WhatsApp ಸ್ಟಿಕ್ಕರ್‌ಗಳ ಮೂಲಕ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕಳುಹಿಸಿ

International Women's Day 2022: ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ನಿಮ್ಮ ನೆಚ್ಚಿನ ಸ್ತ್ರೀಗೆ ವಿಶೇಷ ಭಾವನೆ ಮೂಡಿಸಲು ನೀವು ಬಯಸಿದರೆ, ಖಂಡಿತವಾಗಿಯೂ ಅವರಿಗೆ ಈ ದಿನದ ಶುಭಾಶಯಗಳನ್ನು WhatsApp ಸ್ಟಿಕ್ಕರ್‌ಗಳ ಮೂಲಕ ಕಳುಹಿಸಬಹುದು. WhatsApp Stickers ಅನ್ನು ಹೇಗೆ ಕಳುಹಿಸುವುದು ಎಂದು ತಿಳಿಯಲು ಮುಂದೆ ಓದಿ.

Written by - Yashaswini V | Last Updated : Mar 8, 2022, 07:23 AM IST
  • ನೀವು 2022 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಿಮ್ಮ ನೆಚ್ಚಿನ ಮಹಿಳೆಯರಿಗೆ ವಿಭಿನ್ನ ರೀತಿಯಲ್ಲಿ ವಿಶ್ ಮಾಡಲು ಬಯಸಿದರೆ , Whatsapp ಸ್ಟಿಕ್ಕರ್‌ಗಳನ್ನು ಕಳುಹಿಸುವುದು ತುಂಬಾ ವಿಶೇಷವಾಗಿರುತ್ತದೆ
  • WhatsApp ಸ್ಟಿಕ್ಕರ್‌ಗಳ ಮೂಲಕ ಅವರ ಕೊಡುಗೆಯನ್ನು ನೀವು ಪ್ರಶಂಸಿಸಬಹುದು.
  • ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ WhatsApp ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಕಳುಹಿಸುವುದು ಹೇಗೆ ಎಂದು ತಿಳಿಯೋಣ.
WhatsApp ಸ್ಟಿಕ್ಕರ್‌ಗಳ ಮೂಲಕ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕಳುಹಿಸಿ title=
Women's Day 2022 Whatsapp Stickers

International Women's Day 2022: ಇಂದು ಅಂದರೆ ಮಾರ್ಚ್ 8 ಅನ್ನು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ (International Women’s Day 2022) ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಉದ್ದೇಶವು ಸಮಾಜದಲ್ಲಿ ಮಹಿಳೆಯರಿಗೆ ಗೌರವವನ್ನು ನೀಡುವುದು ( Women's Day wishes ) ಮತ್ತು ಅವರ ಹಕ್ಕುಗಳನ್ನು ಉತ್ತೇಜಿಸುವುದು. ಮಹಿಳಾ ದಿನದ ಸಂದರ್ಭದಲ್ಲಿ, ನಿಮ್ಮ ಮಹಿಳಾ ಸಹೋದ್ಯೋಗಿ, ಮಹಿಳಾ ಸ್ನೇಹಿತರು, ತಾಯಿ, ಸಹೋದರಿ, ನಿಮ್ಮ ಮಡದಿ ಅಥವಾ ನಿಮ್ಮ ನೆಚ್ಚಿನ ಯಾವುದೇ ಸ್ತ್ರೀಗೆ WhatsApp ಸ್ಟಿಕ್ಕರ್‌ಗಳನ್ನು ಕಳುಹಿಸುವ ಮೂಲಕ ನೀವು ಈ ದಿನವನ್ನು ವಿಶೇಷ ರೀತಿಯಲ್ಲಿ (Happy Women’s Day Wishes) ಹಾರೈಸಬಹುದು. 

WhatsApp ಸ್ಟಿಕ್ಕರ್‌ಗಳ (WhatsApp Stickers) ಮೂಲಕ ಅವರ ಕೊಡುಗೆಯನ್ನು ನೀವು ಪ್ರಶಂಸಿಸಬಹುದು. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ WhatsApp ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಕಳುಹಿಸುವುದು ಹೇಗೆ ಎಂದು ತಿಳಿಯೋಣ.

ಇದನ್ನೂ ಓದಿ- International Women's Day: ಪ್ರತಿ ಮಹಿಳೆಯು ತಿಳಿದಿರಲೇಬೇಕಾದ 5 ಪ್ರಮುಖ ನಾಗರಿಕ ಹಕ್ಕುಗಳಿವು

ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ WhatsApp ಸ್ಟಿಕ್ಕರ್‌ಗಳನ್ನು ಕಳುಹಿಸಿ ವಿಶ್ ಮಾಡಲು ಈ ಸುಲಭ ಹಂತಗಳನ್ನು ಅನುಸರಿಸಿ: 
ಹಂತ 1-
ನೀವು 2022 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು(International Women’s Day 2022 ) ನಿಮ್ಮ ನೆಚ್ಚಿನ ಮಹಿಳೆಯರಿಗೆ ವಿಭಿನ್ನ ರೀತಿಯಲ್ಲಿ ವಿಶ್ ಮಾಡಲು ಬಯಸಿದರೆ , Whatsapp ಸ್ಟಿಕ್ಕರ್‌ಗಳನ್ನು ಕಳುಹಿಸುವುದು ತುಂಬಾ ವಿಶೇಷವಾಗಿರುತ್ತದೆ. 

