ಹೈದರಾಬಾದ್ : ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ತೆಲಂಗಾಣ ಸರ್ಕಾರವು ಮಂಗಳವಾರ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ವಿಶೇಷ ರಜೆ ಘೋಷಿಸಿದೆ. ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ವಿಶೇಷ ಸಾಂದರ್ಭಿಕ ರಜೆಗಾಗಿ ಸರ್ಕಾರಿ ಆದೇಶವನ್ನು (GO) ಹೊರಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಹಿಳೆಯರಿಗೆ ಅಭಿನಂದನೆಗಳು:
ಮಹಿಳಾ ದಿನಾಚರಣೆಯ (Women's Day) ಸಂದರ್ಭದಲ್ಲಿ ಮಹಿಳೆಯರಿಗೆ ಶುಭಾಶಯ ಕೋರಿದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್), ರಾಜ್ಯ ಸರಕಾರ ವಿಶೇಷ ರಜೆ (Special Holiday) ಘೋಷಿಸಿ ಮಹಿಳೆಯರಿಗೆ ಗೌರವ ನೀಡುತ್ತಿದೆ ಎಂದರು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಗೃಹಿಣಿಯಾಗಿ ಮತ್ತು ಮಹಿಳೆಯಾಗಿ ಕುಟುಂಬದ ಬೆಳವಣಿಗೆಯಲ್ಲಿ ಮಹಿಳೆಯರು ವಹಿಸುವ ಪಾತ್ರ ಅತ್ಯಂತ ಮಹತ್ತರ ಮತ್ತು ತ್ಯಾಗ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ- International Women's Day 2022: ಭಾರತದಲ್ಲಿ ಎಲ್ಲಾ ಮಹಿಳೆಯರು ತಿಳಿದಿರಬೇಕಾದ 5 ನಾಗರಿಕ ಹಕ್ಕುಗಳು


ರಾಜ್ಯ ಸರ್ಕಾರ (State Govt) ಮಹಿಳೆಯರ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದೆ. ತುಳಿತಕ್ಕೊಳಗಾದ ವರ್ಗ, ದೀನದಲಿತರು ಮತ್ತು ರೈತರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಮಹಿಳೆಯರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ  ಎಂದು ಮುಖ್ಯಮಂತ್ರಿ ಹೇಳಿದರು.


10 ಲಕ್ಷ ತಾಯಂದಿರಿಗೆ ಕೆಸಿಆರ್ ಕಿಟ್ :
ರಾಜ್ಯ ಸರ್ಕಾರವನ್ನು ಮಹಿಳಾ ಬಂಧು ಎಂದು ಕರೆಯಲಾಗುತ್ತಿದ್ದು, ಇದು ತಮಗೆ ಅಪಾರ ಸಂತಸ ನೀಡುತ್ತದೆ. ತೆಲಂಗಾಣ ಸರ್ಕಾರ ರಚನೆಯಾದಾಗಿನಿಂದ 10 ಲಕ್ಷ ತಾಯಂದಿರಿಗೆ ಕೆಸಿಆರ್ ಕಿಟ್‌ಗಳ ಮೂಲಕ ಆರ್ಥಿಕ ಮತ್ತು ಇತರ ಪ್ರಯೋಜನಗಳನ್ನು ನೀಡಲಾಗಿದೆ . ಆರೋಗ್ಯ ಲಕ್ಷ್ಮಿ, ಅಮ್ಮ ವೋಡಿ, ವೃದ್ಧ ತಾಯಂದಿರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ  ಎಂದು ಕೆಸಿಆರ್ ಹೇಳಿದರು.


ಇದನ್ನೂ ಓದಿ- ಅಂತರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ


ಪ್ರತಿ ಮಹಿಳೆಯ ಸುರಕ್ಷತೆಗೆ ಒತ್ತು:
ಶೀ ತಂಡಗಳ ಮೂಲಕ ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ಭದ್ರತೆ ನೀಡಲಾಗಿದೆ. ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತೆಯರ ವೇತನವನ್ನೂ ಸರ್ಕಾರ ಹೆಚ್ಚಿಸಿದೆ. ಮಹಿಳೆಯರನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ  ತಿಳಿಸಿದ್ದಾರೆ.


(ಇನ್‌ಪುಟ್-IANS)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.