ನವದೆಹಲಿ: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವು ತೀರ್ಥಯಾತ್ರಿಗಳಿಗಾಗಿ ಹೊಸ ರೈಲನ್ನು ಆರಂಭಿಸಲಿದೆ. ನೀವೇನಾದರೂ ಶ್ರೀರಾಮನ ಸ್ಥಳಗಳ ದರ್ಶನಕ್ಕಾಗಿ ತೆರಳುತ್ತಿರುವಿರಾದರೆ ಈ ರೈಲಿನಲ್ಲಿ ಪ್ರಯಾಣಿಸುವುದು ಸೂಕ್ತ. ಅದೇ, ಶ್ರೀರಾಮಾಯಣ ಎಕ್ಸ್ ಪ್ರೆಸ್. ದೆಹಲಿಯ ಸಫರ್ದಜಂಗ್ ರೈಲ್ವೆ ನಿಲ್ದಾಣದಿಂದ ಹೊರಡುವ ಶ್ರೀ ರಾಮಾಯಣ ಎಕ್ಸ್'ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ನವೆಂಬರ್ 14ರಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಿದ್ದಾರೆ. ಈ ರೈಲಿನಲ್ಲಿ ಒಟ್ಟು 800 ಯಾತ್ರಿಗಳು ಪ್ರಯಾಣಿಸಬಹುದು.


COMMERCIAL BREAK
SCROLL TO CONTINUE READING

16 ದಿನಗಳ ಪ್ರವಾಸ ಪ್ಯಾಕೇಜ್ 
ಈ ನೂತನ ರೈಲಿನಲ್ಲಿ 16 ದಿನಗಳ ಪ್ರವಾಸ ಪ್ಯಾಕೇಜ್ನಲ್ಲಿ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಭಾರತಮತ್ತು ಶ್ರೀಲಂಕಾದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು. ಮೊದಲು ಅಯೋಧ್ಯಾದಿಂದ ಹೊರಟು ಹನುಮಾನ್ ಗರ್ಹಿ, ರಾಮ್ಕೊಟ್, ಕಣಕ್ ಭವನ ದೇವಾಲಯ, ನಂದಿಗ್ರಾಮ್, ಸೀತಾಮಡಿ, ಜನಕ್ಪುರ್, ವಾರಣಾಸಿ, ಪ್ರಯಾಗ್, ಶ್ರುಂಗವೆರ್ಪುರ್, ಚಿತ್ರಕೂಟ, ನಾಸಿಕ್, ಹಂಪಿ ಮತ್ತು ರಾಮೇಶ್ವರಕ್ಕೆ ತೆರಳಲಿದೆ. ಇದಲ್ಲದೆ, ಶ್ರೀಲಂಕಾದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲು ಇಚ್ಚಿಸುವವರಿಗೆ ವಿಮಾನದಲ್ಲಿ ಕರೆದೊಯ್ಯಲಾಗುತ್ತದೆ. 


ಕೇವಲ 15,120 ರೂ.ಗಳಲ್ಲಿ ಶ್ರೀರಾಮನ ಸ್ಥಳಗಳಿಗೆ ಪ್ರವಾಸ
ಭಾರತದಲ್ಲಿ ಶ್ರೀರಾಮನ ಸ್ಥಳಗಳಿಗೆ ಭೇಟಿ ನೀಡಲು ಇಚ್ಚಿಸುವವರಿಗೆ ಈ ಪ್ರವಾಸಕ್ಕೆ 15,120 ರೂ. ಪಾವತಿಸಬೇಕಾಗುತ್ತದೆ. ಇದಲ್ಲದೆ ಶ್ರೀಲಂಕಾದಲ್ಲಿರುವ ಶ್ರೀರಾಮ ಸಂಬಂಧಿತ ಸ್ಥಳಗಳಿಗೆ ಹೋಗಬಯಸುವವರು ಚೆನ್ನೈನಿಂದ ಕೊಲೊಂಬೋಗೆ ವಾಯು ಮಾರ್ಗದ ಮೂಲಕ ಕರೆದೊಯ್ಯಲಾಗುತ್ತದೆ. ಇದು ಐದು ದಿನಗಳು ಮತ್ತು ಆರು ರಾತ್ರಿಗಳ ಪ್ರವಾಸವಾಗಿದ್ದು, ಈ ಪ್ರವಾಸ ಪ್ಯಾಕೇಜ್ಗೆ 36,970 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಶ್ರೀಲಂಕಾದಲ್ಲಿ ಕ್ಯಾಂಡಿ, ನುವಾರಾ ಎಲಿಯಾ, ಕೊಲಂಬೊ, ನೆಗೊಮ್ಬೋನಲ್ಲಿ ರಾಮಾಯಣ ಕಾಲಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಬಹುದು.


ಟಿಕೆಟ್ ಬುಕ್ ಮಾಡುವುದು ಹೇಗೆ?
ಭಾರತದಿಂದ ಶ್ರೀಲಂಕಾಕ್ಕೆ ಒಟ್ಟು 16 ದಿನಗಳ IRCTC ಯ ವಿಶೇಷ ಪ್ರವಾಸ ಪ್ಯಾಕೇಜ್ನಲ್ಲಿ ವಸತಿ ಮತ್ತು ಭೋಜನದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಆಸಕ್ತರು IRCTC ವೆಬ್ಸೈಟ್'ನಲ್ಲಿ ಈ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಬಹುದು. ಇದಲ್ಲದೆ ದೇಶದ 27 IRCTC ಪ್ರವಾಸಿ ಸೌಕರ್ಯ ಕೇಂದ್ರಗಳಿಂದಲೂ ಸಹ ಟಿಕೆಟ್ ಬುಕ್ ಮಾಡಬಹುದು.