India's First AI Teacher: ದೇಶದ ಹಲವೆಡೆ AI ರೋಬೋಟ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬರುತ್ತಿದೆ. ಅದು ಅಲ್ಲದೇ ಭಾರತದಲ್ಲಿ AI ಮುಖಾಂತರ ಟಿವಿ ನಿರೂಪಕಿಯನ್ನು ಪರಿಚಯಿಸಿದರು. ಇದೀಗ ಶಾಲಾ ಶಿಕ್ಷಕಿಯನ್ನು ಪರಿಚಯಿಸುತ್ತಿದ್ದಾರೆ. ಹಾಗಾದರೆ ಎಲ್ಲಿ ಇದನ್ನು ಪರಿಚಯಿಸಿದರು, ಏನೆಲ್ಲ ವೈಶಿಷ್ಟತೆಯನ್ನು ಈ ರೋಬೋ ಒಳಗೊಂಡಿದೆ ಈ ಎಲ್ಲದರ ಮಾಹಿತಿ ಇಲ್ಲಿ ತಿಳಿಯೋಣ..


COMMERCIAL BREAK
SCROLL TO CONTINUE READING

AI ರೋಬೋಟ್ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ತರಗತಿಗಳನ್ನು ಕಲಿಸುತ್ತಿರುವುದು ಭಾರತದಲ್ಲಿ ಇದೇ ಮೊದಲು. AI ಆಧಾರಿತ ರೋಬೋಟ್ ಅನ್ನು ಮೇಕರ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದೆ. ಕೇರಳದ ಶಾಲೆಯೊಂದರಲ್ಲಿ ಈ ರೋಬೋಟ್ ನ ವಿಷಯ ಭಾರಿ ಸದ್ದು ಮಾಡುತ್ತಿದೆ.


ಇದನ್ನೂ ಓದಿ: Narendra Modi: ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ


ಹೌದು, ದಕ್ಷಿಣದ ಕೇರಳ ರಾಜ್ಯದ ತಿರುವನಂತಪುರಂನಲ್ಲಿರುವ ಶಾಲೆಗೆ ರೋಬೋಟ್ ಶಿಕ್ಷಕರೊಬ್ಬರು ಭೇಟಿ ನೀಡಿದ್ದರು. ವಿದ್ಯಾರ್ಥಿಗಳು ಭಾರತದಲ್ಲಿ ಮೊದಲ ಬಾರಿಗೆ ಈ AI ಶಿಕ್ಷಕರನ್ನು ಭೇಟಿ ಮಾಡುತ್ತಿದ್ದಾರೆ. ಈ ಕೃತಕ ಬುದ್ಧಿಮತ್ತೆ (AI) ರೋಬೋಟ್ ಅನ್ನು ಮೇಕರ್ ಲ್ಯಾಬ್ಸ್ ಅಭಿವೃದ್ಧಿಪಡಿಸಿವುದರಿಂದ, ಇದರ ಪರಿಣಾಮವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳಾಗಬಹುದು.


ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದರಲ್ಲಿ “ಶಿಕ್ಷಣದ ಗಡಿಗಳನ್ನು ಅಳಿಸಲಾಗುತ್ತಿದೆ. AI ನಿಂದ ನಡೆಸಲ್ಪಡುವ ಭಾರತದ ಮೊದಲ AI ಶಿಕ್ಷಕ IRIS ಅನ್ನು ಪರಿಚಯಿಸಲಾಗುತ್ತಿದೆ. ಐರಿಸ್ ಚೆನ್ನಾಗಿ ಪಾಠ ಕಲಿಸುತ್ತದೆ. ಈ ರೋಬೋಟ್ ಮೂಲಕ ನಾವು ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿವೆ. ಪ್ರತಿ ವಿದ್ಯಾರ್ಥಿಯ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಪಾಠಗಳನ್ನು ಕಲಿಸಲು IRIS ಶಿಕ್ಷಕರಿಗೆ ಸಹಾಯ ಮಾಡುತ್ತದೆ ಎಂದು ಕಂಪನಿ ವಿವರಿಸಿದೆ.


ಇದನ್ನೂ ಓದಿ: ರಷ್ಯಾ ದೇಶದಲ್ಲಿ ವೈದ್ಯಕೀಯ ಶಿಕ್ಷಣ.. ಪೆನ್ಜಾ ಸ್ಟೇಟ್ ಯೂನಿವರ್ಸಿಟಿಯೊಂದಿಗೆ ಚೆವಲಿಯರ್ ಗ್ರೂಪ್ ನ ವಿಶೇಷ ಒಡಂಬಡಿಕೆ!


ಕೇರಳದ KTCT ಹೈಯರ್ ಸೆಕೆಂಡರಿ ಶಾಲೆಯಲ್ಲಿ ರೋಬೋಟ್ ಅನ್ನು ಬಿಡುಗಡೆ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ವೀಡಿಯೊ ಕ್ಲಿಪ್ ರೋಬೋಟ್ ಅನ್ನು ತರಗತಿಯಲ್ಲಿರುವ ವಿದ್ಯಾರ್ಥಿಗಳೊಂದಿಗೆ ಬ್ಯುಸಿಯಾಗಿರುವುದನ್ನು ತೋರಿಸುತ್ತದೆ. 


VSSC ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ (SPL) ನಿರ್ದೇಶಕ ಡಾ. ಕೆ ರಾಜೀವ್ IRIS ಅನ್ನು ಪ್ರಾರಂಭಿಸಿದರು. ಈಗ AI ಶಿಕ್ಷಕರು ಕೇರಳದ KTCT ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಸ್ನೇಹಿತರಾಗಿದ್ದಾರೆ.


ಇದನ್ನೂ ಓದಿ: Miss world 2024 : ʼವಿಶ್ವ ಸುಂದರಿ 2024ʼ ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಸುಂದರಿ..! ಭಾರತ..?


ಮಾಧ್ಯಮ ವರದಿಗಳ ಪ್ರಕಾರ, ಈ ರೋಬೋಟ್ ನಡೆಯಬಲ್ಲದು. ಅಲ್ಲದೇ, ಎಲ್ಲರೊಂದಿಗೆ ಸಂವಹನ  ಮಾಡುವುದಲ್ಲದೇ, ಪ್ರತಿಯೊಬ್ಬರೂ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ದೊಡ್ಡ ವಿಷಯವೆಂದರೆ ಈ ರೋಬೋಟ್ ನರ್ಸರಿಯಿಂದ 12 ನೇ ತರಗತಿಯವರೆಗೆ ಎಲ್ಲಾ ವಿಷಯಗಳನ್ನು ಕಲಿಸುತ್ತದೆ.


ಈ ರೋಬೋಟ್ ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ ಭಾಷೆಗಳನ್ನು ಮಾತನಾಡಬಲ್ಲದು. ಆದರೆ ಡೆವಲಪರ್‌ಗಳು ಇನ್ನೂ 20 ಭಾಷೆಗಳನ್ನು ಮಾತನಾಡಲು ಅಭಿವೃದ್ಧಿಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಡ್ರಗ್ಸ್ ಅಥವಾ ಹಿಂಸೆಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಕಲಿಸದಂತೆ ನಿರ್ಬಂಧಿಸುವ ಸಾಮರ್ಥ್ಯವನ್ನು IRIS ಹೊಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.