Railway News: ರೈಲುಗಳಲ್ಲಿ ಮತ್ತೆ ಆರಂಭಗೊಳ್ಳಲಿದೆ ಈ ಸೇವೆ, ಕೊರೊನಾ ಕಾರಣ ಸ್ಥಗಿತಗೊಳಿಸಲಾಗಿತ್ತು ಈ ಸೇವೆ

Railway News: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಾಧಾನದ ಸುದ್ದಿಯೊಂದು ಪ್ರಕಟವಾಗಿದೆ, ಏಕೆಂದರೆ ಇದೀಗ ಮತ್ತೆ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಅಂದರೆ, ರೈಲುಗಳಲ್ಲಿ ಬೇಯಿಸಿದ ಆಹಾರವನ್ನು ನೀಡುವ (Cooked Food On Train) ಸೇವೆಯನ್ನು ರೈಲ್ವೆ ಇಲಾಖೆ ಪುನರಾರಂಭಿಸಲಿದೆ.

Written by - Nitin Tabib | Last Updated : Nov 19, 2021, 07:54 PM IST
  • ರೈಲುಗಳಲ್ಲಿ ಬೇಯಿಸಿದ ಆಹಾರ ಪೂರೈಕೆ ಪುನರಾರಂಭವಾಗಲಿದೆ.
  • ಕೊವಿಡ್-19 ಸಾಂಕ್ರಾಮಿಕದ ಕಾರಣ ಈ ಸೇವೆಯನ್ನು ನಿರ್ಬಂಧಿಸಲಾಗಿತ್ತು
  • ಪ್ಲಾಟ್ ಫಾರ್ಮ್ ಟಿಕೆಟ್ ಗಳ ದರದಲ್ಲಿಯೂ ಕೂಡ ಶೇ.15ರಷ್ಟು ಇಳಿಕೆ ನಿರೀಕ್ಷೆ.
Railway News: ರೈಲುಗಳಲ್ಲಿ ಮತ್ತೆ ಆರಂಭಗೊಳ್ಳಲಿದೆ ಈ ಸೇವೆ, ಕೊರೊನಾ  ಕಾರಣ ಸ್ಥಗಿತಗೊಳಿಸಲಾಗಿತ್ತು ಈ ಸೇವೆ title=
Railway News (File Photo)

Railway News: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಾಧಾನದ ಸುದ್ದಿಯೊಂದು ಪ್ರಕಟವಾಗಿದೆ, ಏಕೆಂದರೆ ಇದೀಗ ಮತ್ತೆ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಅಂದರೆ, ರೈಲುಗಳಲ್ಲಿ ಬೇಯಿಸಿದ ಆಹಾರವನ್ನು (Cooked Food) ನೀಡುವ ಸೇವೆಯನ್ನು ರೈಲ್ವೆ ಇಲಾಖೆ (Indian Railways) ಪುನರಾರಂಭಿಸಲಿದೆ. ಕೋವಿಡ್-19 (Covid-19 Pandemic) ನಿರ್ಬಂಧಗಳ ಕಾರಣ ರೈಲಿನಲ್ಲಿ ಆಹಾರ ನೀಡುವ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಭಾರತೀಯ ರೈಲ್ವೆ ಇದನ್ನು ಸ್ಥಗಿತಗೊಳಿಸಿತ್ತು. ರೈಲ್ವೆಯು ರೈಲುಗಳಲ್ಲಿ ಬೇಯಿಸಿದ ಆಹಾರವನ್ನು ಸ್ಥಗಿತಗೊಳಿಸುವುದರ ಜೊತೆಗೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಸಹ ದುಬಾರಿ ಮಾಡುವ ನಿರ್ಣಯ ಕೈಗೊಂಡಿತ್ತು. ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ದರ ಏರಿಕೆ  ಉದ್ದೇಶವು ರೈಲು ನಿಲ್ದಾಣಗಳಲ್ಲಿ ಜನಸಂದಣಿಯನ್ನು ತಡೆಯುವುದಾಗಿತ್ತು. 

ಇದನ್ನೂ ಓದಿ-ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ : ಸರ್ಕಾರದ ಈ ನಿರ್ಧಾರದಿಂದ ಸಿಗಲಿದೆ ಭಾರೀ ಲಾಭ

ಇದೇಎಗ ನೀವು ರೈಲುಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಸುವಾಗ ಸಸ್ಯಾಹಾರಿ ಆಹಾರವನ್ನು ತೆಗೆದುಕೊಂಡರೆ, ಅದರ ಶುದ್ಧತೆ ಕೂಡ ಸಂಪೂರ್ಣವಾಗಿ ಖಾತರಿಪಡಿಸಲಾಗುವುದು. ಪ್ರಯಾಣಿಕರಿಗೆ ಸಾಗಿಸಲು ಆಹಾರವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ, ಶುದ್ಧತೆಯ ಬಗ್ಗೆ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC), ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ. 

ಇದನ್ನೂ ಓದಿ-Mobile Phone Fells in Train: ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಬಿದ್ದರೆ, ಅದನ್ನು ಈ ರೀತಿ ಹಿಂಪಡೆಯಬಹುದು

ಇದೇ ವೇಳೆ, ರೈಲು ಟಿಕೆಟ್‌ಗಳು ಶೇ.15ರಷ್ಟು ಅಗ್ಗವಾಗುವನಿರೀಕ್ಷೆ ಇದೆ. ಕಳೆದ ವಾರ, ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ನಿಯಮಿತವಾಗಿ ಓಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿಟ್ಟು. ಅಂದರೆ, ಸಾಮಾನ್ಯ ಪ್ರಯಾಣಿಕ ರೈಲು ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ, ರೈಲುಗಳ ಕ್ರಮಬದ್ಧಗೊಳಿಸುವಿಕೆಯಿಂದಾಗಿ ಪ್ರಯಾಣ ದರಗಳು ಕಡಿಮೆಯಾಗಲಿವೆ. 

ಇದನ್ನೂ ಓದಿ-Indian Railways: ರೈಲ್ವೆಯ ಈ ಪ್ರಮುಖ ನಿಯಮ 6 ತಿಂಗಳವರೆಗೆ ವಿಸ್ತರಣೆ, ಉಲ್ಲಂಘಿಸಿದರೆ ಬೀಳುತ್ತೆ ದಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News