ನವದೆಹಲಿ: Indian Railways Latest News - ಭಾರತೀಯ ರೈಲಿನಲ್ಲಿನ ಪ್ರಯಾಣ ಇದೀಗ ಮತ್ತಷ್ಟು ಸುಗಮ, ಆರಾಮದಾಯಕ ಹಾಗೂ ಸುರಕ್ಷಿತವಾಗಲಿದೆ. ಶೀಘ್ರದಲ್ಲಿಯೇ ಭಾರತೀಯ ರೈಲಿನಲ್ಲಿ ನೀವು ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಏಕೆಂದರೆ ಇನ್ಮುಂದೆ ರೈಲು 4G ಮೇಲೆ ಸಂಚರಿಸಲಿದ್ದು, ಯಾತ್ರಿಗಳು ಸುಖದಿಂದ ನಿದ್ರಿಸಬಹುದಾಗಿದೆ. ಏಕೆಂದರೆ ರೈಲ್ವೆ ವಿಭಾಗ ತನಗೆ ಸಿಕ್ಕ ಸ್ಪೆಕ್ಟ್ರಮ್ ನಲ್ಲಿ ತನ್ನದೇ ಆದ 4G ಹಾಗೂ 5G ನೆಟ್ವರ್ಕ್ ಅಭಿವೃದ್ಧಿಪಡಿಸಬಹುದಾಗಿದೆ. ಆದರೆ ಮೊದಲು ಇಂಡಿಯನ್ ರೈಲ್ವೆ 4G ಮೇಲೆ ಮಾತ್ರ ಕಾರ್ಯನಿರ್ವಹಿಸಲಿದೆ. ಮುಂಬರುವ ದಿನಗಳಲ್ಲಿ ಆಗುತ್ತಿರುವ ಬದಲಾವಣೆಗಳ ನೇರ ಲಾಭ ಪ್ರಯಾಣಿಕರಿಗೆ ಸಿಗಲಿದೆ. ಇತ್ತೀಚೆಗಷ್ಟೇ ಮೋದಿ ಸಚಿವ ಸಂಪುಟ ರೈಲು ವಿಭಾಗಕ್ಕೆ 700 MHz ಬ್ರಾಡ್ ಬ್ಯಾಂಡ್ ಹಾಗೂ  5 MHz ಸ್ಪೆಕ್ಟ್ರಮ್  ಹಂಚಿಕೆ ಮಾಡಿದೆ. ಈ ಹಂಚಿಕೆಯ ಮೂಲಕ ರೈಲು ವಿಭಾಗ ತಂತ್ರಜ್ಞಾನದ ದಿಕ್ಕಿನಲ್ಲಿ ಹಲವು ದೊಡ್ಡ ಹೆಜ್ಜೆಗಳನ್ನು ಇಡಬಹುದು. 


COMMERCIAL BREAK
SCROLL TO CONTINUE READING

ಈ ಸ್ಪೆಕ್ಟ್ರಂ ಲಾಭಗಳು (Benefits Of Spectrum)
Real Time Tracking

>> ರೈಲು ಪ್ರಯಾಣಿಕರಿಗೆ ಸರಿಯಾದ ಮತ್ತು ರಿಯಲ್ ಟೈಮ್ ಆಧಾರಿತ ಟ್ರೇನ್ ಟೈಮಿಂಗ್ ಗೊತ್ತಾಗಲಿದೆ (Accurate Train Running Status).


Safety
>> ಭಾರತೀಯ ರೈಲು (Indian Railways) ತಂತ್ರಜ್ಞಾನದಲ್ಲಿ TCAS (Train Collision Avoidance System) ಸೆಟ್ ಅಪ್ ಅಳವಡಿಕೆಯ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರೈಲು ದುರ್ಘಟನೆಯ ಪ್ರಕರಣಗಳನ್ನು ತಡೆಯಬಹುದು.


Centralised Train Operations System
ವಿದೇಶಗಳ ಮಾದರಿಯಲ್ಲಿ ಭಾರತೀಯ ರೈಲುಗಳಲ್ಲಿಯೂ ಕೂಡ Centralised Train Operations System ಅನ್ನು ರೂಪಿಸಬಹುದಾಗಿದೆ. ಇದರಿಂದ ರೈಲುಗಳ ಸಂಚಾರದಲ್ಲಿ ಜಬರ್ದಸ್ತ್ ಸುಧಾರಣೆ ಕಂಡುಬರಲಿದೆ. ಒಂದೇ ಜಾಗದಿಂದ ವಿಶಾಲವಾದ ಟ್ರೈನ್ ನೆಟ್ವರ್ಕ್ ಸಿಸ್ಟಂ ಅನ್ನು ಆಪರೇಟ್ ಮಾಡಬಹುದು.


