ಮಧ್ಯಂತರ ಬಜೆಟ್ ಲೋಕಸಭಾ ಚುನಾವಣೆಗೂ ಮುನ್ನ ಟ್ರೈಲರ್ ಇದ್ದ ಹಾಗೆ -ಪ್ರಧಾನಿ ಮೋದಿ
ಹಣಕಾಸು ಸಚಿವ ಪಿಯುಶ್ ಗೋಯಲ್ ಮಂಡಿಸಿದ ಬಜೆಟ್ ನ್ನು ಲೋಕಸಭಾ ಚುನಾವಣೆಗೂ ಮುನ್ನ ಬಂದಿರುವ ಟ್ರೈಲರ್ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಈ ಬಜೆಟ್ ನಲ್ಲಿ ಎಲ್ಲ ವರ್ಗದ ಜನರನ್ನು ಕೂಡ ಪರಿಗಣಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ನವದೆಹಲಿ: ಹಣಕಾಸು ಸಚಿವ ಪಿಯುಶ್ ಗೋಯಲ್ ಮಂಡಿಸಿದ ಬಜೆಟ್ ನ್ನು ಲೋಕಸಭಾ ಚುನಾವಣೆಗೂ ಮುನ್ನ ಬಂದಿರುವ ಟ್ರೈಲರ್ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಈ ಬಜೆಟ್ ನಲ್ಲಿ ಎಲ್ಲ ವರ್ಗದ ಜನರನ್ನು ಕೂಡ ಪರಿಗಣಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ "ಮಧ್ಯಂತರ ಬಜೆಟ್ ಟ್ರೈಲರ್ ಇದ್ದ ಹಾಗೆ,ಲೋಕಸಭಾ ಚುನಾವಣೆಯ ನಂತರ ದೇಶವು ಸಮೃದ್ದಿಯತ್ತ ಸಾಗಲಿರುವ ಪಥವನ್ನು ಇದು ತೋರಿಸುತ್ತದೆ" ಎಂದು ತಿಳಿಸಿದರು. ಈ ಬಜೆಟ್ ಮಧ್ಯಮ ವರ್ಗದವರಿಂದ ಹಿಡಿದು ಕಾರ್ಮಿಕರು,ರೈತರು, ಮತ್ತು ಉದ್ದಿಮೆದಾರ ಅಭಿವೃದ್ದಿ ಮತ್ತು ನವ ಭಾರತದ ನಿರ್ಮಾಣಕ್ಕಾಗಿ ಇದು ಸಹಾಯಕವಾಗಲಿದೆ ಎಂದು ತಿಳಿಸಿದರು.ಇದೇ ಮಧ್ಯಮ ವರ್ಗ ಮತ್ತು ಉನ್ನತ ವರ್ಗಗಳು ನೀಡುವ ಉದಾರ ತೆರಿಗೆ ಹಣದಿಂದ ಹಲವಾರು ಉತ್ತಮ ಜನಕಲ್ಯಾಣ ಯೋಜನೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದರು.
ಪ್ರಧಾನ್ ಮಂತ್ರಿ ಕಿಸಾನ್ ಸಮೃದ್ದಿ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಈ ಯೋಜನೆ ಯಾರು 5 ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುತ್ತಾರೋ ಅಂತವರಿಗೆ ಇದು ಅನುಕೂಲವಾಗಲಿದೆ.ಆ ಮೂಲಕ ಸುಮಾರು 12 ಕೋಟಿ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.