ಬೆಂಗಳೂರು : ಚಿಕ್ಕ ದೇಶಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಭಾರತ ವಿಶ್ವಗುರು ಸ್ಥಾನ ಪಡೆಯುತ್ತಿದೆ. ಆದ್ರೆ ಭಾರತದಲ್ಲಿ ಜಾತಿ ಎಂಬ ಧ್ವನಿ ಕಡಿಯಾಗುತ್ತಿಲ್ಲ. ವಿಶ್ವದಲ್ಲಿ ಭಾರತೀಯರು ದೊಡ್ಡ ದೊಡ್ಡ ಹುದ್ದೆಗೇರುತ್ತಿದ್ದಾರೆ. ಇಂತಹ ವಿಚಾರಕ್ಕೆ ಹೆಮ್ಮೆ ಪಡಬೇಕು. ಆದ್ರೆ ಮತ, ಕುಲ ಅಂತ ಮುಳುಗಬಾರದು. ಸದ್ಯ ಭಾರತೀಯ ಮೂಲದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗುತ್ತಿದ್ದಂತೆ ಗೂಗಲ್‌ನಲ್ಲಿ ನೆಟಿಜನ್ಸ್‌ ಮಾತ್ರ ಅವರ ಜಾತಿ ಕುರಿತಾಗಿಯೇ ಹೆಚ್ಚು ಸರ್ಚ್‌ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ಇದು ಸತ್ಯ.. ರಿಷಿ ಸುನಕ್‌ ಅವರ ಹಿನ್ನಲೆ, ಸಾಧನೆ, ಆ ಸ್ಥಾನಕ್ಕೆ ಹೋಗಲು ಅವರು ಮಾಡಿರುವ ಅಭಿವೃದ್ದಿ ಕೆಲಸಗಳ ಕುರಿತು ಹುಡುಕಾಟ ನಡೆಸಬೇಕಾದ ನೆಟ್ಟಿಗರು, ಸದ್ಯ ಅವರ ಜಾತಿ ಹಿಂದೆ ಬಿದ್ದಿದ್ದಾರೆ. ಇದೇನು ಹೊಸದಲ್ಲಿ ಬಿಡಿ. ಭಾರತದ ಆಟಗಾರ್ತಿ ಪಿವಿ ಸಿಂಧು ಒಲಿಂಪಿಕ್ಸ್‌ನಲ್ಲಿ ಸಿಲ್ವರ್ ಮೆಡಲ್ ಗೆದ್ದಾಗಲೂ ಸಹ ಗೂಗಲ್‌ನಲ್ಲಿ ಅವರ ಸಾಧನೆ ಏನು..? ಅಂತ ನೋಡಿದವರಿಗಿಂತ ಅವರ ಜಾತಿ ಯಾವುದು..? ಎನ್ನುವುದೇ ಹೆಚ್ಚು ಸರ್ಚ್‌ ಆಗಿತ್ತು. ಸದ್ಯ ರಿಶಿ ಅವರ ಸರದಿ.


ಇದನ್ನೂ ಓದಿ: UK Prime Minister: ಇಂಗ್ಲೆಂಡ್‌ನ ನೂತನ ಪ್ರಧಾನಿಯಾಗಿ ರಿಷಿ ಸುನಕ್‌ ಆಯ್ಕೆ


ಭಾರತೀಯ ಮೂಲದ ರಿಶಿ ಸುನಕ್ ಬ್ರಿಟನ್ ಹೊಸ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದು ಈಡಿ ಭಾರತೀಯರೇ ಹೆಮ್ಮೆ ಪಡಬೇಕಾದ ವಿಚಾರ. ಭಾರತವನ್ನು ಆಳಿದ ಬ್ರಿಟಿಷ್ ಎಂಪೈರ್‌ಗೆ ಇನ್ನು ಮುಂದೆ ಭಾರತೀಯನೇ ದೊರೆ. ರಿಷಿ ಸುನಾಕ್ ಯೂಕೆ ನೂತನ ಪಿಎಂ ಆಗಿದ್ದು ಇಂಡಿಯಾದಲ್ಲಿ ಸಂಭ್ರಮಾಚರಣೆಯ ಮಾಡುವಂತಹದ್ದು. ಆದರೂ ಕೆಲ ನೆಟಿಜನ್ಸ್‌ ಬುದ್ದಿ ಮಾತ್ರ ಬದಲಾಗಲಿಲ್ಲ. ರಿಷಿ ಸುನಕ್ ಯಾರು..? ಅವರು ಜಾತಿ ಯಾವುದು ? ಎಂದು ತಿಳಿಯಲು ಹವಣಿಸುತ್ತಿದ್ದಾರೆ. ಹೆಚ್ಚಾಗಿ ಅವರ ಜಾತಿಯ ಕುರಿತು ಸರ್ಚ್‌ ಮುಂದುವರೆದಿದೆ.


ಇನ್ನು ರಿಷಿ ಸುನಕ್ ಹೆಸರಿನ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅವರ ಹೆಸರು ಸುನಕ್ ಎಂದು ಕೆಲ ಹಿಂದೂ ತಜ್ಞರ ಹೆಸರು ಹೇಳುತ್ತಿದ್ದಾರೆ. ಸುನಕ್ ಎಂದರೆ ಸಂಸ್ಕೃತಿದಲ್ಲಿ ನಾಯಿ ಎಂದು ಅರ್ಥವಂತೆ. ಇನ್ನೂ ಕೆಲವರು ಅದು ಸೌನಕ್. ಸೌನಕ್‌ ಅಂದ್ರೆ ಹಿಂದೂ ಪುರಾಣಗಳಲ್ಲಿ ಒಬ್ಬ ಸಾಧುವಿನ ಹೆಸರು. ಆದ್ದರಿಂದ ರಿಷಿ ಸೌನಕ್ ಇರಬೇಕು ಅವರು ತಮ್ಮ ಎಡ್ಯುಕೇಶನ್ ದಾಖಲೆಗಳಲ್ಲಿ ಹೆಸರು ತಪ್ಪಾಗಿ ಬರೆದಿದ್ದಾರೆ ಎಂದು ಹೇಳುತ್ತಾರೆ. 


ಇದನ್ನೂ ಓದಿ: Viral Girl: ಯಾವಾಗಲು ಯುವಕರನ್ನು ಹನಿ ಟ್ರ್ಯಾಪ್ ಮಾಡುತ್ತಾಳಂತೆ ಈ ಯುವತಿ! ಕಾರಣ ದಂಗಾಗಿಸುವಂತಿದೆ


ರಿಷಿ ಸುನಕ್ ಇನ್ಫೋಸಿಸ್ ಮಾಜಿ ಅಧ್ಯಕ್ಷ ನಾರಾಯಣ ಮೂರ್ತಿ, ಸುಧಾಮೂರ್ತಿಯವರ ಅಳಿಯ ಎಂಬುದು ನಿಜ. ಆದ್ರೆ ಅವರು ಇದುವರೆಗೂ ತಮ್ಮ ಜಾತಿಯ ಕುರಿತು ಎಲ್ಲೂ ಮಾಹಿತಿ ನೀಡಿಲ್ಲ. ಆದ್ರೆ ನೆಟಿಜನ್ಸ್‌ ಮಾತ್ರ ಅವರು ಬ್ರಾಹ್ಮಣರು, ಪಂಜಾಬಿ ಹೀಗೆ ಮುಂತಾದ ಜಾತಿಯ ಹೆಸರನ್ನು ಹೇಳುತ್ತಿದ್ದಾರೆ. ಅಲ್ಲದೆ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