ಟ್ ಗಾರ್ಡ್ ಏರ್ ಎನ್‌ಕ್ಲೇವ್‌ಗೆ ಕರೆದೊಯ್ಯಲಾಯಿತು. ತಕ್ಷಣ ಅಗತ್ಯ ವೈದ್ಯಕೀಯ ನೆರವಿಗಾಗಿ ಐಎನ್‌ಹೆಚ್ಎಸ್ ಜೀವಂತಿ ಆಸ್ಪತ್ರೆಗೆ ಸ್ಥಳಾಂತರಿಸಲು ಅಂಬ್ಯುಲೆನ್ಸ್ ಜೊತೆಗೆ ವೈದ್ಯಕೀಯ ತಂಡವನ್ನು ಸಿದ್ಧಪಡಿಸಲಾಗಿದೆ.