ನವದೆಹಲಿ: ಅಟಾರಿ ರೈಲು ನಿಲ್ದಾಣದಲ್ಲಿ ಸಂಜೋತಾ ಎಕ್ಸ್ಪ್ರೆಸ್ ರೈಲಿಗಾಗಿ ಹಸಿವಿನಿಂದ ಕಾಯುತ್ತಿದ್ದ ಪಾಕಿಸ್ತಾನಿ ಪ್ರಯಾಣಿಕರಿಗೆ ಪಂಜಾಬ್ ಪೊಲೀಸರು ಶುಕ್ರವಾರ ಆಹಾರ ಒದಗಿಸಿದ್ದಾರೆ. 


COMMERCIAL BREAK
SCROLL TO CONTINUE READING

ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಉದ್ವೇಗದಿಂದಾಗಿ, ಪಾಕಿಸ್ತಾನದ ಆಡಳಿತವು ಎರಡು ದೇಶಗಳ ನಡುವೆ ಸಂಚರಿಸುವ ಸಂಜೋತ ಎಕ್ಷ್ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಗುರುವಾರ ಲಾಹೋರ್ ನಿಂದ 16 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ  ಸಂಜೋತಾ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಿರುವುದಾಗಿ ಪಾಕ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು DawnNewsTV ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ರೈಲಿಗಾಗಿ ಹಸಿವಿನಿಂದ ಕಾಯುತ್ತಿದ್ದ ಪ್ರಯಾಣಿಕರಿಗೆ ಪಂಜಾಬ್ ಪೊಲೀಸರು ಆಹಾರ ನೀಡಿದ್ದಾರೆ.


ಸಂಜೋತಾ ಎಕ್ಸ್ಪ್ರೆಸ್ ದೆಹಲಿಯಿಂದ ವಾರಕ್ಕೆ ಎರಡು ದಿನ ಬುಧವಾರ ಮತ್ತು ಭಾನುವಾರದಂದು ಚಲಿಸುತ್ತದೆ. ಲಾಹೋರ್ನಿಂದ ಸೋಮವಾರ ಮತ್ತು ಗುರುವಾರ ಹಿಂದಿರುಗುತ್ತದೆ.


ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಹತ್ಯೆ ದಾಳಿಯ ನಂತರ, ಈ ರೈಲಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿತ ಕಂಡುಬಂದಿದೆ. ಸೋಮವಾರ, ಕೇವಲ 100 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿದರು.