NDA Exam : ದೇಶದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಆಗಿ ಮಿರ್ಜಾಪುರದ ಟಿವಿ ಮೆಕ್ಯಾನಿಕ್ ಅವರ ಪುತ್ರಿ ಸಾನಿಯಾ ಮಿರ್ಜಾ ಅವರು ಭಾರತೀಯ ವಾಯುಪಡೆಗೆ ಆಯ್ಕೆಯಾಗಿದ್ದಾರೆ. ಸಾನಿಯಾ ಎನ್‌ಡಿಎ ಪರೀಕ್ಷೆಯಲ್ಲಿ 149ನೇ ರ್ಯಾಂಕ್ ಗಳಿಸಿದ್ದಾಳೆ.


COMMERCIAL BREAK
SCROLL TO CONTINUE READING

ಸಾನಿಯಾ ದೇಹತ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಎಂಬ ಸಣ್ಣ ಹಳ್ಳಿಯ ನಿವಾಸಿ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಂದರೆ 10 ನೇ ತರಗತಿಯವರೆಗೆ ಪಂಡಿತ್ ಚಿಂತಾಮಣಿ ದುಬೆ ಇಂಟರ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಸಾನಿಯಾ ಮಿರ್ಜಾಪುರದ ಗುರುನಾನಕ್ ಗರ್ಲ್ಸ್ ಇಂಟರ್ ಕಾಲೇಜಿನಿಂದ 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 12 ನೇ ತರಗತಿಯ ಯುಪಿ ಬೋರ್ಡ್‌ನಲ್ಲಿ ಜಿಲ್ಲಾ ಟಾಪರ್ ಆಗಿದ್ದಾರೆ. ಏಪ್ರಿಲ್ 10 ರಂದು, ಅವರು 2022 ತರಗತಿಯಲ್ಲಿ ಎನ್‌ಡಿಎ ಪರೀಕ್ಷೆ ಬರೆದಿದ್ದರು. ತೇರ್ಗಡೆಯಾದ ನಂತರ ಅವರು ತಮ್ಮ ಸಂದರ್ಶನಕ್ಕೆ ತಯಾರಿ ನಡೆಸಲು ಅಕಾಡೆಮಿಯನ್ನು ಸೇರಿದರು. ವರದಿಗಳ ಪ್ರಕಾರ, ಸಾನಿಯಾ ಡಿಸೆಂಬರ್ 27, 2022 ರಂದು ಪುಣೆಯಲ್ಲಿ ಎನ್‌ಡಿಎ ಖಡಕ್ವಾಸ್ಲಾಗೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : Mansukh Mandaviya : 'ಕೊರೊನಾ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ, ಬೂಸ್ಟರ್ ಡೋಸ್ ಪಡೆಯಿರಿ'


ಫೈಟರ್ ಪೈಲಟ್ ಆಗಿ ಆಯ್ಕೆಯಾದ ದೇಶದ ಎರಡನೇ ಬಾಲಕಿ ಸಾನಿಯಾ ಮಿರ್ಜಾ. ಸಾನಿಯಾಗೆ ಮೊದಲ ಪ್ರಯತ್ನದಲ್ಲಿ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ, ಎರಡನೇ ಪ್ರಯತ್ನದಲ್ಲಿ ಮತ್ತೆ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ. ಸಾನಿಯಾ ತಾನು ಫೈಟರ್ ಪೈಲಟ್ ಆಗಬೇಕೆಂದು ಕನಸು ಕಂಡವರು. ಸಾನಿಯಾ ಮಿರ್ಜಾಗೆ ಸ್ಫೂರ್ತಿಯಂದರೆ ದೇಶದ ಮೊದಲ ಮಹಿಳಾ ಪೈಲಟ್ ಅವ್ನಿ ಚತುರ್ವೇದಿ ಎಂದು ಹೇಳಿಕೊಂಡಿದ್ದಾರೆ.


ನ್ಯಾಷನಲ್ ಡಿಫೆನ್ಸ್ ಅಕಾಡೆಮಿ 2022 ರ ಪರೀಕ್ಷೆಯಲ್ಲಿ, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಒಟ್ಟು 400 ಸೀಟುಗಳಿದ್ದು, ಇದರಲ್ಲಿ ಮಹಿಳೆಯರಿಗೆ 19 ಸೀಟುಗಳಿದ್ದು, ಈ ಪೈಕಿ ಎರಡು ಸೀಟುಗಳನ್ನು ಯುದ್ಧ ವಿಮಾನ ಪೈಲಟ್‌ಗಳಿಗೆ ಮೀಸಲಿಡಲಾಗಿತ್ತು, ಈ ಎರಡು ಸೀಟುಗಳಲ್ಲಿ ಸಾನಿಯಾ ಮಿರ್ಜಾ ಒಂದುನ್ ಸೀಟು ತನ್ನದಾಗಿಸಿಕೊಂಡಿದ್ದಾರೆ.


ಇದನ್ನೂ ಓದಿ : Corona Cases in the World: ವಿಶ್ವದಲ್ಲಿ ಎಷ್ಟಾಗಿದೆ ಗೊತ್ತಾ ಕೊರೊನಾ ಪ್ರಕರಣಗಳು: ಯುಎಸ್-ಭಾರತದಲ್ಲಿ ಬೆಚ್ಚಿ ಬೀಳಿಸುವಂತಿದೆ ಅಂಕಿಅಂಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.