ಆರ್ಥಿಕ ಸುಧಾರಣೆಗಾಗಿ ಪ್ರಧಾನಿ ಮೋದಿ ಹೊಗಳಿದ ಇನ್ಫೋಸಿಸ್ ನಾರಾಯಣ ಮೂರ್ತಿ
ಕೇಂದ್ರ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಕಡಿಮೆಗೊಳಿಸಲು ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ಐಟಿ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಹೇಳಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನು ಆರು ತಿಂಗಳು ಮಾತ್ರವೇ ಉಳಿದಿದೆ. ಐಟಿ ಕ್ಷೇತ್ರದಲ್ಲಿ ದೊಡ್ಡ ಕೀರ್ತಿ ಗಳಿಸಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸ್ತುತ ಸರ್ಕಾರದ ನಿರಂತರತೆಯು ಭಾರತದ ಆರ್ಥಿಕತೆಗೆ ಉತ್ತಮ ಎಂದು ಅವರು ಹೇಳಿದರು. ಭ್ರಷ್ಟಾಚಾರವನ್ನು ಕೇಂದ್ರ ಮಟ್ಟದಲ್ಲಿ ತಗ್ಗಿಸಲು ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ಮೂರ್ತಿ ಹೇಳಿದ್ದಾರೆ.
ನಾರಾಯಣ್ ಮೂರ್ತಿ ಅವರು ಇಂಗ್ಲಿಷ್ ಬಿಸಿನೆಸ್ ಚಾನಲ್ ET Now ಸಂದರ್ಶನದಲ್ಲಿ ಮಾತನಾಡುತ್ತಾ, "ಕೇಂದ್ರ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಕಡಿಮೆಗೊಳಿಸಲು ಪ್ರಧಾನಿ ಮೋದಿ ಮತ್ತು ಅವರ ಕ್ಯಾಬಿನೆಟ್ ಕಷ್ಟಪಟ್ಟು ಕೆಲಸ ಮಾಡಿದ್ದಾರೆ." ರಫೇಲ್ ಡೀಲ್ ಕುರಿತು, ಡೇಟಾ ಹೊರಬರುವ ತನಕ ಸತ್ಯ ಏನು ಎಂಬುದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ಆರ್ಥಿಕ ಸುಧಾರಣೆಗಾಗಿ ಪ್ರಧಾನಿ ಮೋದಿ ಹೊಗಳಿದ ನಾರಾಯಣ ಮೂರ್ತಿ:
ಆರ್ಥಿಕ ಸುಧಾರಣೆಗಾಗಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸುತ್ತಾ ಅವರು, "ಕನಿಷ್ಠ ಒಂದು ನಾಯಕರು ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ತರಲು ಬಯಸುತ್ತಿರುವ ನಾಯಕನಾಗಿದ್ದಕ್ಕಾಗಿ ಅದಕ್ಕಾಗಿ ನಾವು ಕೃತಜ್ಞರಾಗಿರಬೇಕು. ಕಳೆದ 5 ವರ್ಷಗಳಲ್ಲಿ ನೋಡುವುದಾದರೆ ದೇಶ, ಶಿಸ್ತು, ಶುಚಿತ್ವ, ಆರ್ಥಿಕ ಪ್ರಗತಿಗೆ ಒತ್ತು ನೀಡುತ್ತಿರುವ ಒಬ್ಬ ನಾಯಕ ಇರುವುದನ್ನು ನೀವು ಕಂಡುಕೊಳ್ಳಬಹುದು ಮತ್ತು ಈ ಸರ್ಕಾರ ಮತ್ತೊಂದು ಅವಕಾಶವನ್ನು ಪಡೆದರೆ ಉತ್ತಮವಾಗಿರುತ್ತದೆ" ಎಂದು ಅಭಿಪ್ರಾಯ ಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಪ್ರಬಲ ಆರ್ಥಿಕ ಅಭಿವೃದ್ಧಿಯ ಸರಕಾರವನ್ನು ಮುನ್ನಡೆಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. GST ಮತ್ತು ದಿವಾಳಿತನ ಬ್ಯಾಂಕರ್ಶಿಪ್ ಕೋಡ್ಗಳನ್ನು ಅನುಷ್ಠಾನಗೊಳಿಸುವ ವಿಧಾನಗಳಲ್ಲಿ ಕೆಲವು ಸಂದರ್ಭಗಳಲ್ಲಿ, ನ್ಯೂನತೆಗಳನ್ನು ನೋಡಲಾಗುತ್ತದೆ. ಆದರೆ ನಾವು ಎಲ್ಲರಿಗೂ ಜವಾಬ್ದಾರಿ ಹೊಂದುವ ಪ್ರಧಾನ ಮಂತ್ರಿಯನ್ನು ಹಿಡಿದಿಡಲು ಸಾಧ್ಯವಿಲ್ಲ. ಇದು ಅಧಿಕಾರಶಾಹಿಯ ಕೆಲಸ ಎಂದು ನಾರಾಯಣ್ ಮೂರ್ತಿ ಹೇಳಿದರು. ನಿರಂತರತೆ ಆರ್ಥಿಕತೆಗೆ ಮುಖ್ಯವಾಗಿದೆ. ಆರ್ಥಿಕ ಅಭಿವೃದ್ಧಿ ಮತ್ತು ಶಿಸ್ತಿನ ಬಗ್ಗೆ ಪ್ರಧಾನಮಂತ್ರಿ ಗಮನ ಹರಿಸುವುದು ಒಳ್ಳೆಯದು ಎಂದರು.
RBI ಮತ್ತು ಸರ್ಕಾರಕ್ಕೆ ತಮ್ಮ ಜವಾಬ್ದಾರಿ ತಿಳಿದಿದೆ:
ಕೇಂದ್ರ ಸರಕಾರ ಮತ್ತು ಆರ್ಬಿಐ ನಡುವಿನ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣ್ ಮೂರ್ತಿ ಅವರು ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಎರಡೂ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಇಬ್ಬರೂ ತಮ್ಮ ಕೆಲಸವನ್ನು ತಿಳಿದಿದ್ದಾರೆ ಎಂದು ಹೇಳಿದರು.
ನಾರಾಯಣ ಮೂರ್ತಿ 1981 ರಲ್ಲಿ ಐಟಿ ಕ್ಷೇತ್ರದಲ್ಲಿ ಇನ್ಫೋಸಿಸ್ ಅನ್ನು ಪ್ರಾರಂಭಿಸಿದರು. ಇವರು 1981 ರಿಂದ 2002 ರವರೆಗೆ ಇನ್ಫೋಸಿಸ್ ಸಿಇಓ ಆಗಿ ಕಾರ್ಯನಿರ್ವಹಿಸಿದರು. ನಂತರ 2002 ರಿಂದ 2011 ರವರೆಗೆ ಇನ್ಫೋಸಿಸ್ನ ಅಧ್ಯಕ್ಷರಾಗಿದ್ದರು.