Indus Water Treaty With Pakistan: ಭಾರತ ಸರ್ಕಾರವು ಸೆಪ್ಟೆಂಬರ್ 1960 ರ ಸಿಂಧೂ ಜಲ ಒಪ್ಪಂದda ತಿದ್ದುಪಡಿಗಾಗಿ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ. ಭಾರತ ಸರ್ಕಾರವು, 'ಪಾಕಿಸ್ತಾನದ ಎಲ್ಲಾ ತಪ್ಪು ಕ್ರಮಗಳು ಸಿಂಧೂ ಜಲ ಒಪ್ಪಂದದ ನಿಬಂಧನೆಗಳು ಮತ್ತು ಅವುಗಳ ಅನುಷ್ಠಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಮತ್ತು ಭಾರತವನ್ನು ಐಡಬ್ಲ್ಯೂಟಿ ತಿದ್ದುಪಡಿಗೆ ನೋಟಿಸ್ ನೀಡುವಂತೆ ಒತ್ತಾಯಿಸಿದೆ' ಎಂದಿದೆ.


COMMERCIAL BREAK
SCROLL TO CONTINUE READING

ತನ್ನ ಜವಾಬ್ದಾರಿಯನ್ನು ಪೂರೈಸಿದ ಭಾರತ
ಮೂಲಗಳ ಪ್ರಕಾರ, ಪಾಕಿಸ್ತಾನದ ವರ್ತನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಅಕ್ಷರಶಃ ಅನುಷ್ಠಾನಗೊಳಿಸುವಲ್ಲಿ ಭಾರತವು ದೃಢವಾದ ಬೆಂಬಲಿಗ ಮತ್ತು ಜವಾಬ್ದಾರಿಯುತ ಪಾಲುದಾರ ರಾಷ್ಟ್ರವಾಗಿದೆ ಎಂದು ಹೇಳಿದೆ, ಆದರೆ ಮತ್ತೊಂದು ಕಡೆಯಿಂದ ಇದು ಸಂಭವಸಿಲ್ಲ ಎಂದು ತನ್ನ ಅಸಮಾಧಾನ ಹೊರಹಾಕಿದೆ.


ಸಿಂಧೂ ಆಯೋಗಕ್ಕೆ ನೋಟಿಸ್
ಭಾರತವು ಪರಸ್ಪರ ಮಧ್ಯಸ್ಥಿಕೆಯ ಮಾರ್ಗವನ್ನು ಕಂಡುಕೊಳ್ಳಲು ಪದೇ ಪದೇ ಪ್ರಯತ್ನಿಸುತ್ತಿದ್ದರೂ, 2017 ರಿಂದ 2022 ರವರೆಗೆ ಶಾಶ್ವತ ಸಿಂಧೂ ಆಯೋಗದ 5 ಸಭೆಗಳಲ್ಲಿ ಈ ವಿಷಯವನ್ನು ಚರ್ಚಿಸಲು ಪಾಕಿಸ್ತಾನ ನಿರಾಕರಿಸಿದೆ ಎಂದು ಭಾರತ ಸರ್ಕಾರ ಹೇಳಿದೆ. ಇಂತಹ ಕಾರಣಗಳಿಂದಾಗಿ ಇದೀಗ ಪಾಕಿಸ್ತಾನಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.


ಇದನ್ನೂ ಓದಿ-ಮಾರುಕಟ್ಟೆಯ ಭಾರಿ ಕುಸಿತಕ್ಕೆ ಕಾರಣವಾದ ಅಡಾನಿ ಗ್ರೂಪ್, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ


ನೋಟಿಸ್ ಉದ್ದೇಶ
ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯನ್ನು ಸರಿಪಡಿಸಲು 90 ದಿನಗಳೊಳಗೆ ಅಂತರ-ಸರ್ಕಾರಿ ಮಾತುಕತೆಗೆ ಪ್ರವೇಶಿಸಲು ಪಾಕಿಸ್ತಾನಕ್ಕೆ ಅವಕಾಶವನ್ನು ಒದಗಿಸುವುದು ಈ ಸೂಚನೆಯ ಉದ್ದೇಶವಾಗಿದೆ. ಈ ಪ್ರಕ್ರಿಯೆಯು ಕಳೆದ 62 ವರ್ಷಗಳಲ್ಲಿನ ಪರಿಸ್ಥಿತಿಯ ಬದಲಾವಣೆಗಳಿಗೆ ಅನುಗುಣವಾಗಿ ಸಿಂಧೂ ಜಲ ಒಪ್ಪಂದವನ್ನು ನವೀಕರಿಸುತ್ತದೆ.


ಇದನ್ನೂ ಓದಿ-ಹಳೆ ಪೆನ್ಷನ್ ಯೋಜನೆಯ ಕುರಿತು ಇಲ್ಲಿದೆ ಒಂದು ಅಪ್ಡೇಟ್! ಈ ಸರ್ಕಾರಿ ನೌಕರರಿಗೆ ಸಿಗಲಿದೆ ಓಪಿಎಸ್ ಲಾಭ


ಏನಿದು ಸಿಂಧೂ ಜಲ ಒಪ್ಪಂದ
ವಾಸ್ತವದಲ್ಲಿ, ಸಿಂಧೂ ಜಲ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ, ಸಟ್ಲೆಜ್, ಬಿಯಾಸ್ ಮತ್ತು ರಾವಿಯ ನೀರನ್ನು ಭಾರತಕ್ಕೆ ಮತ್ತು ಸಿಂಧೂ, ಜೀಲಂ ಮತ್ತು ಚೆನಾಬ್ ನೀರನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಭಾರತ ಮತ್ತು ಪಾಕಿಸ್ತಾನವು 9 ವರ್ಷಗಳ ಮಾತುಕತೆಯ ನಂತರ 19 ಸೆಪ್ಟೆಂಬರ್ 1960 ರಂದು ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿವೆ, ಇದರಲ್ಲಿ ವಿಶ್ವ ಬ್ಯಾಂಕ್ ಸಹ ಸಹಿ ಹಾಕಿತ್ತು. ಎರಡು ದೇಶಗಳ ಜಲ ಕಮಿಷನರ್‌ಗಳು ವರ್ಷಕ್ಕೆ ಎರಡು ಬಾರಿ ಭೇಟಿಯಾಗುತ್ತಾರೆ ಮತ್ತು ಯೋಜನಾ ಸ್ಥಳಗಳು ಮತ್ತು ಪ್ರಮುಖ ನದಿ ಮುಖ್ಯ ಕಾರ್ಯಗಳಿಗೆ ತಾಂತ್ರಿಕ ಭೇಟಿಗಳನ್ನು ಏರ್ಪಡಿಸುತ್ತಾರೆ. ಆದರೆ ಪಾಕಿಸ್ತಾನವು ಈ ಒಪ್ಪಂದದ ನಿಯಮಗಳು ಮತ್ತು ನಿಬಂಧನೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ ನಂತರ, ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.