ಹಂತ 2- ಇದಕ್ಕಾಗಿ, ಮೊದಲು ನಿಮ್ಮ WhatsApp ಖಾತೆಯನ್ನು ತೆರೆಯಿರಿ ಮತ್ತು ಚಾಟ್‌ಗಳಲ್ಲಿ ಒಂದಕ್ಕೆ ಹೋಗಿ. 

ಹಂತ 3- ಚಾಟ್‌ನಲ್ಲಿ ನೀಡಿರುವ ಸ್ಮೈಲಿ ಐಕಾನ್ ಮೇಲೆ ಕ್ಲಿಕ್ ಮಾಡಿ. ಕೆಳಭಾಗದಲ್ಲಿ ನೀವು ಸ್ಟಿಕ್ಕರ್‌ಗಳ ಆಯ್ಕೆಯನ್ನು ಇಲ್ಲಿ ಕಾಣಬಹುದು.

ಹಂತ 4- ಸ್ಟಿಕ್ಕರ್‌ಗಳ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ, ನೀವು ಮೊದಲು ಡೌನ್‌ಲೋಡ್ ಮಾಡಿದ ಆ ಸ್ಟಿಕ್ಕರ್‌ಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ. ನೀವು ಎಂದಿಗೂ ಸ್ಟಿಕ್ಕರ್ ಅನ್ನು ಡೌನ್‌ಲೋಡ್ ಮಾಡದಿದ್ದರೆ, ಆ ಪುಟವು ಖಾಲಿಯಾಗಿ ಕಾಣಿಸುತ್ತದೆ.

ಇದನ್ನೂ ಓದಿ- ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು!

ಹಂತ 5- ಅದರ ನಂತರ ಅಲ್ಲಿರುವ '+' ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಕೆಳಭಾಗದಲ್ಲಿರುವ Discover Stickers ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ.

ಹಂತ 6- ನೀವು ಟ್ಯಾಪ್ ಮಾಡಿದ ತಕ್ಷಣ, ನಿಮ್ಮನ್ನು ನೇರವಾಗಿ Google Play Store ಗೆ ಕರೆದೊಯ್ಯಲಾಗುತ್ತದೆ. ಹುಡುಕಾಟ ಪಟ್ಟಿಯಲ್ಲಿ ನೀವು ಮಹಿಳಾ ದಿನ 2022 ಎಂದು ಬರೆಯುವ ಮೂಲಕ ಹುಡುಕಬೇಕು.

ಹಂತ 7- ಇದರ ನಂತರ ನೀವು ಮಹಿಳಾ ದಿನಾಚರಣೆ 2022 (Women’s Day 2022) ಗಾಗಿ ಅನೇಕ ಸ್ಟಿಕ್ಕರ್‌ಗಳ ಆಯ್ಕೆಗಳನ್ನು ಪಡೆಯುತ್ತೀರಿ. ಈ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆಮಾಡಿ.

ಹಂತ 8- ಆ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿದ ನಂತರ ಓಪನ್ ಬಟನ್ ತೋರಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

ಹಂತ 9- ಅಪ್ಲಿಕೇಶನ್ ತೆರೆದ ತಕ್ಷಣ, ನೀವು ಹಲವಾರು ಪ್ಯಾಕ್‌ಗಳನ್ನು ನೋಡುತ್ತೀರಿ. ನೀವು ಬಳಸಲು ಬಯಸುವ ಪ್ಯಾಕ್ ಅನ್ನು ಕ್ಲಿಕ್ ಮಾಡಿ ಮತ್ತು WhatsApp ಗೆ ಸೇರಿಸು ಎಂಬ ಆಯ್ಕೆಗೆ ಹೋಗಿ ಅದನ್ನು WhatsApp ಗೆ ಸೇರಿಸಿ.

ಹಂತ 10- ಇದನ್ನು WhatsApp ನಲ್ಲಿ ಸೇರಿಸಿದ ತಕ್ಷಣ, ಈ ಪ್ಯಾಕ್‌ನ ಎಲ್ಲಾ ಸ್ಟಿಕ್ಕರ್‌ಗಳು ಸ್ಟಿಕ್ಕರ್‌ಗಳ ಆಯ್ಕೆಗೆ ಹೋಗುವ ಮೂಲಕ ನಿಮಗೆ ತೋರಿಸಲು ಪ್ರಾರಂಭಿಸುತ್ತವೆ. ಇದರ ನಂತರ, ಮಹಿಳಾ ದಿನಾಚರಣೆಯ (Women’s Day) ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಮಹಿಳೆಯರಿಗೆ ನೀವು ಶುಭ ಹಾರೈಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News