ನವದೆಹಲಿ : ರೆಪೊ ದರವನ್ನು ಕಡಿತಗೊಳಿಸುವ ಅವಕಾಶವಿದೆ. ಆದರೆ ಈ ದಿಕ್ಕಿನಲ್ಲಿ ಮುಂದಿನ ಕ್ರಮಗಳು ಹಣದುಬ್ಬರ ಮುಂಚೂಣಿಯಲ್ಲಿರುವ ಉದಯೋನ್ಮುಖ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ್ ದಾಸ್ (Shaktikant Das) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದು ಪ್ರಸ್ತುತ ಕೇಂದ್ರೀಯ ಬ್ಯಾಂಕಿನ ತೃಪ್ತಿದಾಯಕ ಮಟ್ಟಕ್ಕಿಂತ ಹೆಚ್ಚಿದೆ ಎಂದು ತಿಳಿದುಬಂದಿದೆ. ಪಿಟಿಐ ಸುದ್ದಿಗಳ ಪ್ರಕಾರ ಆರ್‌ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ಬಳಿಕ ನಮ್ಮ ನಿರೀಕ್ಷೆಗೆ ತಕ್ಕಂತೆ ಹಣದುಬ್ಬರವು ಮುಂದುವರಿದರೆ, ಮತ್ತಷ್ಟು ದರ ಕಡಿತಕ್ಕೆ ಅವಕಾಶವಿದೆ. ಆರ್ಥಿಕ ಬೆಳವಣಿಗೆಯ ಸುಧಾರಣೆಯನ್ನು ಬಲಪಡಿಸಲು ಈ ವ್ಯಾಪ್ತಿಯನ್ನು ಚಿಂತನಶೀಲವಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದರು.


ಏನು ನೋಟುಗಳಿಂದಲೂ ಕರೋನಾವೈರಸ್ ಹರಡುತ್ತಾ...? RBI ನೀಡಿದೆ ಈ ಉತ್ತರ


ಆರ್‌ಬಿಐ ಬಡ್ಡಿ ಕಡಿಮೆ ಮಾಡಿಲ್ಲ:
ಈ ತಿಂಗಳ 9 ರಂದು ನಡೆದ ಸಭೆಯಲ್ಲಿ ಚಿಲ್ಲರೆ ಹಣದುಬ್ಬರ (Inflation) ಏರಿಕೆಯ ದೃಷ್ಟಿಯಿಂದ ನೀತಿ ದರವನ್ನು ಒಂದೇ ಮಟ್ಟದಲ್ಲಿಡಲು ಸಮಿತಿ ನಿರ್ಧರಿಸಿತು. 2020-21ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ತೀವ್ರ ಕುಸಿತದ ನಂತರ, ಎರಡನೇ ತ್ರೈಮಾಸಿಕದಲ್ಲಿ (ಪಿಎಂಐ, ರಫ್ತು, ವಿದ್ಯುತ್ ಬಳಕೆ ಇತ್ಯಾದಿ) ಆರ್ಥಿಕ ಚಟುವಟಿಕೆಯ ಸ್ಥಿತಿಯನ್ನು ಸೂಚಿಸುವ ಪ್ರಮುಖ ಮಾಹಿತಿಯು ಸುಧಾರಣೆಯನ್ನು ಸೂಚಿಸುತ್ತದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.


ಕೆಲವು ಅನಿಶ್ಚಿತತೆಗಳು ಇನ್ನೂ ಅಸ್ತಿತ್ವದಲ್ಲಿವೆ:
ಆದರೂ ಕೆಲವು ಅನಿಶ್ಚಿತತೆಗಳಿವೆ ಎಂದು  ವಿವರಿಸಿರುವ ಶಕ್ತಿಕಾಂತ್ ದಾಸ್ ಕೋವಿಡ್ -19 (Covid 19) ನ ಈ ಸಂದರ್ಭದಲ್ಲಿ ಈ ಪರಿಸ್ಥಿತಿ ಮತ್ತೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ದೇಶೀಯ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಹೊರತಾಗಿಯೂ ಖಾಸಗಿ ಹೂಡಿಕೆ ಚಟುವಟಿಕೆಗಳು ದುರ್ಬಲವಾಗಿರಬಹುದು. ವಿಶ್ವಾದ್ಯಂತ ಆರ್ಥಿಕ ಚಟುವಟಿಕೆ ಮತ್ತು ವ್ಯಾಪಾರದಲ್ಲಿ ತೀವ್ರ ಕುಸಿತದ ನಂತರ ಬಾಹ್ಯ ಬೇಡಿಕೆ ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.


ಬ್ಯಾಂಕ್ ಖಾತೆಯಲ್ಲಿ ಮೋಸವಾಗಿದ್ದರೆ, ನಿಮ್ಮೆಲ್ಲಾ ಹಣ ಹಿಂತಿರುಗಿಸಲಾಗುತ್ತದೆ! ಇಲ್ಲಿದೆ ದಾರಿ


ಜಿಡಿಪಿ ಹೇಗಿರುತ್ತದೆ?
ಆರ್‌ಬಿಐ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದಲ್ಲಿ (GDP) ಶೇಕಡಾ 9.5 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಮುಂದಿನ ವರ್ಷದಲ್ಲಿ ಸುಧಾರಣೆಗೆ ಅವಕಾಶವಿದೆ ಎಂದರು.


ರಿಸರ್ವ್ ಬ್ಯಾಂಕ್ ಪ್ರಕಾರ ಜೂನ್‌ನಿಂದ ಹಣದುಬ್ಬರ ಶೇ 6 ಕ್ಕಿಂತ ಹೆಚ್ಚಾಗಿದೆ.  ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಒಟ್ಟು ಹಣದುಬ್ಬರ ಮೃದುವಾಗಿರುತ್ತದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.