ನವ ದೆಹಲಿ : ದೈತ್ಯ ಐಟಿ ಸಂಸ್ಥೆ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಲೀಲ್ ಎಸ್ ಪರೇಕ್ ನೇಮಕವಾಗಿದ್ದು, ಜನವರಿ 2, 2018 ರಿಂದ ಕಾರ್ಯನಿರ್ವಹಿಸಲಿದ್ದಾರೆ. 


COMMERCIAL BREAK
SCROLL TO CONTINUE READING

ಫ್ರೆಂಚ್ ಐಟಿ ಸೇವೆಗಳ ಕಂಪೆನಿ ಕ್ಯಾಪ್ಜೆಮಿನಿಯಲ್ಲಿ ಗ್ರೂಪ್ ಎಕ್ಸಿಕ್ಯೂಟಿವ್ ಬೋರ್ಡ್ನ ಸದಸ್ಯರಾಗಿರುವ ಪರೇಖ್ ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಮಾಸ್ಟರ್ ಆಫ್ ಇಂಜಿನಿಯರಿಂಗ್ ಡಿಗ್ರಿಗಳನ್ನು ಹೊಂದಿದ್ದಾರೆ.


ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನೂ ಪಡೆದಿದ್ದಾರೆ.


"ಇನ್ಫೋಸಿಸ್ ಸಿಇಒ ಮತ್ತು ಎಂ.ಡಿ. ಆಗಿ ಸಲಿಲ್ ನೇಮಕವಾಗಿರುವುದು ನಮಗೆ ಸಂತೋಷವಾಗಿದೆ. ಐಟಿ ಉದ್ಯಮದಲ್ಲಿ ಸುಮಾರು ಮೂರು ದಶಕಗಳ ಜಾಗತಿಕ ಅನುಭವವನ್ನು ಅವರು ಹೊಂದಿದ್ದಾರೆ. ಅವರು ವ್ಯವಹಾರದ ಕಾರ್ಯಗತಗೊಳಿಸುವಿಕೆ ಮತ್ತು ಯಶಸ್ವಿಯಾದ ಸ್ವಾಧೀನವನ್ನು ನಿರ್ವಹಿಸುವ ಪ್ರಬಲ ಸಾಮರ್ಥ್ಯ ಹೊಂದಿದ್ದಾರೆ" ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


2018ರ ಜನವರಿ 2 ರಂದು ಯು.ಬಿ. ಪ್ರವೀಣ್ ರಾವ್ ಮಧ್ಯಂತರ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯಲಿದ್ದು, ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮತ್ತು ಪೂರ್ಣಕಾಲಿಕ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.


ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪನಿಯು ಈ ವರ್ಷದ ಆಗಸ್ಟ್ನಲ್ಲಿ ವಿಶಾಲ್ ಸಿಕ್ಕಾ ಅವರು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆ ಸ್ಥಾನ ತೆರವಾಗಿತ್ತು.