ಲಂಡನ್: ಇಂಗ್ಲೆಂಡ್‍ನ ನೂತನ ಪ್ರಧಾನಿಯಾಗಿ ಇನ್ಪೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಭಾರತವನ್ನು ಆಳಿದ್ದ ಬ್ರಿಟಿಷ್ ಆಡಳಿತ ಇದೀಗ ಭಾರತೀಯನ ಕೈಗೆ ಸಿಕ್ಕಿದೆ.
Britain's Conservative Party leader #RishiSunak becomes the Prime Minister of the United Kingdom. pic.twitter.com/nC39dzX7gd
— ANI (@ANI) October 24, 2022
ಸೋಮವಾರ(ಅ.24) ನಡೆದ ಬ್ರಿಟನ್ ಪ್ರಧಾನಿ ಆಯ್ಕೆಯಲ್ಲಿ ಕನ್ಸರ್ವೇಟೀವ್ ಪಕ್ಷದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಪ್ರಧಾನಿ ಯಾರು ಅನ್ನೋ ಚರ್ಚೆ ಶುರುವಾಗಿತ್ತು. ಇದೀಗ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿ ಗದ್ದುಗೆ ಏರಿದ್ದಾರೆ.
ಇದನ್ನೂ ಓದಿ: Viral Girl: ಯಾವಾಗಲು ಯುವಕರನ್ನು ಹನಿ ಟ್ರ್ಯಾಪ್ ಮಾಡುತ್ತಾಳಂತೆ ಈ ಯುವತಿ! ಕಾರಣ ದಂಗಾಗಿಸುವಂತಿದೆ
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಕೊಂಚ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು.
ಇದರ ಬೆನ್ನಲ್ಲೇ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಆದರೆ ಪ್ರಧಾನಿ ಹುದ್ದೆ ರೇಸ್‌ನಿಂದ ಬೊರಿಸ್ ಜಾನ್ಸನ್ ಹಿಂದೆ ಸರಿದಿದ್ದರು. ಇದರಿಂದ ಸುನಕ್ ಹಾದಿ ಸುಗಮಗೊಂಡಿತ್ತು. ಸುನಕ್ ವಿರುದ್ಧ ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್ ಸ್ಪರ್ಧಿಸಿದ್ದರು. ಮೋರ್ಡೆಂಟ್ ಕೇವಲ 26 ನಾಯರ ಬೆಂಬಲ ಪಡೆದರು. ಭಾರೀ ಬಹುಮತದೊಂದಿದೆ ರಿಷಿ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಸಾಲದ ಸುಳಿಗೆ ಸಿಲುಕಿದ ಕೀನ್ಯಾಗೆ ಈಗ ಚೀನಾದ್ದೆ ಚಿಂತೆ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