ನವದೆಹಲಿ: ಅಮೆರಿಕದ ಆನ್‌ಲೈನ್ ಚಿಲ್ಲರೆ ದೈತ್ಯ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಜನವರಿ 15 ರಂದು ಕಂಪನಿಯ ಕಾರ್ಯಕ್ರಮಕ್ಕಾಗಿ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಂಭಾವ್ಯ ಸಭೆಗಳಿಗಾಗಿ ದೇಶಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಸಾವಿರಾರು ಸಣ್ಣ-ಪ್ರಮಾಣದ ಭಾರತೀಯ ವ್ಯಾಪಾರಿಗಳು ಪ್ರತಿಭಟನೆ ನಡೆಸಲಿದ್ದಾರೆ. 


COMMERCIAL BREAK
SCROLL TO CONTINUE READING

ಅಮೆಜಾನ್ ಸಿಇಒ ಅವರ ಭಾರತ ಭೇಟಿಯ ಸಂದರ್ಭದಲ್ಲಿ ವ್ಯಾಪಾರಿಗಳು, ಕಾನ್ಫೆಡರೇಶನ್ ಆಫ್ ಆಲ್ ಇಂಡಿಯನ್ ಟ್ರೇಡರ್ಸ್ (ಸಿಎಐಟಿ) ಆಶ್ರಯದಲ್ಲಿ ಭಾರಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅವರು ಈ ವಿಷಯದಲ್ಲಿ ಪ್ರಧಾನಿ ಮೋದಿಯವರ ಹಸ್ತಕ್ಷೇಪವನ್ನು ಕೋರಿದ್ದಾರೆ ಮತ್ತು ಅವರು ಭೇಟಿಯಾದಾಗ ಬೆಜೋಸ್ ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಚರ್ಚಿಸುವಂತೆ ಒತ್ತಾಯಿಸಿದ್ದಾರೆ.


ಅಮೆಜಾನ್ ಸಿಇಒ ಜನವರಿ 15 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು ಪಿಎಂ ಮೋದಿ ಮತ್ತು ಉದ್ಯಮದ ಪ್ರಮುಖರಲ್ಲದೆ ಅಧಿಕಾರಿಗಳನ್ನೂ ಭೇಟಿ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಮೆಜಾನ್‌ನ ಜೆಫ್ ಬೆಜೋಸ್ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಕೇಂದ್ರೀಕರಿಸುವ SMBhav ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ದೆಹಲಿಯಲ್ಲಿ ಜನವರಿ 15-16ರಂದು ನಡೆಯಲಿದೆ.


 ಈ ವಿಚಾರವಾಗಿ ಹೇಳಿಕೆ ನೀಡಿರುವ ಸಿಎಐಟಿ ,''ಅಮೆಜಾನ್ ಸಿಇಒ ಭೇಟಿಯು ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ, ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟದ ಸಹಯೋಗದೊಂದಿಗೆ ಸಿಎಐಟಿ ಬ್ಯಾನರ್ ಅಡಿಯಲ್ಲಿ ದೇಶಾದ್ಯಂತ ಭಾರಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ.  ಈ ಪ್ರತಿಭಟನೆಯಲ್ಲಿ 5000 ಕ್ಕೂ ಹೆಚ್ಚು ವ್ಯಾಪಾರ ಸಂಸ್ಥೆಗಳು ಭಾಗವಹಿಸಲಿವೆ. ವ್ಯಾಪಾರಿಗಳು ದೇಶದ ವಿವಿಧ ರಾಜ್ಯಗಳ ಸುಮಾರು 300 ನಗರಗಳಲ್ಲಿ 'ಹಲ್ಲಾ ಬೋಲ್' ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ನಡೆಸಲಿದ್ದಾರೆ '' ಎಂದು ಅದು ಹೇಳಿದೆ.