ನವದೆಹಲಿ: ಫೆಬ್ರುವರಿ 14 ರಂದು ನಡೆದ ಪುಲ್ವಾಮಾ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕ್ ನಡುವೆ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು.ಈಗ ಮುನ್ನೆಚ್ಚರಿಕೆ ಕ್ರಮವಾಗಿ ಭಾರತದ ನೌಕಾದಳ ಭಾನುವಾರದಂದು ಅರಬ್ಬೀ ಸಮುದ್ರದ ಉತ್ತರ ಭಾಗದಲ್ಲಿ INS ವಿಕ್ರಮಾದಿತ್ಯ ಹಾಗೂ ನ್ಯೂಕ್ಲಿಯರ್ ಜಲಾಂತರ್ಗಾಮಿ ಹಡಗುಗಳನ್ನು ನಿಯೋಜಿಸಿದೆ.


COMMERCIAL BREAK
SCROLL TO CONTINUE READING

ಭಾರತೀಯ ನೌಕಾದಳ ತನ್ನ ಪ್ರಕಟನೆಯಲ್ಲಿ " ಫೆಬ್ರುವರಿ 14 ರಂದು ಸಿಆರ್ಪಿಎಫ್ ಸೈನಿಕರ ಮೇಲೆ ಉಗ್ರ ಸಂಘಟನೆ ಜೈಶ್ ಇ ಮೊಹಮ್ಮದ್ ದಾಳಿಯ ಹಿನ್ನಲೆಯಲ್ಲಿ ಭಾರತದ ನೌಕಾಸೇನೆಯನ್ನು ಉತ್ತರ ಅರಬ್ಬೀ ಸಮುದ್ರದ ಭಾಗದಲ್ಲಿ ನಿಯೋಜಿಸಲಾಗಿದೆ ಎಂದು ತಿಳಿಸಿದೆ. ಇದರಲ್ಲಿ ಪ್ರಮುಖವಾಗಿ INS ವಿಕ್ರಮಾದಿತ್ಯ ಹಾಗೂ ನ್ಯೂಕ್ಲಿಯರ್ ಜಲಾಂತರ್ಗಾಮಿ ಹಡಗುಗಳನ್ನು ಭಾರತ ಮತ್ತು ಪಾಕ್ ನಡುವೆ ಪರಿಸ್ಥಿತಿ ಹದಗೆಟ್ಟ ಹಿನ್ನಲೆಯಲ್ಲಿ ಇವುಗಳನ್ನು ನಿಯೋಜಿಸಲಾಗಿದೆ ಎಂದು ನೌಕಾ ಸೇನೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.



ಇದರಲ್ಲಿ ಒಟ್ಟು 60 ನೌಕಾ ಸೇನೆಯ ಹಡಗು, 12 ಭಾರತೀಯ ಕೋಸ್ಟ್ ಗಾರ್ಡ್ ಹಡಗು, TROPEX 19ರ ಭಾಗವಾಗಿರುವ 60 ವಿಮಾನಗಳು ಉತ್ತರ ಅರಬ್ಬೀ ಸಮುದ್ರದ ಭಾಗದಲ್ಲಿ ಇರುತ್ತವೆ ಎಂದು ಪ್ರಕಟಣೆ ಹೊರಡಿಸಿದೆ.ಭಾರತದ ನೌಕಾ ಸೇನೆ ಪ್ರಾಬಲ್ಯದಿಂದಾಗಿ ಪಾಕ್ ನ ನೌಕಾ ಸೇನೆ ಮಕ್ರಾನ್ ತೀರದ ಹತ್ತಿರವೇ ಇದೆ ಎನ್ನಲಾಗಿದೆ.


ಇದೇ ಫೆಬ್ರುವರಿ 28 ರಂದು ರಕ್ಷಣಾ ವಿಭಾಗದ ಮೂರು ವಿಭಾಗಗಳು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ " ಭಾರತೀಯ ನೌಕ ಸೇನೆಯೂ ತನ್ನ ರಾಷ್ಟ್ರೀಯ ಕಡಲ ತೀರದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವದಲ್ಲದೆ,ಅರಬ್ಬೀ ಸಮುದ್ರದಲ್ಲಿ ಪಾಕ್ ಯಾವುದೇ ರೀತಿ ಭಾರತದ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತಗೆದುಕೊಳ್ಳಲಿದೆ ಎಂದು ಭಾರತೀಯ ನೌಕಾದಳ ಎಚ್ಚರಿಕೆಯನ್ನು ನೀಡಿತ್ತು.