>> ಅಡ್ವಾನ್ಸ್  ಮಾಡರ್ನ್ ಸಿಗ್ನಲ್ ಸಿಸ್ಟಂನಲ್ಲಿ ಈ ಸ್ಪೆಕ್ಟ್ರಂ ಹಂಚಿಕೆ ಮಹತ್ವದ ಪಾತ್ರ ನಿರ್ವಹಿಸಲಿದೆ.
>> ರೈಲುಗಳ ಎವರೇಜ್ ಸ್ಪೀಡ್ ಹೆಚ್ಚಿಸಲು ಅನುಕೂಲವಾಗಲಿದೆ.
>> ಪ್ಯಾಸೆಂಜರ್ ರೈಲುಗಳಲ್ಲಿ ಅಳವಡಿಸಳಾಗಿರುವ CCTV ಕ್ಯಾಮೆರಾಗಳ ಮೂಲಕ ರಿಯಲ್ ಟೈಮ್ ಆಧಾರಿತ ಫೂಟೇಜ್ ಅಥವಾ ಲೈವ್ ಸ್ಟ್ರೀಮ್ ಮಾಡಬಹುದು.
>> ಸುರಕ್ಷತೆಯ ದೃಷ್ಟಿಯಿಂದ ಹಲವು ಲಾಭಗಳು ಸಿಗಲಿವೆ.
>> ಯಾತ್ರಿಗಳಿಗೆ ಆನ್ ಬೋರ್ಡ್ WiFi ಸೌಕರ್ಯ ಒದಗಿಸಲು ಕೂಡ ಇದು ಅನುವು ಮಾಡಿಕೊಡಲಿದೆ.


ಇದನ್ನೂ ಓದಿ-Gold Hallmarking ನಿಯಮಗಳಲ್ಲಿ ಬದಲಾವಣೆ ! ಇಂದು ಸಂಜೆ ಸರ್ಕಾರದ ಈ ತೀರ್ಮಾನ ಸಾಧ್ಯತೆ


ಏನಿದು 700MHz ಬ್ಯಾಂಡ್ ಹಾಗೂ 5MHz ಸ್ಪೆಕ್ಟ್ರಮ್ ?
ಸರಳ ಭಾಷೆಯಲ್ಲಿ ಹೇಳುವುದಾದರೆ ಪ್ರಸ್ತುತ ಭಾರತೀಯ ರೇಲ್ವೆ ಇಲಾಖೆಯ ಬಳಿ 2G ಸ್ಪೆಕ್ಟ್ರಮ್ ಇದೆ. ಇದನ್ನು ಸಿಗ್ನಲಿಂಗ್ ಹಾಗೂ ಸಂವಹನಕ್ಕಾಗಿ ಬಳಸಲಾಗುತ್ತದೆ. ಆದರೆ, ಸ್ಪೀಡ್ ಕಡಿಮೆ ಇರುವ ಕಾರಣ ಇದರಲ್ಲಿ ಹಲವು ಬಾರಿ ಅಡಚಣೆಗಳು ಎದುರಾಗುತ್ತವೆ. ಇದೀಗ ಭಾರತೀಯ ರೈಲು ವಿಭಾಗಕ್ಕೆ 700MHz ಬ್ಯಾಂಡ್ ಹಾಗೂ 5G ಸ್ಪೆಕ್ಟ್ರಮ್ ನೀಡಲಾಗಿದೆ. ಇದರಿಂದ ರೈಲುಗಳಿಗೆ 4G ನೆಟ್ವರ್ಕ್ ಮೇಲೆ ಸಂಚರಿಸುವ ಅವಕಾಶ ಸಿಗಲಿದೆ. 


ಇದನ್ನೂ ಓದಿ-First Death Due To Corona Vaccine! ದೇಶದಲ್ಲಿ ವ್ಯಾಕ್ಸಿನ್ ನಿಂದ ಮೊದಲ ಸಾವು ದೃಢ!


ಆದರೆ, ಈ ಸ್ಪೆಕ್ಟ್ರಮ್ 5Gಯನ್ನು ಕೂಡ ಸಪೋರ್ಟ್ ಮಾಡಲಿದೆ. ಈ ಸ್ಪೆಕ್ಟ್ರಮ್ ಸಹಾಯದಿಂದ ಭಾರತೀಯ ರೈಲು ವಿಭಾಗ ಎಲ್ಲಾ ರೂಟ್ ಗಳ ಮೇಲೆ 'LTE' ಆಧಾರಿತ ಮೊಬೈಲ್ ಟ್ರೈನ್ ರೇಡಿಯೋ ಕಮ್ಯೂನಿಕೇಶನ್ ಸೇವೆ ನೀಡಬಹುದು. ಪ್ರಸ್ತುತ ಸಂಪೂರ್ಣ ಭಾರತೀಯ ರೈಲು ವಿಭಾದದ ಕಮ್ಯೂನಿಕೇಶನ್ ನೆಟ್ವರ್ಕ್ ಆಪ್ಟಿಕಲ್ ಫೈಬರ್ ಅನ್ನು ಅವಲಂಭಿಸಿದೆ. ಹೊಸ ಸ್ಪೆಕ್ಟ್ರಮ್ ನಲ್ಲಿ ಹೈ ಸ್ಪೀಡ್ ರೇಡಿಯೋಗಳ ಬಳಕೆಯಾಗಲಿದೆ. 2G ಹಾಗೂ 4G ನೆಟ್ವರ್ಕ್ ಗಳಲ್ಲಿ ಅಂತರ ಏನಿದೆ ಎಂಬುದನ್ನು ಪ್ರಸ್ತುತ ದೇಶದ ನಾಗರಿಕರು ಅನುಭವಿಸುತ್ತಿದ್ದಾರೆ.


ಇದನ್ನೂ ಓದಿ-Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.