ನವದೆಹಲಿ: Indian Railways - ನೀವೂ ಒಂದು ವೇಳೆ ನಿರಂತರ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ, ಈ ಸುದ್ದಿ ನಿಮಗಾಗಿ.  ಭಾರತೀಯ ರೈಲ್ವೇಯ (Indian Railways Update) ಕೆಲವು ವಿಶೇಷ ನಿಯಮಗಳಿವೆ, ಅದರ ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ರೈಲಿನಲ್ಲಿ ಪ್ರಯಾಣಿಸುವ ಶೇ. 80 ರಷ್ಟು ಪ್ರಯಾಣಿಕರಿಗೆ ಈ ನಿಯಮಗಳು ತಿಳಿದಿಲ್ಲ.


COMMERCIAL BREAK
SCROLL TO CONTINUE READING

ಪ್ರಯಾಣದ ಸಮಯದಲ್ಲಿ ನಿಮ್ಮ ಸರಕು ಕಳ್ಳತನವಾದರೆ, ಅದಕ್ಕೆ ಪರಿಹಾರವನ್ನು ನೀವು ಪಡೆಯಬಹುದು. ಅಂದರೆ ನಿಮ್ಮ ಕಳೆದು ಹೋದ ವಸ್ತುಗಳಿಗೆ ನೀವು ಪರಿಹಾರವನ್ನು ಪಡೆಯಬಹುದು. ಅಷ್ಟೇ ಅಲ್ಲ, ಒಂದು ವೇಳೆ ನಿಮ್ಮ ಸರಕುಗಳು 6 ತಿಂಗಳೊಳಗೆ ನಿಮಗೆ ಮರಳಿ ಸಿಗದಿದ್ದರೆ, ನೀವು ಗ್ರಾಹಕರ ವೇದಿಕೆಗೆ ಮೊರೆಹೋಗಬಹುದು. ನೀವು ತಿಳಿದುಕೊಳ್ಳಬೇಕಾದ ಇಂತಹ ಹಲವು ನಿಯಮಗಳಿವೆ. ಈ ನಿಯಮಗಳ ಬಗ್ಗೆ ನಿಮಗೂ  ತಿಳಿದಿದ್ದರೆ ಪ್ರಯಾಣದ ಸಮಯದಲ್ಲಿ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ.


ಸರಕುಗಳ ಕಳ್ಳತನಕ್ಕೆ ಪರಿಹಾರ
ಸುಪ್ರೀಂ ಕೋರ್ಟ್‌ನ ನಿಯಮದ ಪ್ರಕಾರ ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಲಗೇಜ್ ಕಳ್ಳತನವಾಗಿದ್ದರೆ, ನೀವು ಆರ್‌ಪಿಎಫ್ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಬಹುದು. ಅಲ್ಲದೆ, ಇದೆ ಸಮಯದಲ್ಲಿ, ನೀವು ಫಾರ್ಮ್ ಅನ್ನು ಸಹ ಭರ್ತಿ ಮಾಡಿ. 6 ತಿಂಗಳವರೆಗೆ ನಿಮ್ಮ ಸರಕುಗಳು ಸಿಗದಿದ್ದರೆ ಗ್ರಾಹಕರ ವೇದಿಕೆಯಲ್ಲೂ ದೂರು ನೀಡಬೇಕು ಎಂದು ಅದರಲ್ಲಿ ಬರೆಯಲಾಗಿದೆ. ಇಷ್ಟೇ ಅಲ್ಲ, ಸರಕುಗಳ ಬೆಲೆಯನ್ನು ಅಂದಾಜು ಮಾಡುವ ಮೂಲಕ, ರೈಲ್ವೆ ತನ್ನ ಪರಿಹಾರವನ್ನು ಪಾವತಿಸುತ್ತದೆ. ಇದರಿಂದ ನಿಮ್ಮ ನಷ್ಟವನ್ನು ಸರಿದೂಗಿಸಲಾಗುತ್ತದೆ.


