ನವದೆಹಲಿ: ಭಾರತೀಯ ರೈಲ್ವೇ (Indian Railways) ಮಂಗಳವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಅಡಿಯಲ್ಲಿ ಯಾವುದೇ ರಾಜ್ಯ ಸರ್ಕಾರ (State Government) ಅಥವಾ ಕಂಪನಿಯು (Companies) ರೈಲನ್ನು ಬಾಡಿಗೆಗೆ ಪಡೆಯಬಹುದು. ಇದಕ್ಕಾಗಿ ರೈಲ್ವೆ ಸಚಿವಾಲಯವು (Railway Ministry) ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸಿದೆ. ಈ ಸೇವೆಗೆ ರೈಲ್ವೆ ಕನಿಷ್ಠ ಶುಲ್ಕವನ್ನು ವಿಧಿಸುತ್ತದೆ. ಈ ಯೋಜನೆಗಾಗಿ ಒಟ್ಟು 3333 ಕೋಚ್‌ಗಳನ್ನು ಅಂದರೆ 190 ರೈಲುಗಳನ್ನು ರೈಲ್ವೆ ಇಲಾಖೆ  ಗುರುತಿಸಿದೆ.


COMMERCIAL BREAK
SCROLL TO CONTINUE READING

'ಭಾರತ್ ಗೌರವ್' ರೈಲು ಸಂಚರಿಸಲಿದೆ
ಇದಕ್ಕಾಗಿ 'ಭಾರತ್ ಗೌರವ್' ರೈಲು ಚಲಾಯಿಸುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashivini Vaishnav) ಘೋಷಿಸಿದ್ದಾರೆ. ಭಾರತ್ ಗೌರವ್ ರೈಲುಗಳು (Bharat Gaurav Train) ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಥೀಮ್ ಅನ್ನು ಆಧರಿಸಿವೆ. ರೈಲ್ವೆ ಇಲಾಖೆಯ ಪ್ರಕಾರ, ಇದಕ್ಕಾಗಿ ಸುಮಾರು 190 ರೈಲುಗಳನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಈ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ರೈಲ್ವೆ ಸಚಿವರು ಹೇಳಿದ್ದಾರೆ.


Indian Railways: ರೈಲಿನ ರಿಸರ್ವ್ ಟಿಕೆಟ್ ಅನ್ನು ರದ್ದುಗೊಳಿಸುವ ಮೊದಲು, IRCTC ಯ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ


ಈ ರೈಲುಗಳು ಪ್ರವಾಸಿ ತಾಣಗಳನ್ನು ಸುತ್ತಲಿವೆ
ಭಾರತದ ಪ್ರವಾಸಿ ತಾಣಗಳಿಗೆ ಈ ರೈಲುಗಳನ್ನು ಸಂಚರಿಸಲಿವೆ. ಭಾರತ ಗೌರವ ರೈಲು, ರಾಮಾಯಣ ರೈಲು (Ramayan Train) ಭಾರತೀಯ ಸಂಸ್ಕೃತಿ, (Indian Culture) ನಮ್ಮ ವೈವಿಧ್ಯತೆ (Diversity) ಮತ್ತು ಪರಂಪರೆಯನ್ನು (Tradition) ತಿಳಿದುಕೊಳ್ಳಲು ಜನರಿಗೆ ಅವಕಾಶ ನೀಡಲಿವೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ರೈಲ್ವೇ ಮುಂದಿನ ಸಮಯದಲ್ಲಿ ಗುರುಕೃಪಾ ಮತ್ತು ಸಫಾರಿ ರೈಲನ್ನು ಓಡಿಸಲಿದೆ.


ಇದನ್ನೂ ಓದಿ-Indian Railways: ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲುಗಳಲ್ಲಿ ಮತ್ತೆ ಆರಂಭವಾಗಲಿದೆ ಈ ಅಗತ್ಯ ಸೇವೆ


ಇಂದಿನಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ
ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಇಂದಿನಿಂದ ಈ ರೈಲುಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇದರಲ್ಲಿ ಎಲ್ಲಾ ರೀತಿಯ ರೈಲುಗಳು, ಎಸಿ, ನಾನ್ ಎಸಿ ಒಳಗೊಂಡಿರುತ್ತವೆ. ಇದಲ್ಲದೆ, ಕಂಪನಿಯು ಮಾರ್ಗವನ್ನು ನಿರ್ಧರಿಸುವ ಹಕ್ಕನ್ನು ಹೊಂದಿರಲಿದೆ. 


ಇದನ್ನೂ ಓದಿ-Railway News: ರೈಲುಗಳಲ್ಲಿ ಮತ್ತೆ ಆರಂಭಗೊಳ್ಳಲಿದೆ ಈ ಸೇವೆ, ಕೊರೊನಾ ಕಾರಣ ಸ್ಥಗಿತಗೊಳಿಸಲಾಗಿತ್ತು ಈ ಸೇವೆ


ಭಾರತ್ ಗೌರವ್ ರೈಲನ್ನು ಖಾಸಗಿ ವಲಯ ಮತ್ತು IRCTC ಎರಡೂ ನಿರ್ವಹಿಸಬಹುದು ಮತ್ತು ಈ ರೈಲುಗಳ ದರವನ್ನು ಪ್ರವಾಸ ನಿರ್ವಾಹಕರು ನಿರ್ಧರಿಸಲಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.