ವೇಟಿಂಗ್ ಟಿಕೆಟ್‌ನಲ್ಲಿ ನೀವು ಪ್ರಯಾಣಿಸುವುದು ಸಾಧ್ಯವಿಲ್ಲ
ನೀವು ವೇಟಿಂಗ್ ಲಿಸ್ಟ್ ಟಿಕೆಟ್ ಹೊಂದಿದ್ದರೆ, ನೀವು ರೈಲಿನ ಕಾಯ್ದಿರಿಸಿದ ಕೋಚ್‌ನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಪ್ರಯಾಣಿಸುವಾಗ ಸಿಕ್ಕಿಬಿದ್ದರೆ ಕನಿಷ್ಠ 250 ರೂಪಾಯಿ ದಂಡ ಪಾವತಿಸಿ ಮುಂದಿನ ನಿಲ್ದಾಣದಿಂದ ಜನರಲ್ ಕೋಚ್ ನಲ್ಲಿ ಪ್ರಯಾಣಿಸಬೇಕು. ಆದರೆ ನಾಲ್ವರಲ್ಲಿ ಇಬ್ಬರ ಟಿಕೆಟ್ ಕನ್ಫರ್ಮ್ ಆಗಿದ್ದರೆ ಟಿಟಿಇ ಅನುಮತಿ ಪಡೆದು ಉಳಿದ ಇಬ್ಬರು ಅವರ ಸೀಟಿಗೆ ಹೋಗಬಹುದು.


ಇದನ್ನೂ ಓದಿ-Indian Railways: 12ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ನೌಕರಿಯ ಅವಕಾಶ, ಇಂದೇ ಅರ್ಜಿ ಸಲ್ಲಿಸಿ


ಈ ಸ್ಥಿತಿಯಲ್ಲಿ ನೀವು ದಂಡವನ್ನು ಪಾವತಿಸಬೇಕಾಗುತ್ತದೆ
ಪ್ರಯಾಣದ ಸಮಯದಲ್ಲಿ ನೀವು ಟಿಕೆಟ್ ಹೊಂದಿಲ್ಲದಿದ್ದರೆ, ರೈಲ್ವೆ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿ, ನಿಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸುವ ನಿಯಮವಿದೆ. ಈ ಸೆಕ್ಷನ್ ಅಡಿಯಲ್ಲಿ, ನೀವು ಪ್ರಯಾಣಿಸುವ ದೂರಕ್ಕೆ ರೈಲ್ವೆಯಿಂದ ನಿಗದಿಪಡಿಸಲಾದ ಸರಳ ಶುಲ್ಕ ಅಥವಾ ರೈಲು ಹೋರಟ  ನಿಲ್ದಾಣದಿಂದ ಕ್ರಮಿಸುವ ದೂರಕ್ಕೆ ನಿಗದಿತ ಸರಳ ಶುಲ್ಕ ಮತ್ತು ರೂ 250 ದಂಡವನ್ನು ಸಹ ತೆಗೆದುಕೊಳ್ಳಬಹುದು. ನೀವು ಕಡಿಮೆ ದರ್ಜೆಯ ಟಿಕೆಟ್ ಹೊಂದಿದ್ದರೆ, ದರದಲ್ಲಿನ ವ್ಯತ್ಯಾಸವನ್ನು ಸಹ ನಿಮ್ಮಿಂದ ಪಡೆಯಲಾಗುವುದು. 


ಇದನ್ನೂ ಓದಿ-Indian Railways: ಈಗ ಯಾವುದೇ ನಿಲ್ದಾಣದಿಂದ ರೈಲು ಹತ್ತಿದರೂ ಬೀಳಲ್ಲ ದಂಡ! ಇಲ್ಲಿದೆ IRCTC ಹೊಸ ನಿಯಮ


ಮೊಕದ್ದಮೆ ಹೂಡಲಾಗುವುದು
ಇದಲ್ಲದೇ ಟಿಕೆಟ್ ಟ್ಯಾಂಪರ್ ಮಾಡುವ ಮೂಲಕ ಪ್ರಯಾಣಿಕರು ಸಿಕ್ಕಿಬಿದ್ದರೆ ರೈಲ್ವೆ ಸೆಕ್ಷನ್ 137 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಇದರಲ್ಲಿ, ಪ್ರಯಾಣಿಕರಿಗೆ 6 ತಿಂಗಳ ಜೈಲು ಶಿಕ್ಷೆ, 1000 ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ಪ್ರಾವಧಾನವಿದೆ.


ಇದನ್ನೂ ಓದಿ-Indian Railways : ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ! ಈ ದಿನದಿಂದ ಇಳಿಕೆಯಾಗಲಿದೆ ರೈಲು ಪ್ರಯಾಣ ದರ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.